

Team Udayavani, Jan 30, 2025, 1:36 PM IST
ಸಾಂದರ್ಭಿಕ ಚಿತ್ರ
ರಾಮನಗರ: ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಒಂದೆಡೆ ಸರ್ಕಾರ ಬಿಗಿ ಕಾನೂನು ರೂಪಿಸಿದರೆ, ಕೆಲ ಮಂದಿ ಯಾವ ಕಾನೂನನ್ನು ಲೆಕ್ಕಿಸದೆ ಶಾಲೆಯಲ್ಲಿ ಕಲಿಯ ಬೇಕಾದ ಮಕ್ಕಳನ್ನು ಬಲವಂತದ ದುಡಿಮೆಗೆ ದೂಡುತ್ತಿದ್ದಾರೆ. ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಮಂಗಳವಾರ(ಜ.28) ಮಾಗಡಿಯಲ್ಲಿ 5 ಮಂದಿ ಬಾಲಕಾರ್ಮಿಕರನ್ನು ರಕ್ಷಣೆ ಮಾಡಿರುವುದೇ ಸಾಕ್ಷಿಯಾಗಿದೆ.
ಬಾಲಕಾರ್ಮಿಕ ಪದ್ಧತಿಯನ್ನು ನಿರ್ಬಂಧಿಸಿರುವ ಸರ್ಕಾರ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳಬಾರದು, 14ರಿಂದ 18 ವರ್ಷ ವಯಸ್ಸಿನ ಒಳಗಿನವರನ್ನು ಕೆಲ ಅಪಾಯಕಾರಿ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ನಿಷೇದ ವಿಧಿಸಿದೆಯಾದರೂ 14 ವರ್ಷದೊಳಗಿನ ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿ ರುವುದು ಅಧಿಕಾರಿಗಳ ದಾಳಿಯಿಂದ ಬಹಿರಂವಾಗುತ್ತಿದೆ.
30 ಮಂದಿ ಬಾಲಕಾರ್ಮಿಕರು ಪತ್ತೆ: ಜಿಲ್ಲೆಯಲ್ಲಿ ಕಳೆದೊಂದು ವರ್ಷಗಳ ಅವಧಿಯಲ್ಲಿ ನಡೆಸಿರುವ ದಾಳಿಯಲ್ಲಿ 30 ಮಂದಿ ಬಾಲಕಾರ್ಮಿಕರು ಪತ್ತೆಯಾಗಿರುವುದು, ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ. ಅಧಿಕಾರಿಗಳ ದಿಢೀರ್ ದಾಳಿ, ಕೆಲ ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ಬಾಲಕಾರ್ಮಿ ಕರನ್ನು ಪತ್ತೆ ಮಾಡಲಾಗುತ್ತಿದೆ. ಇನ್ನೂ ಸಾಕಷ್ಟು ಪ್ರಕರಣಗಳಲ್ಲಿ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಪತ್ತೆಯೇ ಆಗುತ್ತಿಲ್ಲ.
ಜಿಲ್ಲಾಕೇಂದ್ರದಲ್ಲೇ ಹೆಚ್ಚು: ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ಒಂದು ವರ್ಷದ ಅವಧಿಯಲ್ಲಿ 218ಕ್ಕೂ ಹೆಚ್ಚು ಬಾರಿ ದಾಳಿ ನಡೆಸಿದೆ. ಸಾರ್ವಜನಿಕ ದೂರು, ಇಲಾಖಾ ತಪಾಸಣೆಯ ಹೆಸರಿನಲ್ಲಿ ಹಲವು ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ವ್ಯಾಪಕವಾಗಿ ದಾಳಿ ನಡೆಯುತ್ತಿದೆಯಾದರೂ ಇನ್ನೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಾಗದಿ ರುವುದು ಮಾತ್ರ ವಿಷಾದನೀಯ.
ಶಾಲೆಬಿಟ್ಟು ದುಡಿಮೆ ನಿಂತ ಮಕ್ಕಳು: ಶಿಕ್ಷಣವು ಮೂಲಭೂತ ಹಕ್ಕಾಗಿಸಿದ್ದು, ಪ್ರತಿಯೊಂದು ಮಗುವಿಗೂ 14 ವರ್ಷಗಳ ವರೆಗೆ ಕಡ್ಡಾಯವಾಗಿ ಶಿಕ್ಷಣ ದೊರೆಯಬೇಕು ಎಂದು ಸರ್ಕಾರ ನಿಯಮ ರೂಪಿಸಿದೆಯಾದರೂ, ಹಲವು ಮಕ್ಕಳು ಶಾಲೆಯಲ್ಲಿ ಕಲಿವ ಸಮಯದಲ್ಲಿ ಬಾಲಕಾರ್ಮಿಕರಾಗಿ ಗ್ಯಾರೇಜ್ ಗಳಲ್ಲಿ, ಹೋಟೆಲ್‌ಗಳಲ್ಲಿ, ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಾರ್ಮಿಕ ಇಲಾಖೆ ದಾಳಿ ಮಾಡಿ ರಕ್ಷಣೆ ಮಾಡಿದ ಬಾಲ ಕಾರ್ಮಿಕ ಮಕ್ಕಳ ಮೇಲೆ ನಿಗಾವಹಿಸಬೇಕು. ಅಧಿಕಾರಿಗಳು ರಕ್ಷಣೆ ಮಾಡಿದ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳಬೇಕು. ಆದರೆ, ರಕ್ಷಣೆಯಾದ ಮಕ್ಕಳನ್ನು ಮತ್ತೆ ದುಡಿಮೆಗೆ ನೂಕಿರುವ ಪ್ರಕರಣಗಳಲ್ಲಿ ಕಂಡು ಬಂದಿದ್ದು, ಕಾರ್ಮಿಕ ಇಲಾಖೆ ಈಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ.
2.20 ಲಕ್ಷ ರೂ. ದಂಡವಸೂಲಿ: ಕಾರ್ಮಿಕ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಬಾಲಕಾರ್ಮಿಕರ ವಿರುದ್ಧ ದಾಳಿ ಮಾಡಿ ಇದುವರೆಗೆ 2.20 ಲಕ್ಷ ರೂ. ದಂಡ ವಿಧಿಸಲಾಗಿದೆ. ಮಕ್ಕಳನ್ನು ಬಲವಂತವಾಗಿ ದುಡಿಮೆ ಮಾಡಿಸಿಕೊಳ್ಳುವ ವ್ಯಕ್ತಿಗಳಿಗೆ ಮೊದಲ ಬಾರಿಗೆ ದಂಡ ವಿಧಿಸಲಾಗುವುದು. ಮತ್ತೆ ಇದೇ ಪ್ರಕರಣ ಮುಂದುವರಿದರೆ ದಂಡದ ಮೊತ್ತವನ್ನು ಹೆಚ್ಚಿಸುವ ಜತೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು.
ಇನ್ನು ಜಿಲ್ಲಾದ್ಯಂತ ಕಾರ್ಮಿಕ ಇಲಾಖೆ ಹಲವು ಜಾಗೃತಿ ಶಿಬಿರಗಳನ್ನು ಆಯೋಜಿಸಿ ಮಕ್ಕಳನ್ನು ಬಲವಂತದ ದುಡಿಮೆಗೆ ಬಳಸಿಕೊಳ್ಳುವುದರ ವಿರುದ್ಧ ಅರಿವು ಮೂಡಿಸಲಾಗುತ್ತಿದೆ. ಈ ನಡುವೆ ಬಲವಂತವಾಗಿ ದುಡಿಮೆಗೆ ನೂಕಲಾಗುತ್ತಿದೆ.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ನಿಮೂರ್ಲನೆ ಮಾಡಲು ನಮ್ಮ ಇಲಾಖೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ನಮ್ಮ ಇಲಾಖೆ ಜತೆ ಸಹಕರಿಸಿ, ಮಕ್ಕಳ ಬಲವಂತದ ದುಡಿಮೆಯ ವಿರುದ್ಧ ಮಾಹಿತಿ ನೀಡಬೇಕಿದೆ. ಯಾರೇ ಮಕ್ಕಳನ್ನು ದುಡಿಮೆಗೆ ಬಳಸಿಕೊಂಡರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ●ನಾಗೇಂದ್ರ, ರಾಮನಗರ ಕಾರ್ಮಿಕಾಧಿಕಾರಿ
–ಸು.ನಾ.ನಂದಕುಮಾರ್
ಹೈಕೋರ್ಟ್ ಗರಂ ಬೆನ್ನಲ್ಲೇ ಎಚ್‌ಡಿಕೆ, ಸಂಬಂಧಿಯ ಜಮೀನು ಸರ್ವೆ ಕಾರ್ಯ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು
Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು
Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
You seem to have an Ad Blocker on.
To continue reading, please turn it off or whitelist Udayavani.