ಅಂತರ್ಜಲ ಮಟ್ಟ ಸುಧಾರಣೆಗೆ ಅಟಲ್‌ ಯೋಜನೆ


Team Udayavani, Feb 13, 2021, 1:59 PM IST

ಅಂತರ್ಜಲ ಮಟ್ಟ ಸುಧಾರಣೆಗೆ ಅಟಲ್‌ ಯೋಜನೆ

ರಾಮನಗರ: ಅಂತರ್ಜಲ ಮಟ್ಟ ಸುಧಾರಿಸಲು ಸರ್ಕಾರ ಅಟಲ್‌ ಭೂಜಲ ಯೋಜನೆ ಜಾರಿಗೊಳಿಸಿದೆ ಎಂದು ಜಿಪಂ ಸಿಇಒ ಇಕ್ರಂ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಟಲ್‌ ಭೂಜಲ ಯೋಜನೆ ಜಾರಿಗೆ ಚಾಲನೆ ನೀಡಿ ಮಾತನಾಡಿ ದ ಅವರು, ನೀರು ಜಗತ್ತಿನ ಜೀವ ಸಂಕುಲಗಳ ಇರುವಿಕೆಗೆ ಅತ್ಯಗತ್ಯ ಮೂಲ ವಸ್ತು. ನೀರಿನ ಬಳಕೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಪ್ರಥಮ ಪ್ರಶಸ್ತ್ಯ ನೀಡಬೇಕು ಎಂದು ಹೇಳಿ ದರು. ಭೂಮಿ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದರೂ‌ ಶೇ.2.50 ಸಿಹಿ ನೀರು ಲಭ್ಯವಿದ್ದು, ಶೇ.0.30 ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ.

ದೇಶ ಕೃಷಿ ಆಧಾರಿತ ದೇಶವಾಗಿದ್ದು, ಬಹುತೇಕ ನಾಗರಿಕರು ಜೀವನೋಪಾಯಕ್ಕೆ ಕೃಷಿ, ತೋಟಗಾರಿಕೆ, ಹೈನುಗಾರಿಕೆಯನ್ನು ಅವಲಂಭಿಸಿದ್ದಾರೆ. ಹೀಗಾಗಿ ಅಂತರ್ಜಲ ವೃದ್ಧಿ ಎಲ್ಲರ ಪ್ರಾಶ ಸ್ತ್ಯ ವಾ ಗ ಬೇಕು ಎಂದರು.

ಹುಣಸನ ಹಳ್ಳಿ ಯಲ್ಲಿ ಅಧ್ಯಯನಕ್ಕೆ ಕೊಳವೆ ಬಾವಿ:

ಅಟಲ್‌ ಭೂ ಜಲ ಯೋಜನೆಯ ನೋಡಲ್‌ ಅಧಿಕಾರಿ ಸಿ.ಪಿ.ರವಿ ಮಾತನಾಡಿ, ನೀರಿನ ಮಿತವ್ಯಯ ಸಾಧಿಸುವುದು, ಅಂತರ್ಜಲ ಅಭಿವೃದ್ಧಿಯ ಸನ್ನಿವೇಶ ರೂಪಿಸಿವುದು, ಪರಿಣಾಮಕಾರಿ ಅಂತರ್ಜಲನಿರ್ವಹಣೆ ಮತ್ತು ಸಾಂಸ್ಥಿಕ ಚೌಕಟ್ಟನ್ನುಬಲಪಡಿಸುವುದು, ಸಮರ್ಪಕ ನೀರಿನ ಬಳಕೆಗೆ ಉತ್ತಮ ಕ್ರಮ ಅಳವಡಿಸಿಕೊಳ್ಳುವುದು ಯೋಜನೆ ಉದ್ದೇಶ. ಇದಕ್ಕಾಗಿ ಅಧ್ಯಯನ ಕೊಳವೆ ಬಾವಿ ನಿರ್ಮಿಸಲಾಗುತ್ತಿದೆ. ಇಂದು ಸಂಕೇತಿಕವಾಗಿ ಹುಣಸನಹಳ್ಳಿಯಲ್ಲಿ ಅಧ್ಯಯನ ಕೊಳವೆ ಬಾವಿ  ನಿರ್ಮಿಸಿ ಅಧ್ಯಯನ ಪ್ರಾರಂಭಿಸಲಾಗಿದೆ. ಯೋಜನೆಅನುಷ್ಠಾನಕ್ಕೆ ತಕ್ಕಂತೆ ಅನುದಾನಕ್ಕೆ ಪ್ರಸ್ತವಾನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜೆ.ಸಿ.ಮಾಧುಸ್ವಾಮಿ ಚಾಲನೆ: ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ರಾಜ್ಯ ಮಟ್ಟ ದಲ್ಲಿ ಯೋಜನೆ ಉದ್ಘಾಟಿಸಿದರು. ಜಿಪಂ ಭವನದಲ್ಲಿ ಉದ್ಘಾಟನೆ ಸಂದರ್ಭದ ನೇರ ಪ್ರಸಾರಕ್ಕೆ ವ್ಯವ ಸ್ಥೆ ಮಾಡಲಾಗಿತ್ತು. ಜೆಸಿಎಂ ಯೋಜನೆ ಉದ್ಘಾಟಿಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಕಾರ್ಯ ಕ್ರಮ ಆರಂಭ ವಾಯಿತು. ಹಿರಿಯ ಭೂ ವಿಜಾnನಿ ರಾಜಶ್ರೀ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕೊಟ್ರೇಶ್‌, ಜಿಲ್ಲಾ ಉದ್ಯೋಗಾಧಿಕಾರಿ ಶಿವಮೂರ್ತಿ ಉಪಸ್ಥಿತರಿದ್ದರು.

30 ಗ್ರಾಮಗಳಿಗೆ ಯೋಜನೆ :

ಜಿಲ್ಲೆಯಲ್ಲಿ ಕನಪುರ ತಾಲೂಕಿನ ಅರೆಕಟ್ಟೆ ದೊಡ್ಡಿ, ಚೊಡಹಳ್ಳಿ, ಕಬ್ಟಾ ಳು, ಚಾಕನಹಳ್ಳಿ, ಅರಕೆರೆ, ದೊಡ್ಡ ಮರಳವಾಡಿ, ಯಲಚನವಾಡಿ, ಹೆರಿಂದ್ಯಾಪ್ಪನಹಳ್ಳಿ, ಕೋಳಗೊಂಡನಹಳ್ಳಿ, ಬನವಾಸಿ, ಹುಣಸನಹಳ್ಳಿ, ಕೊಡಿಹಳ್ಳಿ, ತೋಕಸಂದ್ರ, ಅಚಲು, ಬುದಿಗುಪ್ಪೆ, ಹೊನ್ನಿಗನಹಳ್ಳಿ, ಹೊಸದುರ್ಗ, ಹೂಕುಂದ, ನಾರಾಯಣಪುರ, ಸಾತನೂರು, ಶಿವನಹಳ್ಳಿ, ಟಿ.ಬೇಕುಪ್ಪೆ, ಹಳ್ಳಿಮಾರನಹಳ್ಳಿ, ಕಗ್ಗಲಹಳ್ಳಿ, ಟಿ.ಹೊಸಹಳ್ಳಿ, ಬನ್ನಿಮುಕೂಡೂ, ದ್ಯಾವಸಂದ್ರ, ಕಲ್ಲಹಳ್ಳಿ, ಸೊಮಂದ್ಯಾಪನಹಳ್ಳಿ, ತುಂಗಣಿ ಸೇರಿದಂತೆ ಒಟ್ಟು 30 ಗ್ರಾಮವನ್ನು ಯೋಜನೆಗೆ ಗುರಿತಿಸಲಾಗಿದೆ. ರಾಮನಗರ ತಾಲೂಕಿನ ಅಕ್ಕೂರು, ದೊಡ್ಡಂಗನವಾಡಿ, ಹರಿಸಂದ್ರ, ಜಾಲಮಂಗಲ, ಕೂಟಗಲ್‌, ಲಕ್ಷಿಪುರ, ಸುಗ್ಗನಹಳ್ಳಿ, ಬಿಳಗುಂಬ, ಮಯಗಾನಹಳ್ಳಿ, ಶ್ಯಾನುಬೊಗನಹಳ್ಳಿ, ಬನ್ನಿಕುಪ್ಪೆ(ಕೆ), ಬನ್ನಿಕುಪ್ಪೆ(ಬಿ), ವಿಬೂತಿಕೆರೆ, ಮಂಚನಾಯಕನಹಳ್ಳಿ, ಹುಣಸನಹಳ್ಳಿ, ಕಂಚನಕುಪ್ಪೆ, ಗೋಪಹಳ್ಳಿ, ಕಂಚುಗಾರನಹಳ್ಳಿ, ಬೈರಮಂಗಲ ಸೇರಿದಂತೆ ಒಟ್ಟು 19 ಗ್ರಾಮ ಗುರುತಿಸಲಾಗಿದೆ.

1,199 ಗ್ರಾಪಂನಲ್ಲಿ ಜಾರಿ :

ಅಟಲ್‌ ಭೂಜಲ್‌ ಯೋಜನೆಯಡಿ ಗುಜರಾತ್‌, ಹರಿಯಾಣ, ಕರ್ನಾಟಕ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಅಂತರ್ಜಲ ಅತಿಶೋಷಿತ ಪ್ರದೇಶಗಳಲ್ಲಿನ ತಾಲೂಕುಗಳ ಮೇಲೆ ಗಮನ ಹರಿಸಲಾಗಿದೆ. ರಾಜ್ಯದ 14 ಜಿಲ್ಲೆಗಳ ಪೈಕಿ 41 ತಾಲೂಕುಗಳ 1,199 ಗ್ರಾಪಂನ 39,703 ಚದರ ಕಿಮೀ ವಿಸ್ತಾರ ಪ್ರದೇಶಗಳನ್ನು ಯೋಜನೆಗೆ ಗುರುತಿಸಲಾಗಿದೆ. ಇದು ಕೇಂದ್ರ ವಲಯ ಯೋಜನೆಯಾಗಿದ್ದು, ರಾಜ್ಯಗಳಿಗೆ ಅನುದಾನ ಸಹಾಯವಾಗಿ ಸಿಗಲಿದೆ. ರಾಜ್ಯಕ್ಕೆ ಹೂಡಿಕೆ ಮತ್ತು ಪ್ರೋತ್ಸಾಹ ಎರಡೂ ಘಟಕಗಳಿಂದ 1,201.52 ಕೋಟಿ ರೂ. ಅನುದಾನ ರೀತಿಯಲ್ಲಿ ಹಂಚಿಕೆಯಾಗಲಿದೆ ಎಂದು ನೋಡಲ್‌ ಅಧಿಕಾರಿ ಸಿ.ಪಿ.ರವಿ ತಿಳಿಸಿದರು.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.