ಪ್ರಚಾರಕ್ಕೆ ಮಾಡಿದಷ್ಟು ಖರ್ಚು, ಬಡವರಿಗೆ ಮಾಡದ ಬಿಜೆಪಿ
ಬಿಜೆಪಿ ಸರ್ಕಾರದ ವಿರುದ್ಧ ಸಂಸದ ಡಿ.ಕೆ.ಸುರೇಶ್ ಆಕ್ರೋಶ
Team Udayavani, Aug 31, 2021, 4:10 PM IST
ಮಾಗಡಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಪ್ರಚಾರಕ್ಕೆ ಖರ್ಚು ಮಾಡಿದಷ್ಟು, ಬಡವರ ಸೇವೆಗೆ ವೆಚ್ಚ ಮಾಡಲಿಲ್ಲ ಕಾಂಗ್ರೆಸ್ ಪಕ್ಷ ಮಾಡಿದ್ದನ್ನು ಬಿಜೆಪಿ ಮಾರಾಟ ಮಾಡಿದಷ್ಟೇ ಸಾಧನೆ ಎಂದು ಸಂಸದ ಡಿ.ಕೆ.ಸುರೇಶ್ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ತಾಲೂಕಿನ ಮಾಡಬಾಳ್ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವೀರೇಗೌಡನದೊಡ್ಡಿಯಲ್ಲಿ ಗೌರಿ ಗಣೇಶದ ಹಬ್ಬದ ಪ್ರಯುಕ್ತ ಜೆ.ಪಿ. ಫೌಂಡೇಷನ್
ನಿಂದ 8,500 ದಿನಸಿ ಕಿಟ್ ಮತ್ತು ವಿದ್ಯಾರ್ಥಿಗಳಿಗೆ 4 ಸಾವಿರ ನೋಟ್ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರತಿಯೊಂದು ಬಿಪಿಎಲ್ ಕುಟುಂಬದ ಬ್ಯಾಂಕ್ ಖಾತೆಗೆ ಜನ್‌ಧನ್ ಯೋಜನೆಯಡಿ 15 ಲಕ್ಷ ರೂ. ಮತ್ತು 2 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ಹೇಳಿದ ಪ್ರಧಾನಿ ಮೋದಿ ಅವರು ಮಾತು ಸುಳ್ಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ mಹಾಗೂ ನಿತ್ಯ ವಸ್ತುಗಳ, ರಸಗೊಬ್ಬರದ ಬೆಲೆ ಏರಿಕೆಯಾಗುತ್ತಿದ್ದರೂ ನಿಯಂತ್ರಣ ಮಾಡಲಿಲ್ಲ,
ಗೋಹತ್ಯೆ ನಿಷೇಧ ಏರಿದ ಬಿಜೆಪಿ ಸರ್ಕಾರ ರಾಸುಗಳ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಲಿಲ್ಲ. ಹೀಗೆ ರೈತರ, ಕಾರ್ಮಿಕರ, ಯುವಕ, ಯುವತಿಯರ, ಮಹಿಳೆಯರ ಬಡವರ ಬದುಕು ಬೀದಿಪಾಲಾಗಿದೆ. ಅವರ ಜೀವನ ತುಂಬ ಸಂಕಷ್ಟದಲ್ಲಿದೆ. ಮೂರನೇ ಅಲೆ ಹರಡಿದ್ದರೂ ಲಸಿಕೆ ಕೊರತೆಯಿಂದ ಎಷ್ಟೋ ಮಂದಿ ಲಸಿಕೆಯಿಂದ ವಂಚಿತರಾಗಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ:ತೆಲಂಗಾಣದಲ್ಲಿ ಭಾರೀ ಪ್ರವಾಹ : ನವವಧು ಸೇರಿ ಏಳು ಮಂದಿ ಸಾವು
ಜನಾದೇಶವಿಲ್ಲದಿದ್ದರೂ ಸಹ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾಗಾಂಧಿ ಅವರ ನಿರ್ದೇಶನದಂತೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕೋವಿಡ್ ಸಂಕಷ್ಟದಲ್ಲಿ ರಾಜ್ಯದ ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲ ವರ್ಗದ
ಬಡವರ ನೆರವಿಗೆ ನಿಲ್ಲಬೇಕೆಂದು ಮಾಸ್ಕ್, ಸ್ಯಾನಿಟರೈಸ್, ಔಷಧ ಕಿಟ್, ದಿನಸಿ ಕಿಟ್ ವಿತರಣೆ ವಿತರಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು
ತೊಡಿಗಿಸಿಕೊಂಡು ಬಡವರಿಗೆ ನೀಡಲಾಗಿದೆ. ಈ ಬಾರಿ ನರೇಗಾಯೋಜನೆ ಸ್ಮಶಾನ, ಆಟದ ಮೈದಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಮತ್ತು ದಿ.ರಾಜೀವ್ ಗಾಂಧಿ ಅವರ ಕೊಡುಗೆ ದೇಶಕ್ಕೆ ಅಪಾರವಾಗಿದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನರೇಗಾ ಯೋಜನೆ ಮತ್ತು ಭೂಸ್ವಾಧೀನಕ್ಕೆ 4 ಪಟ್ಟು ದುಪ್ಪಟು ಹಣ ಜಾರಿಯಾಗಿದ್ದು, ಅಧಿಕಾರವಿಲ್ಲ ಎಂದು ಮನೆಯಲ್ಲಿ ಕೂರಬೇಡಿ. ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ನಿಂತು ಬಡವರ ಸೇವೆ
ಮಾಡುವಂತೆ ರಾಷ್ಟ್ರೀಯ ನಾಯಕರ ಆದೇಶದಂತೆ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಜನಪರವಾದ ಸೇವೆ ಯಶಸ್ವಿಯಾಗಿ ಮಾಡಿದ್ದೇವೆ ಎಂದು ತಿಳಿಸಿದರು.
ಜೆ.ಪಿ.ಫೌಂಡೇಷನ್ ಸಂಸ್ಥಾಪಕ ಹಾಗೂ ಜಿಪಂ ದಿಶಾ ಕಮಿಟಿ ಸದಸ್ಯ ಜೆ.ಪಿ.ಚಂದ್ರೇಗೌಡ, ಜಿಪಂ ಮಾಜಿ ಸದಸ್ಯರಾದ ಎಂ.ಕೆ.ಧನಂಜಯ,
ವಿಜಯಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆ.ಎಚ್. ಶಿವರಾಜ್,ಕೆಂಪರಾಜ್, ರಾಜ್ಯ ಮಾಜಿ ಮಹಿಳಾಧ್ಯಕ್ಷೆ ಕಮಲಮ್ಮ, ಕಲ್ಪನಾಶಿವಣ್ಣ, ದೇವೇಂದ್ರಕುಮಾರ್, ಸೀಬೇಗೌಡ, ದೀಪ, ಆಗ್ರೋ ಪುರುಷೋತ್ತಮ್,ದೊಡ್ಡಿ ವಿಶ್ವನಾಥ್, ಶ್ರೀನಿವಾಸ್, ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ, ಅಪ್ಪಾಜಿಗೌಡ, ಪುರಸಭಾ ಸದಸ್ಯ ಗುರುಸ್ವಾಮಿ, ಸಂಗಮೇಶ್, ಹಂಚೀಕುಪ್ಪೆ ಗ್ರಾಪಂ ಅಧ್ಯಕ್ಷ ನರಸಿಂಹಯ್ಯ ದೀಪು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.