ಜೆಡಿಎಸ್‌ ಸಂಘಟನೆಗೆ ಬೂತ್‌ ಸಮಿತಿ

2023ರ ಚುನಾವಣೆ ವೇಳೆ ಎದುರಾಳಿ ಯಾರೇ ಆಗಿರಲಿ, ಸಮರ್ಥವಾಗಿ ಎದುರಿಸೋಣ: ನಿಖೀಲ್‌

Team Udayavani, Nov 13, 2021, 4:31 PM IST

ಜೆಡಿಎಸ್‌ ಸಂಘಟನೆಗೆ ಬೂತ್‌ ಸಮಿತಿ

ರಾಮನಗರ: “2023ರ ಸಾರ್ವತ್ರಿಕ ಚುನಾವಣೆ ಕೇವಲ ಕುಮಾರಸ್ವಾಮಿ ಮತ್ತು ತಮ್ಮ ಅಸ್ತಿತ್ವದ ಪ್ರಶ್ನೆಯಲ್ಲ, ಕ್ಷೇತ್ರದ ಕಾರ್ಯಕರ್ತರ ಅಸ್ತಿತ್ವದ ಪ್ರಶ್ನೆ, ಕ್ಷೇತ್ರವನ್ನು ಉಳಿಸಿಕೊಳ್ಳ ಬೇಕಾಗಿದೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮವೂ ಈಗ ಮುಖ್ಯ’ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಕೈಲಾಂಚ ಹೋಬಳಿ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಎದುರಾಳಿ ಯಾರೇ ಆಗಿರಲಿ, ಅದರ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವುದು ಬೇಡ. ಅವರನ್ನು ಸಮ ರ್ಥವಾಗಿ ಎದುರಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

 ಸರ್ವೆ: ಜೆಡಿಎಸ್‌ ದುರ್ಬಲವಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸರ್ವೆ ಮಾಡಿಸಿದ್ದೇವೆ. ಸರ್ವೆಯಲ್ಲಿ ಪಕ್ಷಕ್ಕೆ ಪೂರಕ ಅಂಶಗಳಿವೆ. ಪಕ್ಷ ದುರ್ಬಲವಾಗಿಲ್ಲ. ಮತದಾರರು ಈಗಲೂ ಜೆಡಿಎಸ್‌ ಪರವಾಗಿಯೇ ಇದ್ದಾರೆ. ಈ ವಿಚಾರದಲ್ಲಿ ತಾವು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ, ರಾಮನಗರಕ್ಕೆ ಅನ್ಯಾಯ ಮಾಡಿಲ್ಲ, ಮಾಡುವುದಿಲ್ಲ ಎಂದರು.

ಪಕ್ಷ ಸಂಘಟನೆ: 2018ರ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಸಿಕ್ಕ ಲೀಡ್‌ಗಿಂತ ಹೆಚ್ಚಿನ ಮತಗಳ ಲೀಡ್‌ಗಳಿಸಬೇಕಾಗಿದೆ. ಈ ಹಿನ್ನೆಲೆ ಪಕ್ಷವನ್ನು ಸಂಘಟಿಸ ಬೇಕಾಗಿದೆ. ಬೂತ್‌ ಕಮಿಟಿಗಳ ರಚನೆಯಾಗಬೇಕಾಗಿದೆ. ಕುಮಾರಸ್ವಾಮಿ ಅವರು ಕಾರ್ಯದೊತ್ತಡ ದಿಂದಾಗಿ ಬೂತ್‌ ಮಟ್ಟದ ಸಮಿತಿ ರಚನೆಯಾಗಿಲ್ಲ.

ಇದನ್ನೂ ಓದಿ:- ಚಿಕ್ಕಮಗಳೂರು: ಅತಂತ್ರ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರ ಬದುಕು

ಈಗ ಈ ಹೊಣೆಯನ್ನು ತಾವು ಹೊತ್ತುಕೊಂಡಿರುವು ದಾಗಿ, ಹೀಗೆ ರಚನೆಯಾಗುವ ಬೂತ್‌ ಮಟ್ಟದ ಕಮಿಟಿ ಯಲ್ಲಿ ಎಲ್ಲಾ ಜಾತಿ, ಸಮುದಾಯದ ಯುವಕರು, ಮಹಿಳೆಯರು ಇರಬೇಕು. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಅಷ್ಟರೊಳಗೆ ನಾವು ಪಕ್ಷ ಸಂಘಟನೆ ಮಾಡಬೇಕಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸ ಟ್ರೆಂಡ್‌!: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕುಮಾರಸ್ವಾಮಿ ಅವರು ಎಂದೂ ಹಸ್ತಕ್ಷೇಪ ಮಾಡಿದವರಲ್ಲ. ಆದರೆ, ಇತ್ತೀಚೆಗೆ ಒಂದು ಟ್ರೆಂಡ್‌ ಶುರುವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಧಾನಸಭೆ ಚುನಾವಣೆ ರೀತಿ ನಡೆಸಲಾಗುತ್ತಿದೆ. ನಾವೂ ಅದನ್ನು ಶುರು ಮಾಡಬೇಕಿದೆ. ಬುಡ ಸದೃಢವಾಗಿ ಇದ್ದಾಗ ನಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ನಮ್ಮ ಕಾರ್ಯಕರ್ತರಲ್ಲಿದ್ದ ಗೊಂದಲದಿಂದ ಚುನಾವಣೆಯಲ್ಲಿ ನಮಗೆ ಅಲ್ಪ ಹಿನ್ನಡೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನಗರಸಭೆ ಚುನಾವಣೆ ವೇಳೆ ಕುಮಾರಸ್ವಾಮಿ ಯಾವತ್ತೂ ಕಾರ್ಯಕರ್ತರು ಸಭೆ ನಡೆಸಿರಲಿಲ್ಲ. ಆದರೆ, ಮೊದಲ ಬಾರಿ ಸಭೆ ನಡೆಸಿ ಕಾರ್ಯಕರ್ತರ ಬೆನ್ನೆಲುಬಾಗಿ ನಿಂತರು. ಕೋವಿಡ್‌ ಕಾರಣದಿಂದ ಪ್ರಚಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಫ‌ಲಿತಾಂಶ ನಮಗೆ ವ್ಯತಿರಿಕ್ತವಾಗಿ ಬಂದಿದೆ ಎಂದು ನಗರಸಭೆ ಚುನಾವಣೆ ಫ‌ಲಿತಾಂಶವನ್ನು ವಿಶ್ಲೇಷಿಸಿದರು.

ಜಿಪಂ, ತಾಪಂ ಚುನಾವಣೆಬಗ್ಗೆಯೂ ನಿಗಾ ಇರಲಿ-

ನಗರಸಭೆ ಆಡಳಿತವನ್ನು ಸಂಪೂರ್ಣವಾಗಿ ನಮ್ಮ ವಶಕ್ಕೆ ತೆಗೆದುಕೊಳ್ಳುವ ದಿನ ಮುಂದೆ ಬರಲಿವೆ. ಅದಕ್ಕಾಗಿ ಇಂದಿನಿಂದಲೇ ಪ್ರಾಮಾಣಿಕವಾಗಿ ದುಡಿಯುವ ಶಪಥ ಮಾಡಬೇಕಿದೆ. ಜಿಪಂ, ತಾಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸೋಣ. ಜಿಪಂನಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯ ಪ್ರವೃತ್ತರಾಗೋಣ. ಇನ್ನುಬೂತ್‌ ಕಮಿಟಿಗಳ ರಚನೆ ವಿಚಾರದಲ್ಲಿ ತಮ್ಮ ತಂದೆ ಕುಮಾರಸ್ವಾಮಿಯವರು ಅನುಮತಿಸಿ ದ್ದಾರೆ. ಕೈಲಾಂಚ ಹೋಬಳಿ ಮತದಾರರು ಎಂದೂ ಪಕ್ಷದ ಕೈಬಿಟ್ಟಿಲ್ಲ. ಹಾಗಾಗಿ ಅಲ್ಲಿಂದಲೇ ಸಂಘಟನೆಗೆ ಚಾಲನೆ ನೀಡುವುದಾಗಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ತಿಳಿಸಿದರು.

ಕಾರ್ಯಾಗಾರ: ಬೂತ್‌ ಕಮಿಟಿಗಳ ರಚನೆ ನಂತರ ರಾಜ್ಯಮಟ್ಟದ ಕಾರ್ಯಾಗಾರ ನಡೆಸಿದಂತೆ ಕ್ಷೇತ್ರದ ಮುಖಂಡರಿಗೂ ಕಾರ್ಯಾಗಾರ ಹಮ್ಮಿಕೊಳ್ಳುವುದಾಗಿ. 4 ಹೋಬಳಿಗಳಿಗೆ ನಾಲ್ಕು ದಿನ ಕಾರ್ಯಾಗಾರ ನಡೆಸುವುದಾಗಿ, ಕಾರ್ಯಾಗಾರದಲ್ಲಿ ಸ್ವತಃ ಕುಮಾರಸ್ವಾಮಿಯವರೇ ಭಾಗವಹಿಸಲಿದ್ದಾರೆ ಎಂದರು.

 ಸಂಪರ್ಕದಲ್ಲಿರಿ: ಪ್ರತಿ ಬೂತ್‌ನಿಂದ 3 ಮಂದಿ ನನ್ನ ನೇರ ಸಂಪರ್ಕದಲ್ಲಿರಬೇಕು. ಅದಕ್ಕೆಂದೇ ಒಂದು ಸಿಮ್, ಫೋನ್‌ ಮೀಸಲಿರುತ್ತದೆ, ಎಲ್ಲರ ಹೆಸರು, ನಂಬರ್‌ ಅನ್ನು ಅದರಲ್ಲಿ ಸೇವ್‌ ಮಾಡಿರಲಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ತನಗೆ ನೇರವಾಗಿ ಕರೆ ಮಾಡಬಹುದು. ಚರ್ಚೆ ನಡೆಯಬೇಕು, ಆಗ ಮಾತ್ರ ಸಮಸ್ಯೆ ಹಾಗೂ ಅವುಗಳ ಪರಿಹಾರ ಸಾಧ್ಯ ಎಂದರು.

ಹಾರೋಹಳ್ಳಿ, ಮರಳವಾಡಿ ಹೋಬಳಿಗಳಲ್ಲಿ ಸಾಗುವಳಿ ಚೀಟಿ ಸಮಸ್ಯೆ ಹೊರತುಪಡಿಸಿದರೆ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೊರತೆ ಇಲ್ಲ, ಅದನ್ನು ಶೀಘ್ರ ಪರಿಹರಿಸಲಾಗುವುದು ಎಂದರು. ಸಭೆಯಲ್ಲಿ ತಾಲೂಕು ಅಧ್ಯಕ್ಷ ರಾಜಶೇಖರ್‌, ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ.ರಾಜು, ರಾಜ್ಯ ವಕ್ತಾರ ಬಿ.ಉಮೇಶ್‌, ಮುಖಂಡರಾದ ದೊರೆಸ್ವಾಮಿ, ಅಶ್ವತ್ಥ, ಪ್ರಕಾಶ್‌, ಮಾವಿನ ಸಸಿ ವೆಂಕಟೇಶ್‌, ರವಿ, ಗೂಳಿ ಕುಮಾರ್‌, ಕೃಷ್ಣ, ರಾಮಕೃಷ್ಣಯ್ಯ, ಮೋಹನ್‌, ಗೇಬ್ರಿ ಯಲ್, ಎಂ.ಜಿ.ಫೈರೋಜ್, ಸೊಹೇಲ್ ಪಾಷಾ, ಕಾಡನಕುಪ್ಪೆ ನವೀನ್‌, ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.