ಪ್ರೇಕ್ಷಕರ ಗಮನ ಸೆಳೆದ ಮಕ್ಕಳ ಸಾಹಸ!

Team Udayavani, Dec 28, 2017, 5:35 PM IST

ram-2.jpg

ರಾಮನಗರ: ಒಂದೇ ನಿಮಿಷದಲ್ಲಿ 6 ನಿಂಬೆ ಹಣ್ಣು ಗುಳುಂ… ಮನಸೂರೆಗೊಳಿಸಿದ ಕೇವಲ 7 ವರ್ಷದ ಬಾಲಕನ ಪೂಜಾ ಕುಣಿತ… ಎರಡೂ ಕೈಗಳನ್ನು ಒಮ್ಮೆಲೆ ಬಳಸಿ ಗಣೇಶನ ಎರಡು ತದ್ರೂಪ ಚಿತ್ರಗಳನ್ನು ಬರೆದ ಪೋರಿ… 54 ಕೇಜಿ ತೂಕದ ವ್ಯಕ್ತಿಯನ್ನು ಹಲ್ಲಿನಿಂದ ಹಿಡಿದೆತ್ತಿದ್ದ ಸಾಹಸಿ… ಇಂತಹ ಪ್ರದರ್ಶನ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌
ಭವನದಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಶಿಕ್ಷಣ ಟ್ರಸ್ಟ್‌ ಕರ್ನಾಟಕ ಬುಕ್‌ ಆಫ್ ರೆಕಾರ್ಡ್ಸ್‌(ಸಾಧಕರ ಪುಟ) ಗಾಗಿ ಹಮ್ಮಿಕೊಂಡಿರುವ ಅನಾವ ರಣಗೊಂಡಿತು.

ಮೈಸೂರಿನ ಶಾಲಿನಿ ಎಂಬ ಬಾಲಕಿ ತನ್ನ ಎರಡೂ ಕೈಗಳನ್ನು ಏಕ ಕಾಲಕ್ಕೆ ಬಳಸಿ ಗಣೇಶನ ಎರಡು ತದ್ರೂಪು ಚಿತ್ರಗಳನ್ನು ಬಿಡಿಸಿದಳು. ನಂತರ ಮತ್ತೆ ಎಡಗೈಲಿ ಗಣಪನ ಚಿತ್ರ ಬರೆದ ಆಕೆ ಬಲಗೈಲಿ ಗಣಪನ ಉಲ್ಟಾ ಚಿತ್ರವನ್ನು ಬರೆದು ಪ್ರಕೇಕಕರನ್ನು ಚಕಿತಗೊಳಿಸಿದಳು.

ಕನಕಪುರ ತಾಲೂಕಿನ ಕೇವಲ 7 ವರ್ಷದ ಪೋರ ಟಿ.ಎಸ್‌.ಪ್ರೀತಂ, 35 ಕೇಜಿ ತೂಗುವ ವಿವಿಧ ದೇವತಾ ಚಿತ್ರಗ
ಳಿರುವ “ಪೂಜೆ’ಯನ್ನು ಹೊತ್ತು ತಮಟೆ ಮೇಳದ ನಾದಕ್ಕೆ ತಕ್ಕದಾಗಿ ಹೆಜ್ಜೆಗಳನ್ನು ಹಾಕುತ್ತ ಪೂಜಾ ಕುಣಿತ ನಡೆಸಿಕೊಟ್ಟಿದ್ದು ಪ್ರೇಕ್ಷಕರ ಗಮನ ಸೆಳೆಯಿತು. ಚನ್ನಪಟ್ಟಣ ತಾಲೂಕಿನ ಯುವತಿ ಪುನರ್ವಸು ಎಂಬಾಕೆ ಗಂಡಭೇರುಂಡ ಆಸನ ಸೇರಿದಂತೆ ಅತ್ಯಂತ ಕಠಿಣ ಆಸನಗಳನ್ನು ಪ್ರದರ್ಶಿಸಿದರು. 

ನಿಶ್ಚಲ್‌ ಸಾಹಸಕ್ಕೆ ಪ್ರೇಕ್ಷಕ ಫಿದಾ: ಬೆಂಗಳೂರಿನ ನಿಶ್ಚಲ್‌ ಎಂಬ ಯುವಕ ಚಾಕುವೊಂದರ ಹಿಡಿಯನ್ನು ತನ್ನ
ಬಾಯಲ್ಲಿ ಇರಿಸಿಕೊಂಡು ಚಾಕುವಿನ ಹರಿತ ಇರುವ ಭಾಗದ ಮೇಲೆ ಗ್ಲಾಸ್‌ ಪೇಟ್‌ಗಳು, ಪೆಗ್‌ ಗ್ಲಾಸುಗಳನ್ನು ಒಂದರ
ಮೇಲೊಂದು ಪೇರಿಸಿ ಬ್ಯಾಲೆನ್ಸ್‌ ಮಾಡಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

 ನಂತರ ಚಾಕುವೊಂದರ ಮೇಲೆ ಬಲೂನ್‌, ಬಲೂನ್‌ ಮೇಲೆ ದೀಪಾಲೆ ಕಂಬವನ್ನು ಇಟ್ಟು ಬ್ಯಾಲೆನ್ಸ್‌ ಮಾಡಿ ನಂತರ ಬಲೂನ್‌ನ್ನು ಒಡೆದು ದೀಪಾಲೆ ಕಂಬ ನೇರವಾಗಿ ಚಾಕುವಿನ ಮೇಲೆ ಕೂರಿಸಿದ ಚಾಕಚಕತ್ಯೆಗೆ ಪ್ರೇಕ್ಷಕರು ಬೆರಗಾದರು.

ಮೈಸೂರಿನ ರಾಹುಲ್‌ ರಾಯ್‌ ಕೈಗಳನ್ನು ನೆಲಕ್ಕೆ ತಾಗಿಸದೆ ಗಿರಗಿಟಲೆಯಂತೆ ಸುತ್ತಿದ್ದು ನೆರೆದಿದ್ದವರ ಚಕಿತಕ್ಕೆ
ಕಾರಣವಾಯಿತು. ಈತ ಕಿಕ್‌ಬಾಕ್ಸಿಂಗ್‌ ಏರೋಬಿಕ್ಸ್‌ ಸೇರಿದಂತೆ ವಿವಿಧ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು
ಪ್ರತಿನಿಧಿಸಿ 3 ಬಾರಿ ಚಿನ್ನದ ಪದಗಳನ್ನು ಪಡೆದಿದ್ದಾಗಿ ಆಯೋಜಕರು ತಿಳಿಸಿದರು. 

ಸ್ಪೈಡರ್‌ ಮನ್‌ ಗಿರಿಗಟ್ಲೆಗೆ ತಲೆ ಸುತ್ತಿದ್ದ ವೀಕ್ಷಕ: ಕರ್ನಾಟಕದ ಸ್ಪೈಡರ್‌ ಮನ್‌ ಅಂತಲೆ ಕರೆಯಲ್ಪಡುವ ಅನಿಲ್‌ ಎಂಬ ಯುವಕನ ಪ್ರದರ್ಶನ ರೋಮಾಂಚನಕ್ಕೆ ಕಾರಣವಾಯಿತು. ಕೆಲ ಹೆಜ್ಜೆಗಳ ಹಿಂದಿನಿಂದ ಓಡಿ ಬಂದ ಆತನ ಒಮ್ಮೇಲೆ ನಾಲ್ಕು ಮಂದಿಯನ್ನು ದಾಟಿ ಗಿರಗಿಟ್ಲೆ ಸುತ್ತಿ ನೆಲದ ಮೇಲೆ ನಿಂತಿದ್ದನ್ನು ಕಂಡ ಪ್ರೇಕ್ಷಕರು ರೋಮಾಂಚನಗೊಂಡರು. 

ಸುರಪುರ ತಾಲೂಕಿನ ಲೆಮನ್‌ ಪರಶುರಾಮ್‌ ಒಂದು ನಿಮಿಷದಲ್ಲಿ 6 ನಿಂಬೆ ಹಣ್ಣುಗಳನ್ನು ಒಂದರ ಹಿಂದೆ
ಒಂದನ್ನು ತಿಂದಿದ್ದು ಸಹ ಅದ್ಭುತ ಎನಿಸಿತು. ಕರ್ನಾಟಕ ಬುಕ್‌ ಆಫ್ ರೆಕಾರ್ಡ್ಸ್‌ ಹೊರತರಲು ಉದ್ದೇಶಿಸಿರುವ ಗೌತಂ ವರ್ಮ ಕೆಲವೇ ಸೆಕಂಡುಗಳಲ್ಲಿ ತೆಂಗಿನ ಕಾಯನ್ನು ಸುಲಿದರು. 54 ಕೇಜಿ ತೂಗುವ ವ್ಯಕ್ತಿಯೊಬ್ಬನನ್ನು ತಮ್ಮ ಹಲ್ಲುಗಳಿಂದ ಹಿಡಿದೆತ್ತಿ ಚಕಿತಗೊಳಿಸಿದರು.  ರಾಮನಗರ ತಾಲೂಕಿನ ಆನಂದ ಅವರು ದಾಖಲೆ ಪ್ರಮಾಣದಲ್ಲಿ ಟೊಮೆಟೋ ಬೆಳೆದಿರುವುದರ ಬಗ್ಗೆ ಮಾಹಿತಿ ಲಭ್ಯವಾಯಿತು.  ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಪ್ರತಿಭೆಗಳು ತಮ್ಮ ಅದ್ಬುತ ಸಾಹಸವನ್ನು ಪ್ರದರ್ಶಿಸಿ ಗಣ್ಯರು ಮತ್ತು ಪ್ರೇಕಕರನ ಮೆಚ್ಚುಗೆಗಳಿಸಿದರು.

ಟಾಪ್ ನ್ಯೂಸ್

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.