ಕಾಂಗ್ರೆಸ್ ನಾಯಕರ ಧೋರಣೆ ವಿರುದ್ಧ ಸಿಪಿವೈ ವಾಗ್ಧಾಳಿ
Team Udayavani, Mar 1, 2022, 12:51 PM IST
ಚನ್ನಪಟ್ಟಣ: ರಾಜ್ಯ ಕಾಂಗ್ರೆಸ್ ನಾಯಕರು ಜನ ಸಾಮಾನ್ಯರ ನೋವಿಗೆ ಸ್ಪಂದಿಸುವ ಬದಲು,ಯುವ ಜನತೆಯ ದಿಕ್ಕು ತಪ್ಪಿಸುವ ಕೆಲಸಮಾಡುವುದರ ಜೊತೆಗೆ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡಲು ವಿಷಬೀಜ ಬಿತ್ತುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ನಗರ ಹಾಗೂ ಗ್ರಾಮಾಂತರ ಬಿಜೆಪಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ “ಕಾಂಗ್ರೆಸ್ ಜನ ವಿರೋಧಿ ನೀತಿಗಳವಿರುದ್ಧ ಪ್ರತಿಭಟನಾ ಸಭೆ’ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‌ರಾಜ್ಯದ ಅಭಿವೃದ್ಧಿ, ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯಲು ವೇದಿಕೆಯಾಗಿದ್ದ ಸದನವನ್ನುಕಾಂಗ್ರೆಸ್ ದುರುಪಯೋಗಪಡಿಸಿಕೊಂಡು ಜನವಿರೋಧಿ ನೀತಿಯನ್ನು ತೋರ್ಪಡಿಸಿದೆ ಎಂದು ಟೀಕಿಸಿದರು.
ಅಹೋರಾತ್ರಿ ಧರಣಿ: ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಗದ್ದಲ ಎಬ್ಬಿಸಿ ಇಡೀ ಸದನದ ಉದ್ದೇಶವನ್ನೇ ಕಾಂಗ್ರೆಸ್ ಹಾಳು ಮಾಡಿತು.ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಸಚಿವಭೈರತಿ ಬಸವರಾಜು ಅವರ ವಿರುದ್ಧ ಆರೋಪಗಳನ್ನು ಮಾಡಿ ಸದನ ನಡೆಯದಂತೆ ಮಾಡಿದ್ದರು.ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸದೆ ಸುಖಾಸುಮ್ಮನೆ ಸದನದಬಾವಿಗಿಳಿದು ಅಹೋರಾತ್ರಿ ಧರಣಿ ನಡೆಸುವಮೂಲಕ ಮತ್ತೆ ಸದನವನ್ನು ಮುಂದೂಡುವಂತೆ ಮಾಡಿದರು ಎಂದು ದೂರಿದರು.
ಕಾಂಗ್ರೆಸ್ ನಾಯಕರಿಗೆ ಈಗ ಮೇಕೆದಾಟುಪಾದಯಾತ್ರೆ ಬಗ್ಗೆ ತವಕ, ತಲ್ಲಣ ಪ್ರಾರಂಭಆಗಿದೆ. ಈ ವಿಚಾರದಲ್ಲಿ ಸುಮ್ಮನೆ ಕೂತಿದ್ದತಮಿಳುನಾಡು ಈಗ ಎದ್ದು ಕೂರುವಂತಾಗಲುಇವರೇ ಕಾರಣರಾಗಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.
ಪ್ರತಿಕ್ರಿಯೆ ನೀಡಿಲ್ಲ: ಮೇಕೆದಾಟು ವಿಚಾರವಾಗಿತಮಿಳುನಾಡಿನ ಸಿಎಂ ಸ್ಟಾಲಿನ್ ಹೇಳಿಕೆವಿರುದ್ಧವಾಗಿ ಡಿ.ಕೆ. ಶಿವಕುಮಾರ್ ಒಂದುಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್‌ನಿಲುವೇನು? ಎಂಬುದನ್ನು ಮೊದಲು ಸ್ಪಷ್ಟವಾಗಿಹೇಳಬೇಕು. ಅದನ್ನು ಬಿಟ್ಟು ಪಾದಯಾತ್ರೆಹೆಸರಿನಲ್ಲಿ ನಾಟಕವಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸ್ವಾರ್ಥ ಸಾಧನೆಗಾಗಿ ಪಾದಯಾತ್ರೆ: ಮೇಕೆ ದಾಟು ಮಾತ್ರವಲ್ಲ, ರಾಜ್ಯದ ಯಾವುದೇ ನೀರಾವರಿ ಯೋಜನೆಗೂ ರಾಜ್ಯ ಬಿಜೆಪಿ ಬದ್ಧವಾಗಿದೆಎಂದು ಗೊತ್ತಿದ್ದರೂ, ರಾಜಕೀಯ ಉದ್ದೇಶ,ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಮೂಲ್, ಬಿಡಿಸಿಸಿ ಬ್ಯಾಂಕ್ ಮಾಜಿನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ನಗರಘಟಕದ ಅಧ್ಯಕ್ಷ ಶಿವಕುಮಾರ, ಜಯರಾಮ್,ಕೂರಣಗೆರೆ ರವಿ, ಮುದುಗೆರೆ ಜೆಕೆ, ವೀಠಲೇನಹಳ್ಳಿಕೃಷ್ಣೇಗೌಡ, ಚಕ್ಕೆರೆ ಜೆ.ಪಿ, ಸುಣಘಟ್ಟ ಆಶ್ವಥ್,ಪ್ರಸನ್ನ, ರಾಜೇಶ್, ಮಳೂರುಪಟ್ಟಣ ಕುಮಾರ್,ಮಲವೇಗೌಡ, ರವೀಶಣ್ಣ, ಯು.ಬಿ.ಚಂದ್ರು, ಚನ್ನೇಗೌಡ, ಕೃಷ್ಣಪ್ಪ, ರಾಮಚಂದ್ರು, ರಾಜಣ್ಣ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.