ಕೋವಿಡ್: ಕಂಗಾಲಾದ ಕಲಾವಿದರು
ಸರ್ಕಾರದಿಂದ ಸಮರ್ಪಕವಾಗಿ ತಲುಪದ 2000 ರೂ. ಧನ ಸಹಾಯ
Team Udayavani, Oct 30, 2020, 4:00 PM IST
ಕನಕಪುರ: ಕಲೆ ಸಾಹಿತ್ಯ ಸಂಸ್ಕೃತಿಗೆ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ಆದರೆ ಅದನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರ ಬದುಕು ಕೋವಿಡ್ ಮಹಾಮಾರಿಯಿಂದ ಬೀದಿಗೆ ಬಿದ್ದಿದೆ.
ಡೊಳ್ಳು ಕುಣಿತ, ಸೋಬಾನೆ ಪದ, ತಮಟೆ ವಾದ್ಯ, ಗೊರವರ ಕುಣಿತ, ಕರಡಿ ಕುಣಿತ, ಕಂಸಾಳೆ ಪದ, ವೀರಬಾಹು, ವೀರಗಾಸೆ ಕುಣಿತ, ಸಿದ್ದಪ್ಪಾಜಿ, ಮಹದೇಶ್ವರ, ಮಂಟೇಸ್ವಾಮಿ ಭಕ್ತಿ ಗೀತೆಗಳನ್ನು ಪೂರ್ವಿಕರ ಕಾಲದಿಂದಲೂ ಗಾಯಕರು, ಕಲಾವಿದರು ಇವುಗಳನ್ನು ಕಟ್ಟಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.
ಕಾರ್ಯಕ್ರಮಗಳು ಸ್ತಬ್ಧ: ಪಾರಂಪರಿಕವಾದ ದಸರಾ ಉತ್ಸವ, ಊರ ಹಬ್ಬ, ನವರಾತ್ರಿ, ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವದಂತಹ ಹಬ್ಬಗಳಲ್ಲಿ ಕಲಾವಿದರು ತಮ್ಮ ಕಲೆ ಪ್ರದರ್ಶನ ಮಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವುದರ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಆದರೆ ಇತ್ತೀಚೆಗೆ ಒಕ್ಕರಿಸಿದ ಕೋವಿಡ್ ದಿಂದ ನಾಡು-ನುಡಿ ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಗಳು ಎಲ್ಲವೂ ಸ್ತಬ್ಧಗೊಂಡಿವೆ. ಇದರಿಂದ ಕಲಾವಿದರು ಬದುಕು ನಡೆಸುವುದು ಕಷ್ಟವಾಗಿದೆ.
ಸದ್ಬಳಕೆಯಾಗದ ಅನುದಾನ: ಗಣೇಶ ಚತುರ್ಥಿ ತಮಟೆ ನಾದ, ಕಲೆಗಳ ಪ್ರದರ್ಶನವಿಲ್ಲದೆ ಕಳೆದುಹೋಗಿದೆ. ದಸರಾ ಉತ್ಸವ ಬೆರಳೆಣಿಕೆಯಷ್ಟು ಮಂದಿಗೆ ಸೀಮಿತವಾಗಿದೆ. ಮುಂಬರುವ ಕನ್ನಡ ರಾಜ್ಯೋತ್ಸವ ಸರಳತೆಗೆ ಸಾಕ್ಷಿಯಾಗಲಿದೆ. ಇನ್ನು ಗ್ರಾಮೀಣ ಭಾಗದ ಊರ ಹಬ್ಬಗಳು ಸಂಪೂರ್ಣ ಸ್ಥಗಿತಗೊಂಡಿವೆ. ಈ ಎಲ್ಲಾ ಕಾರ್ಯಕ್ರಮಗಳು ಕಲಾವಿದರಿಂದಲೇ ಕಳೆಕಟ್ಟುತ್ತಿದ್ದವು. ಆದರೆ, ಕೋವಿಡ್ ಮಹಾಮಾರಿ ಎಲ್ಲಾ ರಂಗಗಳ ಮೇಲೆ ಪರಿಣಾಮ ಬೀರಿ ದೇಶದ ಆರ್ಥಿಕತೆಯನ್ನು ಬುಡಮೇಲಾಗಿಸಿದೆ. ಇದರಿಂದ ಬೀದಿಗೆ ಬಿದ್ದ ಕಲಾವಿದರನ್ನು ಕೈ ಹಿಡಿಯಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಇಲಾಖೆಗೆ ಬಂದಿದ್ದ ಕೋಟ್ಯಂತರ ರೂ. ಅನುದಾನಸದ್ಬಳಕೆಯಾಗದೆ, ಸರ್ಕಾರ ಹಿಂಪಡೆದಿದೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.
ನೆರವು ಬೇಕಿದೆ ಕಲಾವಿದರಿಗೆ: ಕೋವಿಡ್ ಸಂಕಷ್ಟದಲ್ಲಿ ಕುಲಕಸುಬುದಾರರು, ವಾಹನ ಚಾಲಕರು, ರೈತರು ಹಾಗೂ ಇತರೆ ರಂಗದವರಿಗೆ ಸಹಾಯಧನ ನೀಡಿದ್ದ ಸರ್ಕಾರ ಕಲಾವಿದರನೆರವಿಗೆ ಘೋಷಣೆ ಮಾಡಿದ 2 ಸಾವಿರ ರೂ. ಧನ ಸಹಾಯ ಜಿಲ್ಲೆಯ ಕಲಾವಿದರಿಗೆ ಸಮರ್ಪಕವಾಗಿ ತಲುಪದೇ ಇರುವುದು ಮಾತ್ರ ವಿಪರ್ಯಾಸವೇ ಸರಿ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ
ಮಟ್ಟದ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳದೆ, ಹಿಂದಕ್ಕೆ ಕಳುಹಿಸಿದ್ದಾರೆ. ಇಂತಹ ಬದ್ಧತೆ ಇಲ್ಲದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೇಗೆ ಪ್ರೋತ್ಸಾಹಿಸಬಲ್ಲರು. ಇಂತಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಕಲಾವಿದರ ಬದುಕು ನಾಶವಾಗುತ್ತಿದೆ. ಸರ್ಕಾರಕಲಾವಿದರ ನೆರವಿಗೆ ಬರಬೇಕಿದೆ ಎಂದು ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೋವಿಡ್ ದಿಂದ ಸಂಕಷ್ಟದಲ್ಲಿದ್ದ ಕಲಾವಿದರಿಗೆ ಸರ್ಕಾರ 2 ಸಾವಿರ ರೂ. ಧನ ಸಹಾಯ ಘೋಷಣೆ ಮಾಡಿತ್ತು. ಆದರೆ, ಹಲವು ರಾಜ್ಯಮಟ್ಟದ ಕಲಾವಿದರಿಗೆ ಅದು ತಲುಪಿಲ್ಲ. ಇನ್ನೂ ಗ್ರಾಮೀಣ ಭಾಗದ ಕಲಾವಿದರಿಗೆ ತಲುಪಲು ಹೇಗೆ ಸಾಧ್ಯ ಸರ್ಕಾರ ಕಲಾವಿದರನ್ನು ಕಡೆಗಣಿಸಿದ್ದು, ಸಾಕು ಇನ್ನಾದರೂ ಸ್ಪಂದಿಬೇಕಿದೆ. –ವೆಂಕಟಾಚಲ, ದೊಡ್ಡಾಲಹಳ್ಳಿಯ ರಾಜ್ಯ ಮಟ್ಟದ ಜಾನಪದ ಕಲಾವಿದ.
–ಬಿ.ಟಿ.ಉಮೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ
Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.