ನಿರಂತರ ಮಳೆ: ಕೊಚ್ಚಿ ಹೋದ ಸೇತುವೆ, ಸಂಕಷ್ಟದಲ್ಲಿ ಹಲವು ಗ್ರಾಮದ ಜನತೆ
Team Udayavani, Nov 22, 2021, 8:47 AM IST
ರಾಮನಗರ: ನಿರಂತರ ಮಳೆಯ ಕಾರಣ ಜಿಲ್ಲೆಯಲ್ಲಿ ಕೆರೆ, ಕಟ್ಟೆಗಳು ತುಂಬಿ ಕೋಡಿ ಹರಿದಿವೆ. ಹಳ್ಳ ಕೊಳ್ಳಗಳಲ್ಲಿಯೂ ನೀರು ಪ್ರವಾಹದಂತೆ ಹರಿಯುತ್ತಿದ್ದು, ಸೇತುವೆಗಳಿಗೆ ಅಪಾಯವೊಡ್ಡಿದೆ.
ರಾಮನಗರ ತಾಲೂಕಿನ ಮೆಳೇಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಯಲ್ಲಿ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಭಾನುವಾರ ರಾತ್ರಿ ಕೊಚ್ಚಿ ಹೋಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಪಟ್ಟಿ ವಿಳಂಬ; ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ನಾಯಕರ ಪಟ್ಟು
ಸೇತುವೆ ಕೊಚ್ಚಿ ಹೋಗಿದ್ದರಿಂದ ಮೆಳೇಹಳ್ಳಿ ಸೇರಿದಂತೆ ಐದಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇದೀಗ ಈ ಗ್ರಾಮಗಳ ಜನತೆ ಐದು ಕಿಲೋಮೀಟರ್ ಸುತ್ತಿ ಬಳಸಿ ಮಾಗಡಿ-ರಾಮನಗರ ರಸ್ತೆಗೆ ಬರಬೇಕಾಗಿದೆ.
ಹಳ್ಳಕ್ಕೆ ನಿರ್ಮಿಸಿದ ಸೇತುವೆ ಅನೇಕ ವರ್ಷಗಳಿಂದ ದುಸ್ಥಿತಿಯಾಗಿ ಬಿರುಕು ಬಿಟ್ಟಿತ್ತು. ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ಕಳೆದ ಹಲವು ದಿನಗಳಿಂದ ಸೇತುವೆ ಮೇಲೆ ನೀರು ಹರಿಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೆಳೇಹಳ್ಳಿ, ಮಾರೇಗೌಡನದೊಡ್ಡಿ, ಅರಳಿಮರದೊಡ್ಡಿ, ಜೋಗಿದೊಡ್ಡಿ, ಅಂಕನಹಳ್ಳಿ, ಹುಣಸೇದೊಡ್ಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಇದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.