ಕನ್ನಡ ಗ್ರಾಹಕರಿಗೆ ಕನ್ನಡದಲ್ಲೇ ಜಾಹೀರಾತು


Team Udayavani, Aug 22, 2017, 12:08 PM IST

channapatna.jpg

ಚನ್ನಪಟ್ಟಣ: ಐಟಿ-ಬಿಟಿಯಲ್ಲಿ ಕನ್ನಡಿಗರಿಗೆ ಅವಕಾಶ ನೀಡಿ ಎಂದು ಬೇಡಿಕೆ ಇಟ್ಟು, ಐಟಿ-ಬಿಟಿ ಸೇರಿದ ಬಳಿಕ ಕನ್ನಡಿಗರೇ ಕನ್ನಡತನವನ್ನು ಮರೆಯುತ್ತಿರುವ ವೇಳೆ ಕನ್ನಡಿಗ ಟೆಕ್ಕಿಗಳ ತಂಡವೊಂದು ತಾವು ಸಿದ್ದಪಡಿಸಿರುವ ಆ್ಯಪ್‌ಅಚ್ಚಿ ಡಾಟ್‌ ಕಾಂ(appachhi.com)ಅನ್ನು ಕನ್ನಡದ ಮೂಲಕ ಪ್ರಚಾರ ಮಾಡಲು ಮುಂದಾಗಿ ಕನ್ನಡ ಪ್ರೇಮವನ್ನು ಮೆರೆಯುತ್ತಿದೆ.

ವಿವಿಧ ಕಂಪನಿಗಳು ತಮ್ಮ ಗ್ರಾಹಕರ ಸೇವೆಗಾಗಿ ತಮ್ಮದೇ ಆ್ಯಪ್‌ಗ್ಳನ್ನು ಸಿದ್ದಪಡಿಸಿ, ಆ್ಯಪ್‌ಗ್ಳನ್ನು ಬಳಸುವಂತೆ ಗ್ರಾಹಕರನ್ನು ಸೆಳೆಯಲು ವಿವಿಧ ಮಾರ್ಗಗಳನ್ನು ಹುಡುಕುತ್ತವೆ. ಅದರಂತೆ ತಮ್ಮ ತಂಡವೊಂದು ಅಭಿವೃದ್ಧಿಪಡಿಸಿದ ಆ್ಯಪ್‌ ಅನ್ನು ಪ್ರಚಾರ ಮಾಡಲು ಟೆಕ್ಕಿ “ಕನ್ನಡ ಮಾತನಾಡುವ ಗ್ರಾಹಕರು ಇರುವಾಗ ನಾವೇಕೆ ಕನ್ನಡದಲ್ಲಿ ಜಾಹೀರಾತು ಮಾಡಬಾರದು’ ಎಂಬ ನಾಮಫ‌ಲಕ ಹಿಡಿದು ಪಟ್ಟಣದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ಸಿಲ್ವರ್‌ ಜ್ಯುಬಿಲಿ ರಸ್ತೆ, ಬ್ರಿಗೇಡ್‌ ರಸ್ತೆ ಮುಂತಾದೆಡೆ ಹೋದಲೆಲ್ಲಾ ಈ ರೀತಿ ಬರಹವಿರುವ ನಾಮಫ‌ಲಕ ಹಿಡಿದು ಪ್ರಚಾರ ಮಾಡುವ ಮೂಲಕ ಕನ್ನಡ ಪ್ರೇಮ ಮೆರೆಯುತ್ತಿದ್ದಾನೆ.

 ಏನಿದು ಆ್ಯಪ್‌: ಜನರ ಕೈಯಲ್ಲಿ ವಿವಿಧ ಮಾದರಿಯ ಮೊಬೈಲ್‌ಗ‌ಳವೆ. ಮೊಬೈಲ್‌ಗ‌ಳಲ್ಲಿಯೇ ಸಕಲ ಮಾಹಿತಿಯನ್ನು ನೀಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಕೆಲವು ಮಾದರಿಯ ಮೊಬೈಲ್‌ಗ‌ಳಲ್ಲಿ ಕೆಲವು ಆ್ಯಪ್‌ಗ್ಳು ಕೆಲಸ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರಿಗೆ ಮಾಹಿತಿ ನೀಡುವುದು ಸಾಧ್ಯವಾಗುವುದಿಲ್ಲ. ಇದಕ್ಕೆ ಆ್ಯಪ್‌ಗ್ಳನ್ನು ಸಿದ್ದಪಡಿಸಿರುವ ಕಂಪನಿಗಳನ್ನು ಕೇಳಲಾಗುವುದಿಲ್ಲ. 

ಈ ಬಗ್ಗೆ ಐಟಿ-ಬಿಟಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿ ಸ್ವಂತವಾಗಿ ಏನಾದರೂ ಸಾಧಿಸುವ ಹಂಬಲ ಹೊಂದಿದ್ದ 15 ಮಂದಿಯ ತಂಡವೊಂದು ಸಂಶೋಧನೆ ನಡೆಸಿದಾಗ ಹುಟ್ಟಿಕೊಂಡಿದ್ದು ಆ್ಯಪ್‌ಅಚ್ಚಿ ಡಾಟ್‌ಕಾಂ.  ಕೇವಲ ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಿ ಆ್ಯಪ್‌ಗ್ಳಲ್ಲಿನ ದೋಷಗಳನ್ನು ಪತ್ತೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ಕಲ್ಪಿಸಿ ಕಂಪನಿಗಳು ಮತ್ತು ಗ್ರಾಹಕರ ಬಾಂಧ‌ವ್ಯವನ್ನು ಗಟ್ಟಿಗೊಳಿಸುವುದೇ ಕೆಲಸವಾಗಬಾರದು ಎನಿಸಿದಾಗ ತಂಡಕ್ಕೆ ಕಾಣಿಸಿದ್ದು ಇಂಗ್ಲಿಷ್‌ ಸಂಸ್ಕೃತಿಗೆ ಬದಲಾಗುತ್ತಿರುವ ಯುವ ಜನತೆ. ಆಗ ಕನ್ನಡ ಪ್ರೇಮವನ್ನು ಬೆಳೆಸಲು ಪರ್ಯಾಯ ಮಾರ್ಗವನ್ನು ಹುಡುಕಿದಾಗ ಬಂದ ಐಡಿಯಾ ಕನ್ನಡ ಗ್ರಾಹಕರಿರುವಾಗ ಕನ್ನಡದಲ್ಲೇ ಪ್ರಚಾರ ಮಾಡುವುದು. 

ವಿವಿಧ ಸಂಸ್ಥೆಗಳು ಗ್ರಾಹಕರಿಗೆ ನೀಡಿರುವ ಆ್ಯಪ್‌ಗ್ಳು ಕೆಲವು ಮೊಬೈಲ್‌ಗ‌ಳಲ್ಲಿ ಸ್ಪಂದಿಸುವುದಿಲ್ಲ. ಆ್ಯಪ್‌ನಲ್ಲಿನ ದೋಷವನ್ನು ಪತ್ತೆ ಹಚ್ಚಿ ಆ್ಯಪ್‌ ಬಿಲ್ಡ್‌ಗಳಿಗೆ ವಿವರಿಸಿ ಅದನ್ನು ಪರಿಹರಿಸುತ್ತೇವೆ. ಬೇರೆಡೆ ದೋಷದ ವರದಿ ನೀಡಲು ವಾರಗಳ ಸಮಯ ಪಡೆಯುತ್ತಾರೆ. ಆದರೆ ಆ್ಯಪ್‌ಅಚ್ಚಿ ಡಾಟ್‌ ಕಾಂ.ನಲ್ಲಿ ದೇಶದಲ್ಲಿ ಇದವರೆಗೆ ಹೊರಬಂದಿರುವ ಆ್ಯಪ್‌ಗ್ಳಲ್ಲಿನ ದೋಷಗಳನ್ನು ಕಂಡು ಹಿಡಿದು ಕೇವಲ 15 ನಿಮಿಷದಲ್ಲಿ ಆ ದೋಷವನ್ನು ಪರಿಹರಿಸಲಾಗುವುದು ಎಂದು ಆ್ಯಪ್‌ ಸಿಇಒ ಪ್ರದೀಪ್‌ ವಿವರಿಸುತ್ತಾರೆ.

ಕನ್ನಡವೇ ಮುಖ್ಯ: ಇಂದು ವಿದೇಶಿ ಮತ್ತು ಸ್ವದೇಶಿ ಕಂಪನಿಗಳು ವಿವಿಧ ಆ್ಯಪ್‌ಗ್ಳನ್ನು ಸಿದ್ದಪಡಿಸಿ ಅದರ ಪ್ರಯೋಜನ ಪಡೆಯುವಂತೆ ಇಂಟರ್‌ನೆಟ್‌ ಮೂಲಕ ಪ್ರಚಾರ ಮಾಡುತ್ತಾರೆ. ಆದರೆ ಯಾವುದೇ ಕಂಪನಿಯ ಆ್ಯಪ್‌ಗ್ಳನ್ನು ಹೆಚ್ಚಿನದಾಗಿ ಬಳಸುವುದು ನಮ್ಮ ಕನ್ನಡಿಗರೇ, ಈಗಿರುವಾಗ ಕನ್ನಡಿಗರಿಗೆ ಕನ್ನಡದಲ್ಲೇ ಜಾಹೀರಾತು ಪ್ರಚಾರ ಮಾಡುವ ಅವರ ಆ್ಯಪ್‌ದೋಷಗಳ ಬಗ್ಗೆ ಮೊದಲು ಗ್ರಾಹಕರ ಮೂಲಕವೇ ಫೇಸ್‌ಬುಕ್‌ ಮತ್ತು ವ್ಯಾಟ್ಸ್‌ ಆ್ಯಪ್‌ ಮೂಲಕ ತಿಳಿಸಲಾಗುತ್ತದೆ ಎಂದು ಆ್ಯಪ್‌ ಅಚ್ಚಿ ಡಾಟ್‌ಕಂ ನ ಮಾರ್ಕೆಟಿಂಗ್‌ ಪ್ರತಿನಿಧಿ ಜನಾರ್ದನ್‌ ವಿವರಿಸುತ್ತಾರೆ.

ಇಂಗ್ಲಿಷ್‌ ಬಿಟ್ಟು ಕನ್ನಡದಲ್ಲಿ ತಮ್ಮ ಆ್ಯಪ್‌ ಪ್ರಚಾರ ಮಾಡುತ್ತಿರುವ ಪಟ್ಟಣದ ಜನಾರ್ದನ್‌ ಮೊದಮೊದಲು ಮುಜುಗರದಿಂದಲೇ ಕನ್ನಡದಲ್ಲಿ ಪ್ರಚಾರ ಮಾಡಲು ಆರಂಭಿಸಿದರು. ಇವರ ಪ್ರಯತ್ನಕ್ಕೆ ಅವರ ಸ್ನೇಹಿತರು, ಅವರ ಸ್ನೇಹಿರು, ಕನ್ನಡಾಭಿಮಾನಿಗಳು, ಕಾಲೇಜು ಯುವಕರು ಸೇರಿದಂತೆ ವಿವಿಧ ಸಂಘಟನೆಗಳು ವಿವಿಧ ಸಂಘ-ಸಂಸ್ಥೆಗಳ ಬೆಂಬಲ ದೊರೆತಿದ್ದು, ಇಂದು ಮತ್ತಷ್ಟು ಉತ್ಸುಕತೆಯಿಂದ ಪ್ರಚಾರಕ್ಕೆ ತೊಡಗಿ, ಕನ್ನಡತನವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಎಲ್ಲರ ಪ್ರಸಂಶೆಗೆ ಪಾತ್ರವಾಗಿದೆ.

ತಮ್ಮ ಆ್ಯಪ್‌ಅಚ್ಚಿ ಡಾಟ್‌ ಕಾಂನಲ್ಲಿ ಪ್ರಚಾರಕ್ಕೆ ಆರ್ಥಿಕ ಸಮಸ್ಯೆ ಎದುರಾಗ ಕನ್ನಡ ಪ್ರಚಾರದ ಬಗ್ಗೆ ಚಿಂತನೆ ನಡೆಸಿದೆವು. ಇದಕ್ಕೆ ಸಂಪೂರ್ಣ ಬೆಂಬಲ ದೊರೆತು ಹಲವು ಆ್ಯಪ್‌ಗ್ಳ ಕಂಪನಿ ಬಿಲ್ಡ್‌ಗಳು ತಮ್ಮ ಆ್ಯಪ್‌ನ ದೋಷ ಪರಿಹರಿಸಿಕೊಂಡಿದ್ದಾರೆ.         
-ಪ್ರದೀಪ್‌, ಆ್ಯಪ್‌ಅಚ್ಚಿ ಡಾಟ್‌ ಕಾಂ.

ಇಂದು ರಾಜ್ಯದಲ್ಲಿ ಕನ್ನಡತನ ಮರೆಯಾಗಿದೆ. ಎಲ್ಲೆಲ್ಲೂ ಪರಭಾಷೆ ವ್ಯಾಮೋಹ ಹೆಚ್ಚಾಗುತ್ತಿದೆ. ಈ ನಡುವೆ ತಮ್ಮ ಸಂಸ್ಥೆಯ ಆ್ಯಪ್‌ನ ಪ್ರಚಾರವನ್ನು ಕನ್ನಡದಲ್ಲಿ ಪ್ರಚಾರ ಮಾಡಲು ಮುಂದಾಗಿರುವ ಪಟ್ಟಣದ ಯುವಕನ ಕನ್ನಡ ಪ್ರೇಮ ಶ್ಲಾಘನೀಯ. 
-ರಮೇಶ್‌ಗೌಡ, ರಾಜಾಧ್ಯಕ್ಷರು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ.

* ಸಿ.ಎನ್‌.ವೆಂಕಟೇಶ್‌

ಟಾಪ್ ನ್ಯೂಸ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.