ಪುನೀತ್ ರಾಜಕುಮಾರ್ ಕಂಚಿನ ಪ್ರತಿಮೆಗೆ ಭೂಮಿಪೂಜೆ
Team Udayavani, Dec 19, 2022, 2:42 PM IST
ಮಾಗಡಿ: ಸೂರ್ಯ, ಚಂದ್ರ ಇರುವವರೆಗೂ ಮೇರುನಟ ಡಾ. ಪುನೀತ್ ರಾಜಕುಮಾರ್ ಹೆಸರು ಚಿರಾಯುವಾಗಿರಲಿ. ಈ ನಾಡಿನಲ್ಲಿ ಮತ್ತೂಮ್ಮೆ ಪುನೀತ್ ಹುಟ್ಟಿ ಬರಲಿ ಎಂದು ಮಾಜಿ ಶಾಸಕ ಎಚ್. ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಾರಿ ನೌಕರರ ಸಂಘದ ಮುಂದೆ ನಿರ್ಮಾಣವಾಗುತ್ತಿರುವ ಡಾ. ಪುನೀತ್ ರಾಜಕುಮಾರ್ ಕಂಚಿನ ಪ್ರತಿಮೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಪುನೀತ್ ರಾಜಕುಮಾರ್ ನೀಡಿದ್ದಾರೆ. ಅವರು ನಿಧನದ ನಂತರ ಅದು ಬೆಳಕಿಗೆ ಬಂದಿದೆ. ಈ ಹಿನ್ನಲೆ ಅವರ ಅಭಿಮಾನಿಗಳು ಅವರ ಹೆಸರನ್ನು ಚಿರಾಯುವಾಗಿ ರುವಂತೆ ಮಾಡಲು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಸಹಕಾರ ನೀಡಲಾಗುತ್ತಿದೆ. ಈ ಮೂಲಕ ಪುನೀತ್ ರಾಜಕುಮಾರ್ ನಮ್ಮೆಲ್ಲರಿಗೂ ಮಾದರಿಯಾಗಿ ರುತ್ತಾರೆ ಎಂದರು.
ಒಂದೂವರೆ ತಿಂಗಳಿನಲ್ಲಿ ಪುತ್ಥಳಿ ಲೋಕಾರ್ಪಣೆ: ಇನ್ನು ಒಂದೂವರೆ ತಿಂಗಳಿನಲ್ಲಿ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿ ಅವರ ಮೂಲಕವೇ ಮಾಡುತ್ತೇವೆ. ಏಳುವರೇ ಅಡಿ ಎತ್ತರದ ಪುನೀತ್ ರಾಜಕುಮಾರ್ ಕಂಚಿನ ಪುತ್ಥಳಿ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಚಿತ್ರರಂಗಕ್ಕೆ ಡಾ.ರಾಜ್ ಕುಟುಂಬದ ಕೊಡುಗೆ ಅಪಾರ: ಡಾ.ರಾಜಕುಮಾರ್ ಅವರ ಕುಟುಂಬವು ಕಲೆಗಾಗಿ ಮೀಸಲು. ಪ್ರಪಂಚದಲ್ಲೇ ಕಲೆಯಲ್ಲಿ ದೊಡ್ಡ ಹೆಸರನ್ನು ಕೊಟ್ಟಿದ್ದಾರೆ. ಉನ್ನತ ಪ್ರಶಸ್ತಿಯಾದ ದಾದಾ ಸಾಹೇ ಪಾಲ್ಕಿ ಪ್ರಶಸ್ತಿ ಕೂಡ ಲಭಿಸಿದ್ದು, ಅವರ ಪುತ್ರ ಪುನೀತ್ ರಾಜಕುಮಾರ್ ಅವರು ಚಿಕ್ಕ ವಯಸ್ಸಿನಿಂದಲೇ ಕಲಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಚಿತ್ರರಂಗಕ್ಕೆ ಡಾ. ರಾಜ್ ಕುಟುಂಬದ ಕೊಡುಗೆ ಅಪಾರವಾಗಿದೆ. ಪುನೀತ್ ಅವರ ಆದರ್ಶವನ್ನು ಪುತ್ಥಳಿ ಅನಾವರಣ ಮಾಡುವ ಮೂಲಕ ಪಾಲನೆ ಮಾಡಲು ಅವರ ಅಭಿಮಾನಿ ಗಳು ಈಡಿಗರ ಸಂಘ, ಪುರಸಭೆ ಸದಸ್ಯರು ಎಲ್ಲರೂ ಒಳಗೊಂಡು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.