ಕರಗಕ್ಕೆ ಅನುಮತಿ ಸಿಗುವ ನಿರೀಕ್ಷೆ
Team Udayavani, Jul 13, 2021, 3:05 PM IST
ರಾಮನಗರ: ಕೋವಿಡ್ ಸೋಂಕು ಕಾರಣ ಎರಡನೇ ವರ್ಷವೂ ರಾಮನಗರದಲ್ಲಿಕರಗ ಮಹೋತ್ಸವ ದೇವಾಲಯ ಗಳ ಆವರಣಗಳಿಗೆ ಸೀಮಿತವಾಗುವ ಲಕ್ಷಣಗಳಿವೆ. ಆದರೆ, ಜಿಲ್ಲಾಡಳಿತ ಈ ಬಗ್ಗೆ ಇನ್ನು ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ. ಜು.20ರಂದು ನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಕಾಳಿ ಅಮ್ಮನವರ ಕರಗ ಮಹೋತ್ಸವ ಮತ್ತು ಜುಲೈ 27ರಂದು ಶ್ರೀ ಚಾಮುಂಡೇಶ್ವರಿ ಅಮ್ಮನವರಕರಗ ಸೇರಿದಂತೆ 7 ಶಕ್ತಿದೇವತೆಗ ಕರಗ ಮಹೋತ್ಸವಗಳು ನಡೆಯಬೇಕಿದೆ.
ಸರ್ಕಾರ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವ ಕಾಶ ನೀಡಿದೆ. ಧಾರ್ಮಿಕ ಅಚರಣೆಗಳಿಗೆ ಅವಕಾಶ ಕೊಟ್ಟಿಲ್ಲ. ಕಳೆದ ವರ್ಷ ಕೋವಿಡ್ ಸೋಂಕು ಮೊದಲನೇ ಅಲೆಯಲ್ಲಿ ದೇವಾಲಯದ ಆವರಣಕ್ಕೆ ಸೀಮಿತಗೊಳಿಸಿ ಕರಗ ಮಹೋತ್ಸ ವಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಆದರೆ, ಈ ಬಾರಿ ಜಿಲ್ಲಾ ಡಳಿತ ಇದುವರೆಗೂ ಏನೊಂದು ನಿರ್ಧಾರವನ್ನು ಪ್ರಕಟಿಸಿಲ್ಲ. ತಾಲೂಕು ಆಡಳಿತ ಅನುಮತಿ ನೀಡಲು ನಿರಾಕರಿಸಿರುವ ಕಾರಣ ಜಿಲ್ಲಾಧಿಕಾರಿಗಳ ನಿರ್ಧಾರ ಮುಖ್ಯವಾಗಲಿದೆ.
ಮಂಡಿಪೇಟೆಯಲ್ಲಿರುವ ಬನ್ನಿಮಹಾಕಾಳಿ ಅಮ್ಮನವರ ಕರಗ ಮಹೋತ್ಸವ ಜು. 20ರಂದು ನಡೆಯಬೇಕಿದೆ. ಈ ಹಿನ್ನೆ ಲೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜು.13ರ ಮಂಗಳ ವಾರದಿಂದಲೇ ಆರಂಭವಾಗಬೇಕಿದ್ದು, ಹಸಿ ಕರಗ ನಡೆಯಬೇ ಕಿದೆ. ದೇವಾಲಯದ ಆವರಣದ ಮಟ್ಟಿಗೆ ಹಸಿ ಕರಗ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಗ್ಗೆ ಅಮ್ಮನವರಿಗೆ ನಿತ್ಯದ ಅನುಷ್ಠಾನಗಳ ಜೊತೆಗೆ ರುದ್ರಾಭೀಷಕ, ಹೂವಿನಿಂದ ವಿಶೇಷ ಅಲಂಕಾರ ನಡೆ ಯಲಿದೆ. ಮಹಾಮಂಗಳಾರತಿ ಸಹ ನಡೆಯಲಿದೆ. ಸಂಜೆ 6ಗಂಟೆಗೆ ದೇವಾಲಯದ ಆವರಣದಲ್ಲಿಯೇ ಹಸೀ ಕರಗ ಮಹೋತ್ಸವ ನಡೆಸಲು ಉದ್ದೇಶಿಸಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.