Narega: ನರೇಗಾ ಪ್ರಗತಿಗೆ ಜಿಲ್ಲೆಯಲ್ಲಿ ವಿನೂತನ ಅಭಿಯಾನ
Team Udayavani, Oct 7, 2023, 10:30 AM IST
ರಾಮನಗರ: ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಜಿಲ್ಲೆಯ ಸಾರ್ವ ಜನಿಕರಿಗೆ ಅರಿವು ಮೂಡಿಸಿ ಹೆಚ್ಚು ಪರಿಣಾಮಕಾರಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಪಂ ಇದೀಗ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆ ಯೆಡೆಗೆ ಅಭಿಯಾನ ಆಯೋಜಿಸಿದೆ.
ಹೌದು.., 2024-25ನೇ ಸಾಲಿನ ನರೇಗಾ ಆಯವ್ಯಯ ಸಿದ್ಧಪಡಿಸಲು ಮುಂದಾಗಿ ರುವ ಜಿಪಂ ಒಂದು ತಿಂಗಳ ಕಾಲ ಜಿಲ್ಲೆಯ 126 ಗ್ರಾಪಂಗಳ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಿ ಪ್ರತಿಮನೆಗೂ ಯೋಜನೆಯ ಬಗ್ಗೆ ಮಾಹಿತಿ ತಲುಪಿಸುವ ಮೂಲಕ ಯೋಜನೆ ನೂರಕ್ಕೆ ನೂರಷ್ಟು ಫಲಾನುಭವಿಗಳಿಗೆ ಲಾಭವಾಗುವಂತೆ, ಗ್ರಾಮೀಣಾಭಿವೃದ್ಧಿಗೆ ನರೇಗಾ ಯೋಜನೆ ಸಕಹಾರಿಯಾಗುವಂತೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.
ಅಭಿಯಾನದ ಮಹತ್ವ: ಜಿಲ್ಲೆಯ 126 ಗ್ರಾಪಂ ವ್ಯಾಪ್ತಿಯಲ್ಲಿ ಪಂಚಾಯ್ತಿ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಗ್ರಾಪಂ ಸಿಬ್ಬಂದಿ ಗಳು ಪ್ರತಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ. 1 ತಿಂಗಳ ಕಾಲ ನಿರಂತರವಾಗಿ ನಡೆಯಲಿರುವ ಈ ಅಭಿಯಾನ ಇಡೀ ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಮನೆಗೆ ನರೇಗಾ ಯೋಜನೆಯ ಬಗ್ಗೆ ಮಾಹಿತಿ ತಲುಪಿಸಲಿದೆ. ಇದ ರೊಂದಿಗೆ ಜಾಗೃತಿ ವಾಹನದ ಮೂಲಕ ಧ್ವನಿವರ್ಧಕರ ಮೂಲಕ ಸಹ ಪ್ರಚಾರ ಮಾಡಲಾಗುತ್ತದೆ. ಇನ್ನು ಅಭಿಯಾನದ ಮೂಲಕ ಕೆಲಸ ಮತ್ತು ಕಾಮಗಾರಿಗಳ ಬೇಡಿಕೆಯನ್ನು ಜನ ರಿಂದ ಸಂಗ್ರಹಿಸಲಾಗುತ್ತದೆ, ಜಾಗೃತಿ ವಾಹನದ ಮೂಲಕ ಗ್ರಾಮಸ್ಥರಿಗೆ ಸ್ವ-ಸಹಾಯ ಸಂಘಗಳಲ್ಲಿ ಸಿಗುವ ಸೌಲಭ್ಯ ಮತ್ತು ಜಲ ಸಂಜೀವಿನಿ ಕಾರ್ಯಕ್ರಮದ ಮಹತ್ವದ ಬಗ್ಗೆ ಪ್ರಚಾರ ಮಾಡಲಾಗುತ್ತದೆ.
ನರೇಗಾ ಯೋಜನೆಯಡಿ ದೊರೆಯುವ ಕೂಲಿ ಮೊತ್ತ, ಗಂಡು ಹೆಣ್ಣಿಗೆ ಸಮಾನ ಕೂಲಿ. ಒಂದು ದಿನ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲ ಸದ ಅವ. ಯೋಜನೆಯಡಿ ದೊರೆಯುವ ವೈಯಕ್ತಿಕ ಸಾಲಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50ರಷ್ಟು ರಿಯಾಯತಿ ಸೇರಿದಂತೆ ನರೇಗಾ ಯೋಜನೆಯಡಿ ಲಭ್ಯವಿ ರುವ ಎಲ್ಲಾ ಮಾಹಿತಿಯನ್ನು ಜನತೆಗೆ ತಿಳಿಸು ವುದು ಮತ್ತು ಅವರಿಂದ ಆಗಬೇಕಾಗಿರುವ ಬೇಡಿಕೆ ಯನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ.
ರೈತರಿಗೆ ಮಾಹಿತಿ: ನರೇಗಾ ಯೋಜನೆಯ ಮಾರ್ಗಸೂಚಿ ಯಂತೆ ಒಟ್ಟು ವೆಚ್ಚದ ಶೇ.60 ರಷ್ಟುನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಕಾಮಗಾರಿಗೆ ಮೀಸಲಿರಿಸಬೇಕು ಎಂಬ ನಿಯಮ ವಿರುವ ಕಾರಣ ಈ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ಯೋಜನೆಯ ಮೂಲಕ ಕೈಗೊಳ್ಳಲಾಗಿದೆ. ಕೃಷಿಕರಿಗೆ ಲಭ್ಯವಾ ಗುವ ವೈಯಕ್ತಿಕ ಕಾಮಗಾರಿಯಗಳ ವಿವರ, ಫಲಾನುಭವಿಗಳ ಆಯ್ಕೆ ಮಾಹಿತಿ.
ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಬಿಪಿಎಲ್ ಪಡಿತರ ಚೀಟಿದಾರರನ್ನು ಗುರುತಿಸಿ ಯೋಜನೆ ತಲುಪಿಸಲಾಗುವುದು. ಇನ್ನು ಪ್ರತಿ ಕುಟುಂಬಕ್ಕೆ ಜೀವಿತಾವಧಿಯಲ್ಲಿ 2.50 ಲಕ್ಷರೂ. ಅನುದಾನ ಮಿತಿಗೊಳಿಸಿ, ಯೋಜನೆಯಡಿ ವೈಯಕ್ತಿಕ ಕಾಮಗಾರಿ ನೀಡಲಿದ್ದು, ಈ ಬಗ್ಗೆ ಅಭಿಯಾನದ ಮೂಲಕ ಅರಿವು ಮೂಡಿಸ ಲಾಗುವುದು.
ಮಾಸಾಂತ್ಯಕ್ಕೆ ಗ್ರಾಮ ಸಭೆ: ಅ.30ರಂದು ಗ್ರಾಮ ಸಭೆಯನ್ನು ಆಯೋಜಿಸಲಿದ್ದು, ಗ್ರಾಮಸಭೆಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಳ್ಳ ಬೇಕಿದೆ. ಗ್ರಾಮಸಭೆಗೆ ಮುನ್ನಾ ಜಿಲ್ಲೆಯಾದ್ಯಂತ ಅಭಿಯಾನವನ್ನು ನಡೆಸಿ ಸಾರ್ವಜನಿಕರಲ್ಲಿ ಜಾಗƒತಿ ಮೂಡಿಸಲಾಗುವುದು. ಗ್ರಾಮಸಭೆ ಯಲ್ಲಿ ಚುನಾಯಿತ ಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು, ತಾಂತ್ರಿಕ ಸಹಾಯಕರು ಪಾಲ್ಗೊಂಡು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕಾರ್ಯ ಮಾಡಲಿದ್ದಾರೆ.
ಜಿಲ್ಲೆಯ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡುವ ಉದ್ದೇಶ ದಿಂದ ಈ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಿದ್ದು, ಗ್ರಾಪಂ ಸಿಬ್ಬಂದಿಯ ಜೊತೆಗೆ ಸಾರ್ವ ಜನಿಕರು ಪಾಲ್ಗೊಳ್ಳುವ ಮೂಲಕ ಅಭಿಯಾನ ಯಶಸ್ವಿಗೆ ಸಹಕರಿಸಬೇಕು. ಜಿಲ್ಲೆಯಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಗೊಳಿಸಲು ಈ ಅಭಿಯಾನ ಸಹಕಾರಿ ಯಾಗಿದ್ದು, ಸಾರ್ವಜನಿಕರು, ಚುನಾ ಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ಗಳು ಇದಕ್ಕೆ ಕೈ ಜೋಡಿಸುವ ಮೂಲಕ ಯಶಸ್ವಿಗೆ ಸಹಕರಿಸಿ. –ದಿಗ್ವಿಜಯ್‌ಬೋಡ್ಚೆ, ಸಿಇಓ, ಜಿಪಂ, ರಾಮನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.