ಸಂಭ್ರಮದ ಬಾಣಂತಮಾರಮ್ಮ ಅಗ್ನಿಕೊಂಡೋತ್ಸವ

ವಿವಿಧ ಬೀದಿಗಳಲ್ಲಿ ಮಾರಮ್ಮ ದೇವಿ ಮೆರವಣಿಗೆ

Team Udayavani, Apr 25, 2019, 3:37 PM IST

ramanagar-tdy-2..

ಕನಕಪುರ: ನಗರದ ರಾಮನಗರ ರಸ್ತೆಯ ಮೇಗಳ ಬೀದಿಯಲ್ಲಿನ ಬಾಣಂತಮಾರಮ್ಮ ದೇವಿಯ ಅಗ್ನಿಕೋಂಡೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.

ಪ್ರತಿ ವರ್ಷ ಯುಗಾದಿ ಹಬ್ಬದ 15 ದಿನಗಳ ನಂತರ ಆಚರಣೆಯಾಗುವ ಬಾಣಂತ ಮಾರಮ್ಮನ ಕೊಂಡೋತ್ಸವಕ್ಕೆ ನಗರದ ಪ್ರಮುಖ ಬೀದಿಗಳು ವಿದ್ಯುತ್‌ದೀಪಗಳಿಂದ ಅಲಂಕಾರಗೊಂಡು ಯಳವಾರದ ಮೂಲಕ ಕೊಂಡೋತ್ಸವಕ್ಕೆ ಅಗತ್ಯವಾದ ಸೌದೆಗಳನ್ನು ವಾದ್ಯಮೇಳಗಳ ಮೂಲಕ ಕರೆತಂದು ಕಟ್ಟಿಗೆಗಳನ್ನು ರಾತ್ರಿಯಿಡಿ ಸುಟ್ಟು ಅಗ್ನಿ ಕೊಂಡಕ್ಕೆ ಸಿದ್ಧತೆ ಮಾಡಿ ನಂತರ ಬಾಣಂತ ಮಾರಮ್ಮನ ಕಲಶವನ್ನು ಹೊತ್ತ ಅರ್ಚಕ ಅಗ್ನಿಕೊಂಡ ಪ್ರವೇಶಿಸುವುದು ವಾಡಿಕೆಯಾಗಿದೆ.

ಬಾಣಂತಮಾರಮ್ಮನ ದೇವಾಲಯದಿಂದ ಮಧ್ಯರಾತ್ರಿಯಲ್ಲೇ ಬಾಣಂತಮಾರಮ್ಮ ದೇವಿಯ ಕಲಶದಲ್ಲಿ ಪ್ರತಿಷ್ಠಾಪಿಸಿ ಅರ್ಕಾವತಿ ನದಿಯ ದಡದಿಂದ ಪೂಜೆ ಮೂಲಕ ಮೆರವಣಿಗೆಯಲ್ಲಿ ದೇವರನ್ನು ಕರೆದೋಯ್ದು ಬುಧವಾರ ಬೆಳಗ್ಗೆ 8 ಗಂಟೆಗೆ ಅಗ್ನಿಕೊಂಡೋತ್ಸವದಲ್ಲಿ ಬಾಣಂತಮಾರಮ್ಮನ ಕಲಶವನ್ನು ಹೊತ್ತ ಅರ್ಚಕ ಅಗ್ನಿ ಪ್ರವೇಶ ಮಾಡಿ ಕೊಂಡ ಹಾಯುತ್ತಿದ್ದಂತೆ ನೆರೆದಿದ್ದ ಭಕ್ತರು ಜೈಕಾರ ಹಾಕಿ ಸಂಭ್ರಮಿಸಿದರು.

ಪಟಾಕಿಗಳ ಚಿತ್ತಾರ: ಬಾಣಂತಮಾರಮ್ಮ ದೇವಿಯನ್ನು ಅರ್ಕಾವತಿ ನದಿಯ ದಡದಿಂದ ಮೆರವಣಿಗೆ ಮೂಲಕ ಬೂದಕೇರಿ ರಸ್ತೆ , ಎಂ.ಜಿ. ರಸ್ತೆ , ಕಾಮನಗುಡಿ ರಸ್ತೆ ಮೂಲಕ ರಾಮನಗರ ರಸ್ತೆಗೆ ಬಂದು ನಂತರ ದೇವಾಲಯಕ್ಕೆ ತೆರಳುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆಯಾಗಿದ್ದು, ಅಂತೆಯೇ ಬೆಳಗಿನ ಜಾವ 4 ಗಂಟೆಗೆ ಮೆರವಣಿಗೆ ಆರಂಭವಾಗು ತ್ತಿದ್ದಂತೆ ಪಟಾಕಿಗಳ ಸದ್ದು ಮತ್ತು ಆಗಸದಲ್ಲಿ ಹಲವು ಬಗೆಯ ಚಿತ್ತಾರಗಳನ್ನು ಮೂಡಿಸುವ ಮೂಲಕ ಹಬ್ಬದ ಮೆರಗನ್ನು ಹೆಚ್ಚಿಸಿದವು.

ಬುಧವಾರ ಬೆಳಗಿನ ಜಾವ ಕೊಂಡೋತ್ಸವದ ನಂತರ ಬಾಣಂತಮಾರಮ್ಮ ದೇಗುಲದ ಸುತ್ತಮುತ್ತ ಪಕ್ಕದ ರಸ್ತೆಗಳಲ್ಲಿ ದೇವರ ಮೆರವಣಿಗೆ ನಡೆಸಲಾಗುತ್ತದೆ. ಇಂದು ನಗರದ ಮೇಗಳ ಬೀದಿ, ವಿವೇಕಾನಂದ ನಗರ, ಮೆಜೆಸ್ಟಿಕ್‌ ವೃತ್ತ, ಕುಂಬಾರರ ಕಾಲೋನಿ, ನವಗ್ರಹ ದೇವಾಸ್ಥಾನದ ಬಡಾವಣೆ, ಬಾಣಂತಮಾರಮ್ಮನ ಬಡಾವಣೆ, ಎಸ್‌. ಕರಿಯಪ್ಪ ರಸ್ತೆ, ಸೇರಿದಂತೆ ಹಲವು ಬಡಾವಣೆಗಳಲ್ಲಿ ದೇವರು ಕೊಂಡೋತ್ಸವಕ್ಕೆ ಮುನ್ನ ಮೆರವಣಿಗೆಯಲ್ಲಿ ಬರುವಾಗ ದಾರಿಯುದ್ದಕ್ಕೂ ಮೇಕೆಗಳನ್ನು ಬಲಿಕೊಟ್ಟು ನಂತರ ಹಬ್ಬದ ಪ್ರಯುಕ್ತ ಬಾಡೂಟ ಮಾಡಿ ಹಬ್ಬದಲ್ಲಿ ನೆಂಟರಿಗೆ ಉಣಬಡಿಸಲಾಗುತ್ತದೆ, ಶುಕ್ರವಾರ ಸಿಟಿಗಾವು, ಜಾತ್ರೆ  ನಡೆಯಲಿದೆ.

ಟಾಪ್ ನ್ಯೂಸ್

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Bajarang-Poonia

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ

ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.