ಡಿ.ಕೆ ಶಿವಕುಮಾರ್ ಒಬ್ಬ ದೊಡ್ಡ ಕಳ್ಳ, ಫೋನ್ ಕದ್ದಾಲಿಕೆ ಆರೋಪ ಶುದ್ಧಸುಳ್ಳು: ಯೋಗೇಶ್ವರ್
Team Udayavani, Aug 24, 2020, 4:21 PM IST
ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಪರಿಷತ್ ಸದಸ್ಯ ಸಿ ಸಿ.ಪಿ. ಯೋಗೇಶ್ವರ್ ಮಾತಿನ ಸಮರ ಮುಂದುವರಿಸಿದ್ದಾರೆ. ‘ಡಿ.ಕೆ ಶಿವಕುಮಾರ್ ಒಬ್ಬ ದೊಡ್ಡ ಕಳ್ಳ. ಅವರ ಫೋನ್ ಕದ್ದಾಲಿಕೆ ಮಾಡಿ ನಮ್ಮ ಸರ್ಕಾರ ಯಾವ ರಾಜ್ಯ ಗೆಲ್ಲಬೇಕಾಗಿದೆ?’ ಎಂದು ಸಿ.ಪಿ. ಯೋಗೇಶ್ವರ್ ಕುಟುಕಿದ್ದಾರೆ.
ಚನ್ನಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿವೈ, ‘ಡಿಕೆಶಿ ಫೋನ್ ಟ್ಯಾಪಿಂಗ್ ಆರೋಪ ಮಾಡುತ್ತಿದ್ದಾರೆ. ಆದರೆ, ಅವರೇ ಒಬ್ಬ ಕಳ್ಳ. ಅವರು ಇನ್ನೊಬ್ಬರ ಮೇಲೆ ಆರೋಪ ಮಾಡೋಕೆ ಏನಿದೆ? ಫೋನ್ ಕದ್ದಾಲಿಕೆ ಆರೋಪ ಶುದ್ಧಸುಳ್ಳು. ಅವರ ಫೋನ್‍ನನ್ನು ಯಾವ ಉದ್ದೇಶಕ್ಕಾಗಿ ಕದ್ದಾಲಿಕೆ ಮಾಡಬೇಕು? ಅದರ ಅಗತ್ಯ ಏನಿದೆ? ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕಾಗಿದೆ?’ ಎನ್ನುವ ಮೂಲಕ ಡಿಕೆಶಿ ಆರೋಪಕ್ಕೆ ವ್ಯಂಗ್ಯವಾಗಿಯೇ ತಿರುಗೇಟು ನೀಡಿದರು.
‘ಡಿಕೆ ಶಿವಕುಮಾರ್ ಅವರೇ ಈ ಹಿಂದೆ ಫೋನ್ ಟ್ಯಾಪಿಂಗ್ ಮಾಡಿಸಿ, ಅದನ್ನು ನಮ್ಮ ಪಕ್ಷದ ಮೇಲೆ ಆರೋಪ ಹೊರಿಸಿದ್ದರು. ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಅವರು ಇಂತಹ ಆರೋಪ ಮಾಡುತ್ತಿದ್ದಾರೆ ಎಂದ ಯೋಗೇಶ್ವರ್, ಫೋನ್ ಕದ್ದಾಲಿಕೆ ಮಾಡುವುದರಲ್ಲಿ ಡಿಕೆಶಿ ಅನುಭವಿ’ ಎಂದು ಟೀಕಿಸಿದರು.
‘ಇನ್ನು ನರೇಗಾ ಹಣವನ್ನು ಕನಕಪುರದವರು ಜಾಸ್ತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಮೂರು ತಾಲೂಕುಗಳಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಜಿಲ್ಲೆಯಲ್ಲಿ ಹಣವನ್ನು ಸಮಾನ ಹಂಚಿಕೆ ಮಾಡಬೇಕು. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಸಮಯಕ್ಕೆ ಸರಿಯಾಗಿ ಒಬ್ಬರು ಅಧಿಕಾರಿಗಳ ಸಭೆ ಕರೆಯುತ್ತಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದಂತೆ, ಕನಕಪುರದವರು ಹಣ ಡ್ರಾ ಮಾಡಿಕೊಳ್ಳುತ್ತಾರೆ’ ಎಂದ ಯೋಗೇಶ್ವರ್, ಸಂಸದ ಡಿ.ಕೆ.ಸುರೇಶ್ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ‘ತಪ್ಪು ಮಾಹಿತಿಯಿಂದ ಟ್ವೀಟ್ ಮಾಡಿದ್ದೆ’: ವಿವಾದವಾಗುತ್ತಿದ್ದಂತೆ ಉಲ್ಟಾ ಹೊಡೆದ ಕಪಿಲ್ ಸಿಬಲ್
ಇನ್ನು ಎಂಎಲ್‌ಸಿ ಆಗಿ ನಾಮನಿರ್ದೇನಗೊಂಡ ಮರುದಿನವೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಯೋಗೇಶ್ವರ್, ‘ಮಾಜಿ ಸಿಎಂ ಎಚ್‍ಡಿಕೆ ಮತ್ತು ಡಿಕೆಶಿ ವಿರುದ್ಧ ಹೋರಾಡಲು ನನಗೆ ಕಷ್ಟವೇನಿಲ್ಲ. ಇವರಿಬ್ಬರೂ ರಿಟೈಡ್ ಆಗಿರುವ ಕುದುರೆಗಳು’ ಎಂದು ಕುಟುಕಿದ್ದರು.
ಇದೀಗ ಎಚ್.ಡಿ. ಕುಮಾರಸ್ವಾಮಿ ಪರ ಮೃದುಧೋರಣೆ ವ್ಯಕ್ತಪಡಿಸುತ್ತಿರುವ ಸಿಪಿವೈ, ‘ಬಿಜೆಪಿ ಸರ್ಕಾರವನ್ನು ಕುಮಾರಸ್ವಾಮಿ ಹೊಗಳುತ್ತಿದ್ದಾರೆ. ಅವರು ನಮ್ಮ ಸರ್ಕಾರದ ಜೊತೆ ಹೊಂದಾಣಿಕೆಯಿಂದ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಬಲಯುತವಾಗಿದ್ದಾರೆ. ಅವರು ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಲು ಶಕ್ತರಾಗಿದ್ದಾರೆ. ನಾನು ಕೂಡ ಅವರೊಂದಿಗೆ ಸಹಕರಿಸುತ್ತೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.