Bangalore Mysore Expresswayನಲ್ಲಿ ಒಂದಂಕಿಗಿಳಿದ ಸಾವಿನ ಸಂಖ್ಯೆ
Team Udayavani, Sep 5, 2023, 4:47 PM IST
ರಾಮನಗರ: ಸಾವಿನ ಹೆದ್ದಾರಿ ಎಂಬ ಕಳಂಕಕ್ಕೆ ಒಳಗಾಗಿದ್ದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕೊನೆಗೂ ಅಪಘಾತಗಳ ಪ್ರಮಾಣ ತಗ್ಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅಪಘಾತಗಳ ಸಂಖ್ಯೆ ಒಂದಂಕಿಗೆ ಇಳಿದಿದೆ. ಇದರೊಂದಿಗೆ ಎಕ್ಸ್ ಪ್ರಸ್ ವೇನಲ್ಲಿ ಸಂಚರಿಸುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಕಳೆದ ಜನವರಿಯಿಂದ ಜೂನ್ ವರೆಗೆ 105 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. ನಿರಂತರ ಅಪ ಘಾತಗಳಿಂದಾಗಿ ಈ ರಸ್ತೆಯನ್ನು ಸಾವಿನ ಹೆದ್ದಾರಿ ಎಂದು ಬಣ್ಣಿಸಲಾಗಿತ್ತು. ಅಪಘಾತ ಹೆಚ್ಚಳದ ಹಿನ್ನೆಲೆ ಯಲ್ಲಿ ಪೊಲೀಸ್ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತು ಕೊಂಡಿದ್ದು, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅಪಘಾತ ಪ್ರಮಾಣ ಗಣನೀಯವಾಗಿ ಇಳಿದಿದೆ.
14 ಮಂದಿ ಸಾವು: ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬೆಂಗಳೂರು ಮೈಸೂರು ಹೈವೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 14 ಮಂದಿ ಸಾವಿಗೀಡಾಗಿದ್ದಾರೆ. ಜುಲೈನಲ್ಲಿ 8 ಮಂದಿ, ಆಗಸ್ rನಲ್ಲಿ 6 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದು, ಇದೇ ಮೊದಲ ಬಾರಿಗೆ ಹೆದ್ದಾರಿ ಅಪಘಾತಗಳಲ್ಲಿ ಸಾವಿಗೀ ಡಾದವರು ಸಂಖ್ಯೆ ಒಂದಂಕಿಗೆ ಇಳಿದಿದೆ. ಅಪಘಾತಗಳ ಪ್ರಮಾಣ ಕಡಿಮೆಯಾಗಿರುವುದು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಸುಧಾರಣಾ ಕ್ರಮಗಳು ಕಾರಣ: ಹೆದ್ದಾರಿಯಲ್ಲಿ ಅಪಘಾತ ಪ್ರಮಾಣ ಕಡಿಮೆಯಾಗಲು ಪೊಲೀಸ್ ಇಲಾಖೆ ಕೈಗೊಂಡ ಸುಧಾರಣಾ ಕ್ರಮಗಳು ಸಹಕಾರಿಯಾಗಿವೆ. ಎಕ್ಸ್‌ಪ್ರೆಸ್ ವೇನಲ್ಲಿ ಸಂಚಾರ ಮಿತಿಯನ್ನು 100 ಕಿಮೀಗೆ ನಿಯಂತ್ರಿಸಿದ್ದು, ಹೆದ್ದಾರಿ ಯಲ್ಲಿ ಬೈಕ್ ಮತ್ತು ಮಂದಗತಿಯ ವಾಹನಗಳ ಪ್ರವೇಶ ನಿಷೇಧಿಸಿದ್ದು, ವೇಗ ನಿಯಂತ್ರಣಕ್ಕೆ ಎಐ ಕ್ಯಾಮೆರಾಗಳನ್ನು ಅಳವಡಿಸಿದ್ದು, ಹೀಗೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು ಅಪಘಾತಕ್ಕೆ ಕಡಿಮೆಯಾಗಲು ಕಾರಣವಾಗಿದೆ.
ರಾಜ್ಯದಲ್ಲೂ ರಸ್ತೆ ಅಪಘಾತದಿಂದ ಸಾವಿನ ಸಂಖ್ಯೆ ಕಡಿಮೆ: ಕಳೆದ 4ತಿಂಗಳ ಅಪಘಾತ ಪ್ರಮಾಣವನ್ನು ಪರಿಗಣಿಸಿದರೆ ಜುಲೈ ಮತ್ತು ಮೇ ತಿಂಗಳಲ್ಲಿ ರಾಜ್ಯಾ ದ್ಯಂತ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆ ಕಡಿಮೆಯಾಗಿದೆ. ರಾಜ್ಯದಲ್ಲಿ ಮೇ ತಿಂಗಳಲ್ಲಿ 1094, ಜೂನ್‌ನಲ್ಲಿ9 65, ಜುಲೈನಲ್ಲಿ 807, ಆಗಸ್ಟ್‌ನಲ್ಲಿ 795 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾ ಗಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಕಠಿಣ ಪರಿಶ್ರಮ ಮತ್ತು ಇಲಾಖಾ ಸಿಬ್ಬಂದಿ ಕೈಗೊಂಡಿರುವ ಸುರಕ್ಷತಾ ಕ್ರಮ ಗಳಿಂದ ಅಮೂಲ್ಯ ಜೀವಗಳ ರಕ್ಷಣೆಯಾಗುತ್ತಿದೆ ಎಂದು ಈ ಬಗ್ಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಮ್ಮ ಎಕ್ಸ್(ಟ್ವೀಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಕ್ಸ್‌ಪ್ರೆಸ್ ವೇನಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಇಲಾಖೆಯ ಜೊತೆಗೆ ಪ್ರಯಾಣಿಕರು ಎಚ್ಚೆತ್ತುಕೊಳ್ಳಬೇಕು. ಪ್ರಯಾಣಿಕರು ಇಲಾಖೆಯ ಜೊತೆ ಸಹಕರಿಸಿದರೆ ಶೇ.99ರಷ್ಟು ಅಪಘಾತ ವನ್ನು ನಿಯಂತ್ರಿಸಬಹುದು. ಅಮೂಲ್ಯ ಜೀವಗಳನ್ನ ಉಳಿಸಬಹು ದಾಗಿದೆ. ಹೈವೆ ಅಪಘಾತ ನಿಯಂತ್ರಣಕ್ಕೆ ಶ್ರಮಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. –ಸುರೇಶ್, ಎಎಸ್ಪಿ, ರಾಮನಗರ ಜಿಲ್ಲೆ
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ
Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.