ಬಸ್‌ ಪಲ್ಟಿ: 20 ಮಂದಿಗೆ ಗಾಯ

ಸ್ಕೂಟರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಮಿನಿ ಬಸ್‌

Team Udayavani, Jul 14, 2019, 2:20 PM IST

rn-tdy–2..

ತಾಲೂಕಿನ ಜಯಪುರ ಬಳಿ ರಸ್ತೆ ಬದಿಗೆ ಉರುಳಿದ ಬಸ್‌.

ರಾಮನಗರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ಶನಿವಾರ ಬೆಳಗ್ಗೆ ತಾಲೂಕಿನ ಜಯಪುರ ಗ್ರಾಮದ ಬಳಿ ನಡೆದಿದೆ.

ಘಟನೆಯಲ್ಲಿ ದ್ವಿ ಚಕ್ರ ವಾಹನ ಚಲಾಯಿಸುತ್ತಿದ್ದ ಹೊಸೂರು ಗ್ರಾಮದ ಬಿ.ಎಂ.ಶ್ವೇತಾ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗ್ರಾಮೆಂರ್ಟ್ಸ್ ವೊಂದರ ಮಹಿಳಾ ನೌಕರರು ಗಾಯಗೊಂಡ್ದಿದಾರೆ.

ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ: ಗಾಯಗೊಂಡ ನೌಕರರನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಬ್ಯಾಡರಹಳ್ಳಿಯ ಸವಿತಾ, ಶಾರದಮ್ಮ, ಉಜಿನಿಯ ಸೀತಮ್ಮ, ಸುಮಿತ್ರಾ, ಚಿಕ್ಕಬ್ಯಾಡರಹಳ್ಳಿಯ ಸುಮಿತ್ರಮ್ಮ, ಜಯಮ್ಮ, ಜ್ಯೋತಿ, ಲಕ್ಷ್ಮೀ, ಜೈಶೀಲಾ, ಲೀಲಾವತಿ, ಲಕ್ಷ್ಮೀದೇವಿ, ರಾಮನಗರ ತಾಲೂಕಿನ ಕ್ಯಾಸಾಪುರ ಗ್ರಾಮದ ಲಕ್ಷ್ಮೀ, ಸುನಿತಾ, ಮಂಗಳಗೌರಿ, ಚೌಡೇಶ್ವರಿ ಹಳ್ಳಿಯ ರೂಪಾ, ಶೈಲಜಾ, ಪ್ರಭಾವತಿ, ಸುಮಾ, ಹಿಪ್ಪೆ ಮರದದೊಡ್ಡಿ ಗ್ರಾಮದ ಅನಿತಾ, ಚಾಮನಹಳ್ಳಿಯ ರತ್ನ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬಿ.ಎಂ.ಶ್ವೇತಾ, ಜ್ಯೋತಿ ಸೇರಿದಂತೆ ಐದಾರು ಮಹಿಳೆಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತಕ್ಕೆ ವೇಗದ ಚಾಲನೆಯೇ ಕಾರಣ: ರಾಮನಗರದ ಬಸವನಪುರದಲ್ಲಿನ ಮಧುರಾ ಗಾರ್ಮೆಂಟ್ಸ್‌ನ ಮಹಿಳಾ ನೌಕರರು ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಲ್ಲಿನ ಖಾಸಗಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎಂ.ಶ್ವೇತಾ ಹೊಸೂರು ಗ್ರಾಮದಿಂದ ಶಾಲೆಗೆ ತಮ್ಮ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಜಯಪುರ ಗೇಟ್ ಬಳಿ ಹೋಗುತ್ತಿದ್ದಾಗ ಅದೇ ವೇಳೆ ಹಿಂಬದಿಯಿಂದ ಬಂದ ಬಸ್ಸು ಡಿಕ್ಕಿ ಹೊಡೆದಿದೆ.

ಚಾಲಕನ ನಿಯಂತ್ರ ಕಳೆದುಕೊಂಡ ಬಸ್ಸು ಸ್ಕೂಟರ್‌ ಸಮೇತ ರಸ್ತೆ ಬದಿಗೆ ಉರುಳಿದೆ. ಬಸ್ಸಿನಲ್ಲಿದ್ದ 20 ಮಂದಿ ಮಹಿಳೆಯರ ಪೈಕಿ, ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಕೂಟರ್‌ ಚಾಲಕಿಗೂ ಪೆಟ್ಟಾಗಿದೆ. ಬಸ್‌ ಉರುಳಿದ್ದನ್ನು ಗಮನಿಸಿದ ಸ್ಥಳೀಯರು ಹರಸಾಹಸ ಪಟ್ಟು, ಪ್ರಯಾಣಿಕರನ್ನು ರಕ್ಷಿಸಿ ಆಟೋ ಇತರೆ ಖಾಸಗಿ ವಾಹನಗಳಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೆ ಚಾಲಕನ ವೇಗದ ಚಾಲನೆಯೇ ಕಾರಣ ಎಂದು ದೂರುಗಳು ಕೇಳಿ ಬಂದಿವೆ.

ನಾಗರಿಕರ ಅಸಮಾಧಾನ: ಎರಡನೇ ಶನಿವಾರ ಎಂಬ ಕಾರಣಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಬ್ಬರು ವೈದ್ಯರು ಮತ್ತು ಇಬ್ಬರು ಸಹಾಯಕರಿಯರು ಮಾತ್ರ ಇದ್ದರು. ಹೀಗಾಗಿ ಗಾಯಾಳುಗಳ ಪೈಕಿ ಕೆಲವರು ಪ್ರಥಮ ಚಿಕಿತ್ಸೆಯ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಆಟೋಗಳಲ್ಲೇ ಪ್ರಯಾಣಿಸಿ ದಾಖಲಾದರು ಎಂದು ಸಾರ್ವಜನಿಕರು ಆರೊಪಿಸಿದ್ದಾರೆ.

ಮಾಲೀಕರೇ ಚಿಕಿತ್ಸಾ ವೆಚ್ಚ ನೀಡಲಿ: ಗಾರ್ಮೆಂಟ್ಸ್‌ ಮಾಲೀಕರು ನಿಗದಿಪಡಿಸಿದ್ದ ಬಸ್ಸಿನಲ್ಲೇ ಮಹಿಳಾ ನೌಕರರು ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ ಗಾಮೆಂರ್ಟ್ಸ್‌ ಮಾಲೀಕರೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಮಾಹಿತಿ ಪಡೆದು ಗಾರ್ಮೆಂಟ್ಸ್‌ನ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಗಾಯಾಳುಗಳ ಮಾಹಿತಿ ಸಂಗ್ರಹಿಸಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.