ಬೆಂಗಳೂರು- ಮೈಸೂರು ಹೆದ್ದಾರಿ: ಡೆತ್‌ ವೇನಲ್ಲಿ ಬ್ಲಾಕ್‌ಸ್ಪಾಟ್‌ ಗುರುತಿಸಿ

Team Udayavani, Jun 24, 2023, 2:21 PM IST

ಬೆಂಗಳೂರು- ಮೈಸೂರು ಹೆದ್ದಾರಿ: ಡೆತ್‌ ವೇನಲ್ಲಿ ಬ್ಲಾಕ್‌ಸ್ಪಾಟ್‌ ಗುರುತಿಸಿ

ರಾಮನಗರ: ಎಕ್ಸ್‌ಪ್ರೆಸ್‌ ಹೈವೇ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬ್ಲಾಕ್‌ಸ್ಪಾಟ್‌(ಅಪಘಾತ ವಲಯ) ಗಳನ್ನು ಗುರುತಿಸುವ, ಈ ಸ್ಥಳಗಳಲ್ಲಿ ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ಅಪಘಾತ ತಗ್ಗಿಸುವ ಉಪಕ್ರಮಗಳನ್ನು ಕೈಗೊಳ್ಳುತ್ತಾರೆ. ಈಗಾಗಲೇ ಹೆದ್ದಾರಿಯಲ್ಲಿ ಸಂಚಾರ ಆರಂಭವಾಗಿ 10 ತಿಂಗಳು ಕಳೆದಿವೆ. ಇದುವರೆಗೆ 854 ಅಪಘಾತಗಳು ಸಂಭವಿಸಿದ್ದು, 159 ಮಂದಿ ಸಾವಿಗೀಡಾಗಿ ದ್ದಾರಾದರೂ, ಇದುವರೆಗೆ ಹೆದ್ದಾರಿ ಪ್ರಾಧಿಕಾರ ಬ್ಲಾಕ್‌ಸ್ಪಾಟ್‌ ಗುರುತಿಸಲು ಮುಂದಾಗಿಲ್ಲ.

ಬೆಂ-ಮೈ ಹೆದ್ದಾರಿಯಲ್ಲಿ ಸಂಭವಿ ಸುತ್ತಿರುವ ನಿರಂತರ ಅಪಘಾತಗಳಿಂದ ಡೆತ್‌ ವೇ ಎಂಬ ಅಪಖ್ಯಾತಿ ಗೆ ತುತ್ತಾಗಿದೆ. ಬೆಂಗಳೂರು- ಮೈಸೂರು ನಗರದ ನಡುವೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಿ, ಎರಡು ನಗರಗಳ ನಡುವೆ ಸಾಧಿಸಬೇಕಾದ ಎಕ್ಸ್‌ಪ್ರೆಸ್‌ ಹೈವೇ ಪ್ರಯಾಣಿಕರ ಜೀವಕ್ಕೆ ಕಂಟಕ ಪ್ರಾಯವಾಗಿದ್ದು, ಇಷ್ಟೊಂದು ಸಾವಿಗೀಡಾದರೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡಿಲ್ಲ.

ಏನಿದು ಬ್ಲಾಕ್‌ಸ್ಪಾಟ್‌: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪದೇ ಪದೆ ಅಪಘಾತ ಸಂಭವಿಸುವ ಸ್ಥಳಗಳನ್ನು ಬ್ಲಾಕ್‌ಸ್ಪಾಟ್‌ ಎಂದು ಗುರುತಿಸುತ್ತದೆ. ಹೀಗೆ ಗುರುತಿಸಿದ ಅಪಘಾತ ವಲಯಗಳಲ್ಲಿ ಸಂಚಾರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಈ ಜಾಗಗಳಲ್ಲಿ ಅಪಘಾತಗಳು ಸಂಭವಿಸಲು ಕಾರಣ ಏನು ಎಂಬ ನಿಖರ ಮಾಹಿತಿ ಪಡೆದು, ಅವುಗಳ ಪರಿಹಾರ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಬ್ಲಾಕ್‌ಸ್ಪಾಟ್‌ಗಳ ಬಗ್ಗೆ ಚರ್ಚಿಸಿ ಅಲ್ಲಿ ಕೈಗೊಳ್ಳ ಬೇಕಾದ ನಿವಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಬ್ಲಾಕ್‌ಸ್ಪಾಟ್‌ ಗುರುತಿಸಿಲ್ಲ: ದೇಶದ ವಿವಿಧ ಹೆದ್ದಾರಿಗಳಲ್ಲಿ ಪ್ರತಿವರ್ಷ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಹೆದ್ದಾರಿ ಪ್ರಾಧಿಕಾರ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ, ಎನ್‌ಎಚ್‌ 275ನ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚಾರ ಪ್ರಾರಂಭ ವಾಗಿ 10 ತಿಂಗಳು ಕಳೆಯುತ್ತಾ ಬಂದಿ ದ್ದರೂ, ಬ್ಲಾಕ್‌ಸ್ಪಾಟ್‌ ಗುರುತಿಸುವ ಕೆಲಸ ಮಾಡಿಲ್ಲ. ಎಕ್ಸ್‌ಪ್ರೆಸ್‌ ಹೈವೇನಲ್ಲಿ ಎಲ್ಲೆಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದೆ, ತೀವ್ರ ತೆರನಾದ ಅಪಘಾತಗಳು ಸಂಭವಿಸುವ ಸ್ಥಳಗಳು ಯಾವ್ಯಾವು ಎಂದು ಗುರುತಿಸಿ, ಈ ಸ್ಥಳದಲ್ಲಿ ಅಪಘಾತ ನಡೆಯುವುದಕ್ಕೆ ಕಾರಣವಾದ ಅಂಶಗಳನ್ನು ಪತ್ತೆಮಾಡಿ ಸೂಕ್ತ ಕ್ರಮ ಕೈಗೊಂಡಲ್ಲಿ ಪ್ರಯಾಣಿಕರ ಜೀವ ಉಳಿಸಲು ಸಹಕಾರಿ ಆಗುತ್ತದೆ. ಇನ್ನಾದರೂ, ಹೆದ್ದಾರಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಬೇಕಿದೆ.

ಪ್ರಯಾಣಿಕರಿಗೆ ಪೊಲೀಸರಿಂದ ಸಂಚಾರ ಜಾಗೃತಿ:

ರಾಮನಗರ: ಎಕ್ಸ್‌ಪ್ರೆಸ್‌ ವೇನಲ್ಲಿ ಹೆಚ್ಚುತ್ತಿರುವ ಸಾವಿನ ಸರಣಿ ತಗ್ಗಿಸಲು ಕೊನೆಗೂ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡಿದೆ. ಡೆತ್‌ ವೇ ಆಗಿರುವ ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಟೋಲ್‌ ಬಳಿ ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪೊಲೀಸ್‌ ಅಧಿಕಾರಿಗಳು ಕೈಗೊಂಡಿದ್ದಾರೆ. ಸುರಕ್ಷಿತ ಪ್ರಯಾಣಕ್ಕೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ವಾಹನ ಚಾಲಕರಿಗೆ ಟೋಲ್‌ನಲ್ಲೇ ಪೊಲೀಸರು ಪಾಠಮಾಡು ತ್ತಿದ್ದಾರೆ. ಇನ್ನು ಮುದ್ರಿತ ಕರಪತ್ರವನ್ನು ನೀಡಿ ಪ್ರಯಾ ಣಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಟೋಲ್‌ ಬಳಿ ಮೈಕ್‌ ಅಳವಡಿಸಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ.

ಅಪಘಾತ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಸಲಹೆ: ಬೆಂ-ಮೈ ಎಕ್ಸ್‌ಪ್ರೆಸ್‌ ಹೆ„ವೆಯಲ್ಲಿ ಸಂಭವಿಸಿರುವ ಅಪಘಾತಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ಇಲಾಖೆ 54 ಸ್ಥಳಗಳನ್ನು ಗುರುತಿಸಿದ್ದು, ಎಂಜಿನಿಯರಿಂಗ್‌ ಪಾಲ್ಟ್‌ಗಳನ್ನು ಈ ಸ್ಥಳದಲ್ಲಿ ಗುರುತು ಮಾಡಿ ಸಮಸ್ಯೆ ಪರಿಹರಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆ ನೀಡಿದೆ. ಚನ್ನಪಟ್ಟಣ ವ್ಯಾಪ್ತಿಯಲ್ಲಿ 18 ಸ್ಥಳಗಳಲ್ಲಿ ಅತಿ ಹೆಚ್ಚು ಅಪಘಾತ ನಡೆದಿದ್ದು, ಇಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಬಿಡದಿ ವ್ಯಾಪ್ತಿಯಲ್ಲಿ ಕೆಲ ಜಾಗದಲ್ಲಿ ಅಪಘಾತಗಳು ಸಂಭವಿಸುತ್ತಿರುವುದನ್ನು ಗುರುತಿಸಿ ಈಸ್ಥಳಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗದ ಕ್ರಮಗಳ ಬಗ್ಗೆ ಪೊಲೀಸ್‌ ಇಲಾಖೆ ಸೂಚನೆ ನೀಡಿದೆ. ಕೆಲ ಶಿಫಾರಸುಗಳೊಂದಿಗೆ ಪೊಲೀಸ್‌ ಇಲಾಖೆ ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ.

 ಗ್ರಾಮ ಪರಿಮಿತಿಯಲ್ಲಿ ಪಾದಚಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿ ದಾಟಲು ಸ್ಕೈವಾಕ್‌ಗಳನ್ನು ನಿರ್ಮಿಸಬೇಕು.

 ರಸ್ತೆಯ ತಿರುವು, ಎಕ್ಸ್ಟಿಟ್‌, ಎಂಟ್ರಿ, ಹಗ್ಗು ದಿಣ್ಣೆಯ ಬಗ್ಗೆ ಚಾಲಕರಿಗೆ ಮಾಹಿತಿ ನೀಡುವ ಸೈನ್‌ಬೋರ್ಡ್‌ಗಳನ್ನು ಅಳವಡಿಸಬೇಕು.

 6 ಪಥದ ಎಕ್ಸ್‌ಪ್ರೆಸ್‌ ವೇ ಗೆ ಪ್ರಾಣಿಗಳು, ಜನರು ಪ್ರವೇಶಿಸದಂತೆ ಹಾಕಿರುವ ತಂತಿ ಬೇಲಿ ಅಲ್ಲಲ್ಲಿ ಕಿತ್ತು ಹೋಗಿದ್ದು, ಇದನ್ನು ದುರಸ್ತಿಗೊಳಿಸಬೇಕು.

 ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನ ಲೇನ್‌ಗಳಿಗೆ ವೇಗಮಿತಿ ಯನ್ನು ನಿಗದಿ ಮಾಡಬೇಕು. ವೇಗ ಮಿತಿ ದಾಟದಂತೆ ಕ್ರಮ ವಹಿಸಬೇಕು.

 ಪ್ರಯಾಣಿಕರಿಗೆ ಸೂಚನಾ ಫಲಕಗಳು, ಮಾಹಿತಿ ಫಲಕಗಳು ಕಾಣಿಸುವಂತೆ ರೇಡಿಯಂ ಹಾಗೂ ಸೋಲಾರ್‌ ಲೈಟ್‌ಗಳನ್ನು ಬಳಸಬೇಕು.

 ಪ್ಲೇಓವರ್‌, ಸೇತುವೆಗಳ ಬಳಿ ರಾತ್ರಿವೇಳೆ ವಿದ್ಯುತ್‌ ದೀಪಗಳು ಬೆಳಗುವಂತೆ ನೋಡಿಕೋಳ್ಳಬೇಕು. ಯಾವುದೇ ಕಾರಣಕ್ಕೆ ನಂದಿಸಬಾರದು.

 ಪೊಲೀಸ್‌ ಇಲಾಖೆ ಹೆದ್ದಾರಿಯಲ್ಲಿ ಗಸ್ತು ಮಾಡಲಿದ್ದು, ಇಲಾಖೆಯ ಜೊತೆಗೆ ಎನ್‌ ಎಚ್‌ಎಐ ಸಹ ಹೈವೇ ಪೆಟ್ರೋಲಿಂಗ್‌ ವ್ಯವಸ್ಥೆ ಮಾಡಬೇಕು.

 ಅನಗತ್ಯವಾಗಿ ವಾಹನಗಳು ನಿಲುಗಡೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಕೆಟ್ಟು ನಿಲ್ಲುವ ವಾಹನಗಳನ್ನು ತೆರವುಗೊಳಿಸಲು ಟ್ರೋಲ್‌ ವಾಹನದ ವ್ಯವಸ್ಥೆ ಮಾಡಬೇಕು. ಇದಕ್ಕೆ ಪೊಲೀಸ್‌ ಇಲಾಖೆ ಸಹ ಸಹಕಾರ ನೀಡುತ್ತದೆ.

ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣಕ್ಕೆ ಸಂಬಂಧಿಸಿದಂತೆ 54 ಸಂಗತಿಗಳನ್ನು ಗಮನಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಲಾಗಿದೆ. ಅಪಘಾತ ಪ್ರಮಾಣವನ್ನು ತಗ್ಗಿಸಲು ಎಲ್ಲಾ ರೀತಿಯ ಕ್ರಮವನ್ನು ಪೊಲೀಸ್‌ ಇಲಾಖೆ ಕೈಗೊಳ್ಳುತ್ತಿದೆ. ಸದ್ಯದಲ್ಲೇ ಅಪಘಾತ ಪ್ರಮಾಣ ತಗ್ಗಿಸಲಾಗುವುದು. ● ಕಾರ್ತಿಕ್‌ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ರಾಮನಗರ

ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇನಲ್ಲಿ ಬ್ಲಾಕ್‌ಸ್ಪಾಟ್‌ ಗುರುತಿಸಲು ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸದ್ಯದಲ್ಲೇ ರಸ್ತೆ ಸುರಕ್ಷತಾ ಸಭೆಯನ್ನು ನಡೆಸುವಂತೆ ಸಹ ತಿಳಿಸಿದ್ದು, ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಹ ಈ ಬಗ್ಗೆ ಚರ್ಚಿಸುತ್ತೇನೆ ● ಡಿ.ಕೆ.ಸುರೇಶ್‌, ಸಂಸದ

– ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.