ಅಕ್ರಮವಾಗಿ ಬೆಸ್ಕಾಂ ಸಾಮಗ್ರಿ ಸಂಗ್ರಹ
Team Udayavani, Apr 11, 2020, 6:03 PM IST
ಕನಕಪುರ: ಬೆಸ್ಕಾಂಗೆ ಸೇರಿದ ಲಕ್ಷಾಂತರ ಮೌಲ್ಯದ ಅಲ್ಯುಮಿಯಂ ವೈರ್ ಮತ್ತು ಸಾಮಗ್ರಿ ಕದ್ದು ಮಾರಾಟ ಮಾಡುತ್ತಿದ್ದ ಜಾಲ ಪತ್ತೆ ಹಚ್ಚಿರುವ ಬೆಸ್ಕಾಂ ಅಧಿಕಾರಿಗಳು, ಆದರೆ ಖದೀಮರ ವಿರುದ್ಧ ಪ್ರಕರಣ ದಾಖಲಿಸಲು ಮೀನಮೇಷ ಎಣಿಸುತ್ತಿದ್ದಾರೆ. ಅಜೀಜ್‌ನಗರದ ವಾಸಿ ಮೊಹಮ್ಮದ್ ಲಿಯಾಖತ್ ರ ಮನೆ ಮಹಡಿ ಮೇಲೆ ಬೆಸ್ಕಾಂನ ಲಕ್ಷಾಂತರ ಮೌಲ್ಯದ ಹೊಸ ಮತ್ತು ಹಳೆ ಅಲ್ಯೂಮಿನಿಯಂ ವಿದ್ಯುತ್ ವೈರ್ ಗಳನ್ನು ಅಕ್ರಮವಾಗಿ ಸಂಗಹ್ರಿಸಿದ್ದ ಖಚಿತ ಮಾಹಿತಿ ಮೇರೆಗೆ ಬೆಸ್ಕಾಂ ಇಲಾಖೆ ಸಹಾಯಕ ಅಭಿಯಂತರ ಸಂದೀಪ್ ಹಾಗೂ ಇಲಾಖೆ ಸಿಬ್ಬಂದಿ ಪರಿಶೀಲಿಸಿದಾಗ, ಅಕ್ರಮವಾಗಿ ಸಾಮಗ್ರಿ ಸಂಗ್ರಹಿಸಿರುವುದು ಖಚಿತ ಗೊಂಡಿದೆ. ಬಳಿಕ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಸ್.ಐ.ಲಕ್ಷ್ಮಣ್‌ಗೌಡ ಮತ್ತವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಆರ್.ಆರ್.ಸಂಖ್ಯೆ: ಕೆ.ಸಿ.1 ಸೇರಿದ ಮನೆ ಮಾಲಿಕರ ಮೇಲ್ಭಾಗದ ಛಾವಣಿಯಲ್ಲಿ ಬೆಸ್ಕಾಂ ಇಲಾಖೆ ವಿದ್ಯುತ್ ಕೇಬಲ್, ಮೀಟರ್ ಸಾಮಗ್ರಿ, ಅಲ್ಯುಮಿನಿಯಂ ಮತ್ತು ಕಬ್ಬಿಣದ ಸ್ಪೈರಲ್ ಕಂಡಕ್ಟರ್, ಯುಜಿ ಮತ್ತು ಫ್ಲಾಟ್ ಕೇಬಲ್, ಗೈ ವೈರ್, ಕಟರ್‌ಗಳು ಸೇರಿದಂತೆ ಹಲವು ವಸ್ತು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಸ್ಕಾಂ ಇಲಾಖೆ ಅಧಿಕಾರಿಗಳು ಖದೀಮರ ಬಗ್ಗೆ ಪ್ರಕರಣ ದಾಖಲಿಸದೆ ಮಾಹಿತಿಯನಷ್ಟೆ ನೀಡಿದ್ದಾರೆ. ಹೀಗಾಗಿ ಎಸ್‌ಐ ಲಕ್ಷ್ಮಣ್‌ಗೌಡ ಸ್ವಯಂ ದೂರು ದಾಖಲಿಸಿಕೊಂಡು ಖದೀಮರ ವಿರುದ್ಧ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ
Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.