ಜಾನಪದ ಸಂಭ್ರಮ-2020 ಬಗ್ಗೆ ಅನವಶ್ಯಕ ಟೀಕೆ
Team Udayavani, Nov 21, 2020, 2:35 PM IST
ರಾಮನಗರ: ಜಿಲ್ಲೆಯಲ್ಲಿ 4000 ಅಧಿಕ ಕಲಾವಿದರಿದ್ದಾರೆ. ಎಲ್ಲಾ ಕಲಾವಿದರಿಗೂ ಏಕಕಾಲದಲ್ಲಿ ಅವಕಾಶ ಕಲ್ಪಿಸಲು ಸಾಧ್ಯ ವಾಗುವುದಿಲ್ಲ. ಈ ಹಿಂದೆ ನಡೆದ ಕಾರ್ಯಕ್ರಮಗಳಲ್ಲಿ ಅವಕಾಶ ಪಡೆದ ಕಲಾವಿದರನ್ನು ಹೊರತು ಪಡಿಸಿ ಜಾನಪದ ಸಂಭ್ರಮ 2020 ಕಾರ್ಯಕ್ರಮದಲ್ಲಿ ಉಳಿದ ಕಲಾವಿದರ ಪೈಕಿ ಕೆಲವರಿಗೆ ಅವಕಾಶ ಮಾಡಿಕೊಡಲಾಗಿದೆ, ಈ ವಿಚಾರದಲ್ಲಿ ಅನವಶ್ಯಕ ಟೀಕೆಗಳು ವ್ಯಕ್ತವಾಗಿವೆ ಎಂದು ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಜಾನಪದ ಸಂಭ್ರಮ 2020 ಕಾರ್ಯಕ್ರಮದ ಬಗ್ಗೆ ಜಿಲ್ಲಾ ಜಾನಪದ ಕಲಾವಿದರ ಬಳಗ ವ್ಯಕ್ತಪಡಿಸಿದ ಆಕ್ಷೇಪಗಳಿಗೆ ಪ್ರತಿಯಾಗಿ ಈ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಮನವಿಗೆ ಸ್ಪಂದನೆ: ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಸಂಚಾಲಕ ಪಾರ್ಥಸಾರಥಿ, ಕೋವಿಡ್ ಕಾರಣ ಜಾನಪದ ಕಲಾವಿದರಿಗೆ ಪ್ರದರ್ಶನ ಅವಕಾಶ ಕೊಡಿಸುವಂತೆ ಮಾಡಿಕೊಂಡ ಮನವಿಗೆ ಜಾನಪದ ಅಕಾಡೆಮಿಯ ಸದಸ್ಯ ಜೋಗಿಲ ಸಿದ್ದರಾಜು ಸ್ಪಂದಿಸಿದ್ದಾರೆ ಎಂದರು.
ಜಾನಪದ ಕಲಾವಿದರುಯಾರು ಲಕ್ಷಾಧೀಶ್ವರರು ಅಲ್ಲ, ತುತ್ತಿನಚೀಲ ತುಂಬಿಸಲು ಕಲಾಪ್ರದರ್ಶನ ಅಗ್ಯತವಾಗಿದೆ. ಆದರೆ ಕೋವಿಡ್ ಕಾರಣ ಬಹುತೇಕ ಕಲಾವಿದರಿಗೆ ಪ್ರದರ್ಶನ ಭಾಗ್ಯವಿಲ್ಲದೆ, ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಹೋರಾಟ ರೂಪಿಸಬೇಕು: ತಾಲೂಕಿನಲ್ಲಿ ತಮಟೆ, ಪೂಜೆ, ಪಟ ಮತ್ತು ವೀರಗಾಸೆಯಲ್ಲಿ 1100 ಕಲಾದರಿದ್ದಾರೆ. ಅವರಿಗೆ ಗುರುತಿನ ಚೀಟಿ ಇಲ್ಲ, ಸರ್ಕಾರ ಇವರ ರಕ್ಷಣೆಗೆ ಬರಬೇಕು. ಅಕಾಲಿಕಮರಣ ಹೊಂದುವ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡುವ ಯೋಜನೆ ಸರ್ಕಾರ ರೂಪಿಸಬೇಕು. ಇಂತಹ ಹೋರಾಟಗಳಿಗೆ ಕಲಾವಿದರು ಒಗ್ಗೂಡಿಸಿ ಹೋರಾಟ ರೂಪಿಸಬೇಕು ಎಂದರು.
ಆರೋಪ ಮಾಡುವುದು ಹಾಸ್ಯಸ್ಪದ: ಕಲಾವಿದೆ ಸಾವಿತ್ರಿಬಾಯಿ ಮಾತನಾಡಿ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಕಷ್ಟು ನೆರವು ಪಡೆದ ಕಲಾವಿದರೇ, ಯುವ ಕಲಾವಿದರ ಮೇಲೆ ಆರೋಪ ಮಾಡುವುದು ಹಾಸ್ಯಸ್ಪದ ಎಂದು ಟೀಕಿಸಿದರು.
ಸುಳ್ಳು ಆರೋಪ ಮಾಡಬಾರದು: ಮತ್ತೂಬ್ಬ ಕಲಾವಿದ ಗೋವಿಂದರಾಜು ಮಾತನಾಡಿ, ಅಕಾಡೆಮಿ ಸದಸ್ಯ ಉತ್ತರ ಕರ್ನಾಟಕ ಭಾಗಕ್ಕೆ ನಿಗದಿಯಾಗಿದ್ದ ಕಲಾ ಪ್ರದರ್ಶನ ರಾಮನಗರ ಜಿಲ್ಲೆಯಲ್ಲಿ ಆಯೋಜನೆಯಾಗಿದೆ. ತಮಗೆ ಅವಕಾಶ ಸಿಗಲಿಲ್ಲ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ, ಇದರ ಬದಲು ಹಿರಿಯರು ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡಿ ಕಲೆ ಉಳಿಸಲು ಮುಂದಾಗಲಿ ಎಂದು ಮನವಿ ಮಾಡಿದರು.
ಕೋವಿಡ್ ಸಂಕಷ್ಟ ಸಮಯದಲ್ಲಿ ಸರ್ಕಾರದ ಪರಿಹಾರ ಧನ 2000 ರೂ. ಅರ್ಹ ಕಲಾವಿದರಿಗೆ ತಲುಪಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಡೊಳ್ಳು ಕುಣಿತ ಕಲಾವಿದೆ ಗೀತಾ, ಕಲಾವಿದರುಗಳಾದ ಬಸವರಾಜು, ರಾಜು, ಅಪ್ಪಾಜಿ, ಗುಂಡ, ಶ್ರೀನಿವಾಸ್, ದರ್ಶನ್, ಪ್ರಸನ್ನ, ದಿನೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.