Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ
ದೇವೇಗೌಡರು ಹಾಸನದಲ್ಲಿ ಕಣ್ಣೀರು ಹಾಕಲಿ, ಅಲ್ಲಿ ನೂರಾರು ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ
Team Udayavani, Nov 7, 2024, 6:45 AM IST
ರಾಮನಗರ: ಅಳುವ ಗಂಡಸನ್ನ ನಂಬಬಾರದು ಅಂತ ನಮ್ಮ ಕಡೆ ಗಾದೆ ಇದೆ. ಈ ಕುಮಾರಸ್ವಾಮಿ ಅಳುವ ಗಂಡಸು, ಯಾವತ್ತೂ ನಂಬಬೇಡಿ. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತಾ? ಕೆರೆ ನೀರು ತುಂಬುತ್ತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಅವರು, ಮೊಮ್ಮಗನನ್ನು ಗೆಲ್ಲಿಸಲು ದೇವೇಗೌಡರು ಇಳಿವಯಸ್ಸಿನಲ್ಲೂ ಇಲ್ಲಿ ಬಂದು ಕಣ್ಣಿರು ಹಾಕುವ ಬದಲು, ತಮ್ಮ ಇನ್ನೊಬ್ಬ ಮೊಮ್ಮಗನಿಂದ ಹಾಸನದಲ್ಲಿ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರಲ್ಲ, ಅಲ್ಲಿಗೆ ಹೋಗಿ ಕಣ್ಣಿರು ಹಾಕಲಿ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು.
ದೇವೇಗೌಡರು ಕಟುಕರಿಗೆ ಕಣ್ಣಿರು ಬರುವುದಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಅತ್ತರೆ ಏನು ಪ್ರಯೋಜನ? ಹಾಸನಕ್ಕೆ ಹೋಗಿ ಅಳಲಿ. ಮಂಡ್ಯದಲ್ಲಿ, ರಾಮನಗರದಲ್ಲಿ ಸೋತಿದ್ದ ನಿಖಿಲ್ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಕಣ್ಣೀರು ನಮ್ಮ ಪರಂಪರೆ, ನೀನು ಕಣ್ಣೀರು ಹಾಕಪ್ಪ, ಜನತೆ ನಿನಗೆ ಓಟು ಕೊಡುತ್ತಾರೆ ಎಂದು ದೇವೇಗೌಡರು ಹೇಳಿಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಕಣ್ಣೀರು ನಮ್ಮ ಕುಟುಂಬದ ಪರಂಪರೆ. ನೀನು ಕಣ್ಣೀರು ಹಾಕಪ್ಪ, ಜನ ನಿನಗೆ ಓಟು ಕೊಡ್ತಾರೆ ಎಂದು ದೇವೇಗೌಡರು ನಿಖಿಲ್ ಕುಮಾರಸ್ವಾಮಿ ಅವರಿಗೆ ಹೇಳಿಕೊಟ್ಟಿದ್ದಾರೆ.
ದೇವೇಗೌಡರು ತಮ್ಮ ಮೊಮ್ಮಗನನ್ನು ಗೆಲ್ಲಿಸಲಿಕ್ಕಾಗಿ ಈ ವಯಸ್ಸಿನಲ್ಲೂ ಇಲ್ಲಿಗೆ ಬಂದು ಕಣ್ಣೀರು ಹಾಕುತ್ತಿದ್ದಾರೆ. ದೇವೇಗೌಡರಿಗೆ ತಮ್ಮ ಇನ್ನೊಬ್ಬ ಮೊಮ್ಮಗನಿಂದ ಲೈಂಗಿಕ… pic.twitter.com/MBbstkjHKl— Siddaramaiah (@siddaramaiah) November 6, 2024
ಸಿದ್ದರಾಮಯ್ಯನಿಗೆ ಗರ್ವ ಮುರಿಯಬೇಕು ಎಂದು ದೇವೇಗೌಡರು ಹೇಳುತ್ತಾರೆ. ಅಧಿಕಾರ ಬಂದಾಗ ನಾನು ಗರ್ವ ಪಟ್ಟಿಲ್ಲ, ಅಧಿಕಾರ ಇಲ್ಲದಾಗ ಕಣ್ಣಿರು ಹಾಕಿಲ್ಲ. ದೇವೇಗೌಡರು ಈ ವಯಸ್ಸಿನಲ್ಲಿ ಸುಳ್ಳು ಹೇಳುತ್ತಾರೆ. ಗಾಂಧಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ದೇವೇಗೌಡರ ಇಡೀ ಕುಟುಂಬವೇ ಇಂದು ರಾಜಕಾರಣದಲ್ಲಿ ಇದೆ. ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಸ್ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
FIR Petition: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್
Poor Family: ಬಿಪಿಎಲ್ ಕಾರ್ಡ್ ಕೊಡಲು ಅಧಿಕಾರಿಗಳ “ಶ್ರಮ’
MUDA Case: ಇ.ಡಿ. ವಿಚಾರಣೆಗೆ ಮುಡಾ ಮಾಜಿ ಆಯುಕ್ತ ದಿನೇಶ್ ಹಾಜರು ?
MUDA Case: ಸಿಎಂ ಲೋಕಾಯುಕ್ತ ವಿಚಾರಣೆ: ವಿಪಕ್ಷ ಬಿಜೆಪಿ, ಜೆಡಿಎಸ್ ಅನುಮಾನ
MUST WATCH
ಹೊಸ ಸೇರ್ಪಡೆ
LMV ಲೈಸನ್ಸ್ ಇದ್ದರೆ ಸರಕು ವಾಹನ ಚಲಾಯಿಸಿ… 7.5 ಟನ್ವರೆಗಿನ ವಾಹನ ಓಡಿಸಲು ಅನುಮತಿ
Jammu and Kashmir Assembly: ಕಾಶ್ಮೀರ ವಿಶೇಷ ಸ್ಥಾನಮಾನ ಕೋರಿ ಅಸೆಂಬ್ಲಿಯಲ್ಲಿ ಗಲಾಟೆ
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್ ಘೋಷಣೆ
US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.