ಹಣ ದೋಚಿದ್ದ ನಕಲಿ ಪೊಲೀಸರ ಸೆರೆ
Team Udayavani, Sep 1, 2020, 1:03 PM IST
ಸಾಂದರ್ಭಿಕ ಚಿತ್ರ
ರಾಮನಗರ: ಪೊಲೀಸರೆಂದು ಹೇಳಿ ಪ್ರೇಮಿಗಳ ಬಳಿ ನಗ, ನಾಣ್ಯ ಮೊಬೈಲ್ ದೋಚಿದ್ದ ಇಬ್ಬರು ಆರೋಪಿಗಳನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ನಾಗನಹಳ್ಳಿಯ ಪ್ರದೀಪ ಅಲಿಯಾಸ್ ಕೆಂಚ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಅಮೃತೂರು ಹೋಬಳಿ ಹೊಸಕೆರೆ ವಾಸಿ ಜಗದೀಶ ಬಂಧಿತ ಆರೋಪಿಗಳು. ಇವರಿಂದ ಸುಲಿಗೆ ಮಾಡಿದ್ದ 4 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರು, 6 ಮೊಬೈಲ್ ಮತ್ತು ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. 2020ರ ಜೂ.16ರಂದು ತಿಪ್ಪಗೊಂಡ ನಹಳ್ಳಿ ಚಿತ್ರಕೂಟ ಕಾಲೇಜು ಬಳಿ ಅರ್ಕಾವತಿ ಹೊಳೆ ಬಳಿ ಡ್ರೈವ್ ಜಿ ಬೈಕ್‌ನಲ್ಲಿ ಬಂದ ಆರೋಪಿಗಳು, ಪೊಲೀಸರೆಂದು ಹೇಳಿ ಅವಿನಾಶ್ ಬಳಿ ಹಣ, ಮೊಬೈಲ್ ಕಸಿದುಕೊಂಡಿದ್ದಾರೆ. ಆನಂತರ ಅವಿನಾಶ್ ಜತೆಗಿದ್ದ ಹುಡುಗಿಯನ್ನು ಟಾಟಾ ಇಂಡಿಕಾ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಆಕೆ ಬಳಿಯಿದ್ದ ಚಿನ್ನದ ಸರ ಕಿತ್ತು ಕೊಂಡು ರಾಮನಗರ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾಗಡಿ ವೃತ್ತ ನಿರೀಕ್ಷಕ ಮಂಜು ನಾಥ್ ನೇತೃತ್ವದಲ್ಲಿ ತಾವರೆಕೆರೆ ಠಾಣೆ ಸಬ್ ಇನ್ಸ್‌ಪೆಕ್ಟರ್ ನರೇಂದ್ರ ಬಾಬು, ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿದಾಗ, ಪ್ರಕರಣ ಬಯಲಿಗೆ ಬಂದಿದೆ.ಪೊಲೀಸರ ಸೋಗಿ ನಲ್ಲಿ ಪ್ರೇಮಿಗಳಿಂದ ಹಣ, ಚಿನ್ನಾಭರಣ ದೋಚಿದ್ದು ಮಾತ್ರವಲ್ಲದೆ ಇತರೆ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದಾರೆ.
………………………………………………………………………………………………………………………………………………………
ಏಳು ಮಂದಿ ದರೋಡೆಕೋರರ ಬಂಧನ : ರಾಮನಗರ: ಹಣ ದೋಚಿದ್ದ 7ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ತಾವರೆಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಸುಂಕದಕಟ್ಟೆ ಈರಣ್ಣನಪಾಳ್ಯದ ನಿವಾಸಿ ವಿಜಯ್, ಕೆಬ್ಬೇಹಳ್ಳದ ನಿವಾಸಿ ಧನುಷ್, ಭರತ್, ಜಾಲಹಳ್ಳಿ ಕ್ರಾಸ್ ಎನ್‌ಟಿಟಿಎಫ್ ನಿವಾಸಿ ರೋಹಿತ್ ಅಲಿಯಾಸ್ ಸ್ಟೀಫನ್, ನಾಗರಬಾವಿಯ ಎಂಪಿಎಂ ಲೇಔಟ್ ನಿವಾಸಿ ಸುರೇಶ, ಕೆಂಗುಂಟೆ ವಾಸಿ ಅನಿಲ್ ಹಾಗೂ ಶಿವಮೊಗ್ಗ ಜಿಲ್ಲೆ ಭದ್ರಾವತಿ ಸಂತೆಮೈದಾನ ನಿವಾಸಿ ರಾಬರ್ಟ್ ಬಂಧಿತ ಆರೋಪಿಗಳು. ಪೊಲೀಸರು ಇವರಿಂದ ಬಳಸಿದ ಕಾರು, 16 ಗ್ರಾಂ ತೂಕದ ಚಿನ್ನದ ಸರ, 2 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಬೈಕ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
2020ರ ಆ.18ರಂದು ವೆಂಕಟ್ ಮತ್ತು ಸ್ನೇಹಿತರಾದ ನರೇಶ್, ಜೀವನ್, ನರೇಶ್, ನರೇಶ್ ಮಾಗಡಿ ರಸ್ತೆ ಜೋಗೇಹಳ್ಳಿ ಬಳಿ ಕಾರು ನಿಲ್ಲಿಸಿಕೊಂಡಿದ್ದರು. ಈ ವೇಳೆ ಮೂರು ಬೈಕುಗಳಲ್ಲಿ ಬಂದ 5-6 ಜನ ಇವರ ಮೇಲೆ ಕಾರದ ಪುಡಿ ಎರಚಿ ಮೊಬೈಲ್, ಚಿನ್ನದ ಸರ ಹಾಗೂ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವೆಂಕಟ್ ದೂರು ದಾಖಲಿಸಿದ್ದರು. ಮಾಗಡಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ತಾವರೆಕೆರೆ ಠಾಣೆ ಸಬ್ ಇನ್ಸ್ ಪೆಕ್ಟರ್ ನರೇಂದ್ರ ಬಾಬು, ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ
Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.