BY Election: ಯೋಗೇಶ್ವರ್ ಆಸ್ತಿ ಮೌಲ್ಯ 67 ಕೋ. ರೂ.
Team Udayavani, Oct 25, 2024, 12:48 AM IST
ರಾಮನಗರ: ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿ.ಪಿ. ಯೋಗೇಶ್ವರ್ ಕುಟುಂಬದ ಒಟ್ಟು ಆಸ್ತಿ ಒಂದೂವರೆ ವರ್ಷದ ಅವಧಿಯಲ್ಲಿ, 28.37 ಕೋಟಿ ರೂ.ಹೆಚ್ಚಳವಾಗಿದೆ. ಇವರ ಸಾಲದ ಮೊತ್ತ 9.85 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. 13 ವರ್ಷಗಳಲ್ಲಿ ಯೋಗೇಶ್ವರ್ ಆಸ್ತಿ 6 ಪಟ್ಟು ಹೆಚ್ಚಾಗಿದೆ. 2011ರಲ್ಲಿ 10.81 ಕೋಟಿ ಇದ್ದ ಆಸ್ತಿ 2014 ರಲ್ಲಿ 67.50 ಕೋಟಿ ಹೆಚ್ಚಳವಾಗಿದೆ.
ಯೋಗೇಶ್ವರ್ ಸಲ್ಲಿಕೆ ಮಾಡಿರುವ ಆಸ್ತಿ ವಿವರ ಪ್ರಮಾಣಪತ್ರದಲ್ಲಿ ತಮ್ಮ ಹೆಸರಿನಲ್ಲಿ ಒಟ್ಟು 27 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ 7 ಕೋಟಿ ಮೌಲ್ಯದ ಚರಾಸ್ತಿ ಇದ್ದರೆ, ಪತ್ನಿ ಶೀಲಾ ಹೆಸರಲ್ಲಿ 25 ಕೋಟಿ ಮೌಲ್ಯದ ಸ್ಥಿರಾಸ್ತಿ, 7 ಕೋಟಿ ಮೌಲ್ಯದ ಚರಾಸ್ತಿ ಇದ್ದು, ಪತಿ ಪತ್ನಿ ಇಬ್ಬರ ಒಟ್ಟಾರೆ ಆಸ್ತಿ ಮೌಲ್ಯ 67 ಕೋಟಿ ರೂ.ನಷ್ಟು ಇದೆ. ಕುಟುಂಬದ ಒಟ್ಟಾರೆ ಸಾಲ 29.29 ಕೋಟಿ ರೂ. ಇದೆ. ಯೋಗೇಶ್ವರ್ ವಿರುದ್ಧ 10 ಕ್ರಿಮಿನಲ್ ಕೇಸ್‌ಗಳು ಇದ್ದು, ಬೆಂಗಳೂರಿನ ವಿಶೇಷ ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಯೋಗೇಶ್ವರ್ ಬಿಎಸ್ಪಿ ಪದವೀಧರನಾಗಿದ್ದು, ವಾರ್ಷಿಕ 46.23 ಲಕ್ಷ ರೂ. ಆದಾಯ ಗಳಿಸುತ್ತಿದ್ದರೆ, ಇವರ ಪತ್ನಿ19.36 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.
ಭರತ್ ಬೊಮ್ಮಾಯಿ 16 ಕೋಟಿ ರೂ. ಆಸ್ತಿ
ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ 16.17 ಕೋಟಿ ಮೌಲ್ಯದ ಆಸ್ತಿ ಜತೆಗೆ 2.32 ಕೋಟಿ ರೂ. ಸಾಲ ಹೊಂದಿದ್ದಾರೆ. 2.03 ಲಕ್ಷ ನಗದು, ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ 4.05 ಲಕ್ಷ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 1.19 ಕೋಟಿ ಹೊಂದಿದ್ದಾರೆ. ಸಾರ್ವಜನಿಕ ಕಂಪೆನಿಗಳಲ್ಲಿ 1.74 ಲಕ್ಷ, ಖಾಸಗಿ ಕಂಪೆನಿಗಳಲ್ಲಿ 50 ಸಾವಿರ, ಪಾಲುದಾರಿಕೆಯಲ್ಲಿ 1.23 ಕೋಟಿ ರೂ., ಬಂಡವಾಳ ಹೂಡಿದ್ದಾರೆ. ಗೋಲ್ಡ್ ಚಿಟ್ ಫಂಡ್‌ನಲ್ಲಿ 70 ಸಾವಿರ, ಮ್ಯೂಚುವಲ್ ಫಂಡ್‌ನಲ್ಲಿ 10.20 ಲಕ್ಷ ತೊಡಗಿಸಿದ್ದಾರೆ. 81.61 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಭರತ್ ಬಳಿ ಯಾವುದೇ ವಾಹನವಿಲ್ಲ. ಇನ್ನಿತರ ಆದಾಯ, ಬಡ್ಡಿ ಸೇರಿ ಒಟ್ಟು 3.79 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಇಬ್ಬನಿ ಬಳಿ ಒಟ್ಟು 3.64 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ.
ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್, ಕೆಂಗೇರಿಯಲ್ಲಿ ಕೆಎಚ್‌ಬಿ ನಿವೇಶನ ಹಾಗೂ ಸೆಂಚುರಿ ಎಥೋಸ್ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್ ಸೇರಿ 2.83 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಭರತ್ ಅವರ ಪುತ್ರನ ಬಳಿ 40.47 ಲಕ್ಷ ಮೌಲ್ಯದ ಚರಾಸ್ತಿಯಿದೆ. ಭರತ್ ಬೊಮ್ಮಾಯಿ ಒಟ್ಟು 16.17 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಭರತ್ ಬೊಮ್ಮಾಯಿ ಗೃಹ, ವೈಯಕ್ತಿಕ ಸೇರಿ ಒಟ್ಟು 2.32 ಕೋಟಿ ಸಾಲ ಹೊಂದಿದ್ದಾರೆ.
ಅನ್ನಪೂರ್ಣ ಬಳಿ 1.70 ಕೋಟಿ ಆಸ್ತಿ
ಬಳ್ಳಾರಿ: ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪತಿಯಿಂದಲೇ ಸಾಲ ಪಡೆದು, ಅವರಿಗಿಂತ ಹೆಚ್ಚು ಸಾಲ ಹೊಂದಿದ್ದಾರೆ. ಪತಿ, ಸಂಸದ ಈ.ತುಕರಾಂ ಅವರಿಂದ 92 ಲಕ್ಷ, ಇತರ ವ್ಯಕ್ತಿಗಳಿಂದ 10.25 ಲಕ್ಷ ರೂ. ಸೇರಿ ಒಟ್ಟು 1.2 ಕೋಟಿ ರೂ. ಸಾಲ ಹೊಂದಿದ್ದಾರೆ. ಅನ್ನಪೂರ್ಣ ಅವರು ಯಶವಂತಪುರದಲ್ಲಿ 2 ನಿವೇಶನ, 560 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 44,37,315 ಸ್ಥಿರಾಸ್ತಿ, ಪೀಠೊಪಕರಣ, ಕಟ್ಟಡ ಸೇರಿ 63,21,380 ಚರಾಸ್ತಿ ಸೇರಿ ಒಟ್ಟು 1.7 ಕೋಟಿ ರೂ. ಮೌಲ್ಯದ ಸ್ಥಿರ, ಚರಾಸ್ತಿ ಹೊಂದಿದ್ದಾರೆ.
ಕೈಯಲ್ಲಿ 2.57 ಲಕ್ಷ ರೂ. ನಗದು ಹಣ ಹೊಂದಿದ್ದು, ಎಸ್‌ಬಿಐ, ಎಸ್‌ಪಿಎಸ್ ಸಂಡೂರು ಬ್ಯಾಂಕ್‌ನಲ್ಲಿ 25 ಲಕ್ಷಕ್ಕೂ ಹೆಚ್ಚು ಠೇವಣಿ ಹೊಂದಿದ್ದಾರೆ. ಪತಿ, ಸಂಸದ ಈ.ತುಕರಾಂ ಬ್ಯಾಂಕ್, ಇತರೆ ವ್ಯಕ್ತಿಗಳಿಂದ 30 ಲಕ್ಷ ಸಾಲ ಪಡೆದಿದ್ದಾರೆ. ಇವರ ಬಳಿ 350 ಗ್ರಾಂ ಚಿನ್ನಾಭರಣ, ಕಾರು, ನಿವೇಶನ ಸೇರಿ ಒಟ್ಟು 1.90 ಕೋಟಿ ಮೌಲ್ಯದ ಚರ, ಸ್ಥಿರಾಸ್ತಿ ಇದೆ. ಅನ್ನಪೂರ್ಣ ಮಕ್ಕಳಾದ ವಂದನಾ, ಚೈತನ್ಯಾ, ರಘನಂದನ ಬಳಿ ಕ್ರಮವಾಗಿ 120 ಗ್ರಾಂ, 40 ಗ್ರಾಂ ಹಾಗೂ ವಿವಿಧ ಬ್ಯಾಂಕ್‌ಗಳ ಖಾತೆಗಳಲ್ಲಿ 9.72 ಲಕ್ಷ ರೂ. ಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
BPL Card: ಪಡಿತರ ಚೀಟಿ ರದ್ದು ಮತ್ತು ಡಿಜಿಟಲೀಕರಣ “ಅಳಿಯ ಅಲ್ಲ ಮಗಳ ಗಂಡ..!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.