ಅದ್ಧೂರಿ ಆಚರಣೆಗೆ ನೀತಿ ಸಂಹಿತೆ ಅಡ್ಡಿ
Team Udayavani, Apr 4, 2019, 3:00 AM IST
ಕನಕಪುರ: ಪ್ರಸ್ತುತ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಡಾ. ಬಾಬು ಜಗಜೀವನ ರಾಂ ಜಯಂತಿಯನ್ನು ಏ. 5 ರಂದು ತಾಲೂಕು ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡಲಾಗುವುದು, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ತಾಪಂ ಸಭಾಂಗಣದಲ್ಲಿ ಏ.14 ರಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಣೆ ಮಾಡುವುದಾಗಿ ತಹಶೀಲ್ದಾರ್ ಕೆ.ಕುನಾಲ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಜಗಜೀವನ ರಾಂ ಜಯಂತಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘ ಸಂಸ್ಥೆಯ ಮುಖಂಡರು, ದಲಿತ ಮುಖಂಡರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಈ ವೇಳೆ ದಲಿತ ಮುಖಂಡರು ಮಾತನಾಡಿ, ಡಾ.ಬಾಬು ಜಗಜೀವನ ರಾಂ ಜಯಂತಿ ಸಂದರ್ಭದಲ್ಲೇ ಚುನಾವಣೆಗಳು ಬಂದು ಮಾದರಿ ನೀತಿ ಸಂಹಿತೆಯ ನೆಪವೊಡ್ಡಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತದೆ. ಅಂಬೇಡ್ಕರ್ ಜಯಂತಿ ಸಂದರ್ಭದಲ್ಲೂ ಶಾಲಾ ಕಾಲೇಜುಗಳ ರಜೆ ಇರುತ್ತದೆ. ಚುನಾವಣೆಯ ಬಂದು ಅವರ ಜಯಂತಿಯನ್ನು ಅರ್ಥಗರ್ಭಿತವಾಗಿ ಎಲ್ಲರೂ ಸೇರಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ನೀತಿ ಸಂಹಿತೆ: ಚುನಾವಣಾ ನೀತಿ ಸಂಹಿತೆಗೂ ಜಗಜೀವನ ರಾಂ ಮತ್ತು ಅಂಬೇಡ್ಕರ್ ಜಯಂತಿ ಆಚರಣೆಗೂ ಸಂಬಂಧವಿಲ್ಲ. ನೀತಿ ಸಂಹಿತೆ ಇರುವಾಗ ಚುನಾಯಿತ ಜನಪ್ರತಿನಿ ಗಳು, ರಾಜಕೀಯ ಮುಖಂಡರು ವೇದಿಕೆಗೆ ಬರುವಂತಿಲ್ಲ. ಆದರೆ ಇಬ್ಬರು ನಾಯಕರ ಜಯಂತಿಯನ್ನು ಸರ್ಕಾರವು ಆಚರಣ ?ಮಾಡುತ್ತಿರುವುದರಿಂದ ಏನು ತೊಂದರೆ ಎಂದು ಪ್ರಶ್ನಿಸಿದರು.
ರಾಜಕೀಯ ವ್ಯಕ್ತಿಗಳನ್ನು ಹೊರತು ಪಡಿಸಿ ಸಂಘ ಸಂಸ್ಥೆಗಳು, ಇಲಾಖೆ ಅಧಿ ಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ಜಯಂತಿ ಆಚರಣೆಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಬೇಕೆಂದು ಒತ್ತಾಯಿಸಿದರು.
ಯಾರನ್ನು ಕೇಳುವುದು: ದಲಿತ ಮುಖಂಡರು ನೀವು ಇಂದು ಚುನಾವಣೆಗಾಗಿ ಬಂದಿದ್ದೀರಿ, ಚುನಾವಣೆ ಮುಗಿದ ಮೇಲೆ ಹೋಗುತ್ತೀರಿ, ನಾವು ಯಾರನ್ನು ಕೇಳುವುದೆಂದು ಪ್ರಶ್ನಿಸಿದರು. ನಾವು ಬದಲಾದರೂ ತಹಶೀಲ್ದಾರ್ ಯಾರಾದರೊಬ್ಬರು ಇರುತ್ತಾರೆ. ಸಭೆಯಲ್ಲಿ ನಡೆದ ಸಭಾ ನಡವಳಿಕೆಯನ್ನು, ಸಲಹೆ ಸೂಚನೆಗಳನ್ನು ದಾಖಲಿಸಲಾಗುತ್ತದೆ.
ಮುಂದೆ ಆಚರಣೆ ಮಾಡುವ ಬಗ್ಗೆ ಸಂಶಯ ಬೇಡವೆಂದು ತಿಳಿಸಿದರು. ಅಂತಿಮವಾಗಿ ಬಾಬು ಜಗಜೀವನ ರಾಂ ಜಯಂತಿಯನ್ನು ಏ. 5 ರಂದು ಸಾಂಕೇತಿಕವಾಗಿ ಆಚರಣೆ ಮಾಡಿ ಚುನಾವಣೆ ನಂತರದಲ್ಲಿ ಬಹಿರಂಗ ಸಾರ್ವಜನಿಕ ವೇದಿಕೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು.
ಅಂಬೇಡ್ಕರ್ ಜಯಂತಿಯನ್ನು 14 ರಂದೇ ತಾಪಂ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಮಾಡುವುದು. ಅಂದು ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿಸಿಕೊಡಲು ಯಾರಾದರೂ ಉಪನ್ಯಾಸಕರನ್ನು ಕರೆಸಬೇಕೆಂದು ತೀರ್ಮಾನಿಸಲಾಯಿತು.
ನಗರಸಭೆ ಆಯುಕ್ತೆ ವಿ.ಕೆ.ರಮಾಮಣಿ, ಶಿರಸ್ತೇದಾರ್ ಕೆ.ಎಸ್.ಶಿವಾನಂದ, ಸಮಾಜ ಕಲ್ಯಾಣ ಇಲಾಖೆ ಅ ಕಾರಿ ರಾಜು, ದಲಿತ ಮುಖಂಡರಾದ ಶಿವಲಿಂಗಯ್ಯ, ಮಲ್ಲಿಕಾರ್ಜುನ್, ನೀಲಿ ರಮೇಶ್, ಗುರುಮೂರ್ತಿ, ನವೀನ್, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.