ರಾಷ್ಟ್ರೀಯ ಹೆದ್ದಾರಿಯಲ್ಲಿ ಎಎನ್‌ಪಿಆರ್ ಕ್ಯಾಮೆರಾ ಕಣ್ಣು!
Team Udayavani, Jul 18, 2023, 1:46 PM IST
ರಾಮನಗರ: ಬೆಂ-ಮೈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾವ ಹಿಸಲು ಇದೀಗ ಎಕ್ಸ್‌ಪ್ರೆಸ್ ಹೈವೆಗೆ ಕ್ಯಾಮ ರಾ ಕಣ್ಗಾವಲಿರಿಸಲು ಎನ್‌ಎಚ್‌ಎಐ ಅಧಿ ಕಾರಿಗಳು, ಜಿಲ್ಲಾ ಪೊಲೀಸರು ಮುಂದಾಗಿ ದ್ದಾರೆ. ಇದಕ್ಕಾಗಿ 24 ಕಡೆ ಎಎನ್‌ಪಿಆರ್ ಕ್ಯಾಮೆರಾ ಅಳವಡಿಸಲಿದ್ದಾರೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವಾಗ 12 ಕಡೆ, ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ 12 ಕಡೆ ದಿನದ 24 ತಾಸು ಈ ಕ್ಯಾಮೆರಾ ಕಾರ್ಯನಿರ್ವಹಿಸಲಿದ್ದು, ಹೆದ್ದಾರಿ ವಾಹನ ಮೇಲೆ ನಿಗಾವಹಿಸಲಿವೆ. ಇನ್ನು ಜಿಲ್ಲಾ ಪೊಲೀಸ್ ಮುಖ್ಯ ಕಚೇರಿಯಲ್ಲಿ ಈ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಗಳನ್ನು ವೀಕ್ಷಣೆ ಮಾಡಲಾಗುತ್ತದೆ. ಇದರಿಂದಾಗಿ ಹೆದ್ದಾರಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆ ಮೇಲೆ ಪೊಲೀಸರು ಹದ್ದಿನಕಣ್ಣಿರಿಸಲು ಸಹಕಾರಿಯಾಗಲಿದೆ.
ಪ್ರತಿ ವಾಹನದ ಮಾಹಿತಿ: ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವ ಪ್ರತಿ ವಾಹನವನ್ನು ಸೆರೆ ಹಿಡಿಯುವ ಕ್ಯಾಮೆರಾ, ನಂಬರ್ ಪ್ಲೇಟ್ ಸಮೇತ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿ ಸರ್ವರ್‌ಗೆ ಕಳುಹಿಸುತ್ತದೆ. ಪ್ರತಿ ದೃಶ್ಯಗಳು ಸರ್ವರ್‌ನಲ್ಲಿ ದಾಖಲಾಗಿರುತ್ತದೆ. ಹೆದ್ದಾರಿಯಲ್ಲಿ ಅಪ ಘಾತ ನಡೆದಾಗ, ಡಕಾಯಿತಿ ಮೊದ ಲಾದ ಘಟನೆ ನಡೆದಾಗ, ವಾಹನ ಪದೇ ಪದೆ ಲೈನ್ ಕ್ರಾಸ್ ಮಾಡಿದಾಗ ಈ ಕ್ಯಾಮೆರಾ ದೃಶ್ಯಗಳನ್ನು ಬಳಸಿ ಪ್ರಕರಣ ಬೇಧಿಸಲು ಪೊಲೀಸರಿಗೆ ಸಹಕಾರಿಯಾಗಲಿದೆ. ಅಪಘಾತ ಮಾಡಿ ಪರಾರಿಯಾಗುತ್ತಿರುವ ವಾಹನಗಳನ್ನು ಪತ್ತೆ ಹಚ್ಚಲು ಕ್ಯಾಮರಾಗಳು ಉಪಯುಕ್ತವಾಗಲಿವೆ.
2 ಲಕ್ಷ ರೂ. ಮೌಲ್ಯ: ಹೆದ್ದಾರಿಯಲ್ಲಿ ಅಳ ವಡಿಸುತ್ತಿರುವ ಎಎನ್‌ಪಿಆರ್ ಕ್ಯಾಮೆರಾ ದುಬಾರಿ ಬೆಲೆಯದ್ದಾಗಿದ್ದು, ಪ್ರತಿ ಕ್ಯಾಮೆರಾಗೂ 2 ಲಕ್ಷ ರೂ. ವೆಚ್ಚವಾಗಲಿದೆ. ಇನ್ನು ಈ ಕ್ಯಾಮರಾಗಳಿಗೆ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗುವುದು. ಕತ್ತಲಲ್ಲೂ ಸ್ಪಷ್ಟವಾಗಿ ದೃಶ್ಯಗಳನ್ನು ಈ ಕ್ಯಾಮೆರಾಗಳು ಸೆರೆ ಹಿಡಿ ಯಲಿದ್ದು, ವೇಗವಾಗಿ ಹಾಗೂ ಕರಾರುವ ಕ್ಕಾಗಿ ದೃಶ್ಯಗಳನ್ನು ಸೆರೆ ಹಿಡಿಯುವುದು ಈ ಕ್ಯಾಮೆರಾಗಳ ವಿಶೇಷತೆ.
30 ಕ್ಯಾಮೆರಾ ಬೇಕೆಂದು ವರದಿ: ಇನ್ನು ಜಿಲ್ಲೆಯಲ್ಲಿ ಕುಂಬಳಗೋಡಿನಿಂದ ನಿಡಘಟ್ಟವರೆಗೆ 56 ಕಿ.ಮೀ.ದೂರದ ಮೊದಲ ಹಂತದ ಎಕ್ಸ್‌ಪ್ರೆಸ್‌ವೇನಲ್ಲಿ 18 ಬ್ಲಾಕ್‌ಸ್ಪಾಟ್‌ಗಳನ್ನು ಪೊಲೀಸ್ ಇಲಾಖೆ ಗುರುತಿಸಿದ್ದು, 30 ಎಎನ್‌ಪಿಆರ್ ಕ್ಯಾಮೆರಾ ಬೇಕು ಎಂದು ವರದಿ ನೀಡಿತ್ತು. ಆದರೆ, ಎನ್‌ಎಚ್ ಎಐ ವತಿಯಿಂದ 24 ಕ್ಯಾಮರಾ ಅಳವಡಿಸುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆ ಅತ್ಯವಶ್ಯಕವೆನಿಸಿರುವ ಸ್ಥಳ ಗುರುತಿಸಿ ಕ್ಯಾಮೆರಾ ಅಳವಡಿಸಲಿದೆ.
10 ದಿನದಲ್ಲಿ 2 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿರುವ ಜಿಲ್ಲಾ ಪೊಲೀಸ್ ಇಲಾಖೆ, ಕಳೆದ 10 ದಿನಗಳಲ್ಲಿ 2161 ಪ್ರಕರಣ ದಾಖಲಿಸಿದ್ದು, ಭರ್ಜರಿ ದಂಡ ವಸೂಲಿ ಮಾಡಿದೆ. ಜು.6 ರಿಂದ ಎಕ್ಸ್‌ಪ್ರೆಸ್ ವೇನಲ್ಲಿ ರಾಡಾರ್‌ಗನ್‌ನೊಂದಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ದಂಡ ವಿಧಿಸಲು ಆರಂಭಿಸಿತ್ತು. ಇದುವರೆಗೆ ಜಿಲ್ಲೆಯ 4 ಠಾಣೆಗಳಿಂದ 16 ಲಕ್ಷ ರೂ.ಗಳಿಗೂ ಹೆಚ್ಚು ದಂಡವನ್ನು ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಂದ ವಸೂಲಿ ಮಾಡಲಾಗಿದೆ.ಜಿಲ್ಲೆಯಲ್ಲಿ ಅತಿವೇಗದ ಚಾಲನೆ 804, ಸೀಟ್‌ಬೆಲ್ಟ್ ಧರಿಸದಿರುವುದು 181, ಹೆಲ್ಮೆಟ್ ರಹಿತ ಪ್ರಯಾಣ 247, ಲೈನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 553 ಪ್ರಕರಣ ದಾಖಲಿಸಲಾಗಿದೆ.
ಏನಿದು ಎಎನ್‌ಪಿಆರ್ ಕ್ಯಾಮೆರಾ?: ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಾರ್ಡ್‌ರ್ ಎಂಬ ಎಎನ್‌ಪಿಆರ್‌ನ ವಿಸ್ತೃತ ರೂಪ. ಹೆದ್ದಾರಿಯಲ್ಲಿ ಅಳವಡಿಸುವ ಇತರೆ ಕ್ಯಾಮರಾಗಳು ಹೆದ್ದಾರಿಯಲ್ಲಿ ಸಂಚರಿಸುವ ನಂಬರ್‌ಪ್ಲೇಟ್ ಅನ್ನು ತೀರಾ ಸನಿಹಕ್ಕೆ ಬರುವವರೆಗೆ ಗುರುತಿಸುವುದಿಲ್ಲ. ಆದರೆ, ಈ ಕ್ಯಾಮೆರಾ ಕಾರಿನ ನಂಬರ್‌ಪ್ಲೇಟ್ ಅನ್ನು ಸ್ಕ್ಯಾನ್ ಮಾಡಿ ರೆಕಾರ್ಡ್ ಮಾಡುತ್ತದೆ. ನಂಬರ್‌ಪ್ಲೇಟ್‌ನಲ್ಲಿರುವ ಐಎನ್‌ಡಿ ಬೋರ್ಡ್‌ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್‌ಮಾಡಿ ಅದು ಡಾಟಾವನ್ನು ಸರ್ವರ್‌ಗೆ ಕಳುಹಿಸಿಕೊಡುತ್ತದೆ. ಈಗಾಗಲೇ ದೊಡ್ಡದೊಡ್ಡ ನಗರ, ಪ್ರಮುಖ ಎಕ್ಸ್‌ಪ್ರೆಸ್ ವೇಗಳಲ್ಲಿ ಈ ರೀತಿಯ ಕ್ಯಾಮೆರಾ ಅಳವಡಿಸಿ ಹೆದ್ದಾರಿ ಮೇಲೆ ಪೊಲೀಸ್ ಇಲಾಖೆ ನಿಗಾವಹಿಸುತ್ತದೆ.
ಕ್ಯಾಮೆರಾಗಳನ್ನು ಎಲ್ಲೆಲ್ಲಿ ಅಳವಡಿಸಬೇಕು ಎಂದು ಜಾಗವನ್ನು ಗುರುತಿಸಲಾಗಿದೆ. 24 ಕ್ಯಾಮೆರಾ ಅಳವಡಿಸಲಾಗುವುದು. ಇದರಿಂದ ಹೆದ್ದಾರಿಯಲ್ಲಿ ನಡೆಯುವ ಪ್ರತಿ ಚಟುವಟಿಕೆ ಮೇಲೆ ನಿಗಾವಹಿಸಲು ಸಹಕಾರಿ ಆಗಲಿದೆ. ●ಕಾರ್ತಿಕ್‌ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.