ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರ
Team Udayavani, Nov 14, 2022, 2:46 PM IST
ಕನಕಪುರ: ಆಶಾ ಫಾರ್ ಎಜುಕೇಷನ್ ಮತ್ತು ಶಿಕ್ಷಣ ಪೌಂಡೇಶನ್ ಸಹಯೋಗ ದೊಂದಿಗೆ ತಾಲೂಕಿನ 8 ಗ್ರಾಮ ಡಿಜಿ ವಿಕಾಸ ಗ್ರಂಥಾಲಯ ಕೇಂದ್ರಗಳಲ್ಲಿ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಶಿಕ್ಷಣ ಫೌಂಡೇಷನ್ ಮತ್ತು ಆಶಾ ಫಾರ್ ಎಜುಕೇಷನ್ ಸಂಸ್ಥೆ ಸಹಭಾಗಿ ತ್ವದಲ್ಲಿ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಆಯ್ಕೆಯಾದ ತಾಲೂಕಿನ 8 ಗ್ರಾಪಂ ಗ್ರಂಥಾಲಯಗಳಿಗೆ ಮೊಬೈಲ್, ಟೀವಿ ಹಾಗೂ ವೈಫೈ ರೂಟರ್ ಜೊತೆಗೆ ಒಂದು ವರ್ಷದ ಇಂಟರ್‌ನೆಟ್ ಡಿಜಿಟಲ್ ಸಾಮಗ್ರಿಗಳ ವಿತರಣೆ ಮಾಡಲಾಗಿತ್ತು. ಆ ಗ್ರಂಥಾಲಯಗಳಲ್ಲಿ ಪ್ರತಿ ತಿಂಗಳಿಗೊಂದ ರಂತೆ ಗ್ರಾಮ ಡಿಜಿ ವಿಕಾಸ ಗ್ರಂಥಾಲಯ ಕೇಂದ್ರಗಳಲ್ಲಿ ಯುವಕರು ಆಯ್ಕೆ ಮಾಡಿದ ವಿಷಯದ ಮೇಲೆ ಆನ್‌ಲೈನ್ ಮೂಲಕ ಕಾರ್ಯಗಾರ ಏರ್ಪಡಿಸಲಾಗಿತ್ತು. ನವೆಂಬರ್ ತಿಂಗಳಲ್ಲಿ ಆಯ್ಕೆಯಾಗಿದ್ದ ವೃತ್ತಿ ಮಾರ್ಗದರ್ಶನ ವಿಷಯದ ತರಬೇತಿ ಕಾರ್ಯಗಾರಕ್ಕೆ 8 ಗ್ರಂಥಾ ಲಯ ಕೇಂದ್ರದಿಂದ 185 ಯುವಕರು ಆನ್‌ಲೈನ್ ವೇದಿಕೆ ಮೂಲಕ ಭಾಗವಹಿಸಿದ್ದರು. ಜಿಎಚ್‌ಪಿಎಸ್ ಕಲ್ಲಹಳ್ಳಿ ಶಾಲೆಯ ಮುಖ್ಯೋ ಪಾಧ್ಯಯ ಕೆ.ಟಿ. ಶ್ರೀನಿವಾಸ ಮೂರ್ತಿ ರವರು ಆನ್‌ಲೈನ್ ವೇದಿಕೆ ಮೂಲಕ ವೃತ್ತಿ ಮಾರ್ಗದರ್ಶನ ತರ ಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಚೀಲೂರು, ಹಳ್ಳಿಮಾರನಹಳ್ಳಿ, ಮರ ಳವಾಡಿ, ಕೊಳಗೊಂಡನಹಳ್ಳಿ, ಟಿ. ಬೇಕುಪೆ, ದೊಡ್ಡ ಮುದುವಾಡಿ, ಕಬ್ಟಾಳು, ನಾರಾಯಣಪುರ ಗ್ರಂಥಾಲ ಯದ ಮೇಲ್ವಿಚಾರಕರು ಹಾಗೂ ಮಾರ್ಗ ದರ್ಶಕ ಕುಮಾರಸ್ವಾಮಿ, ಮುನಿಮಹಾ ದೇವ, ರಾಜಶೇಖರ್, ರಾಮಚಂದ್ರ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.