70 ಲಕ್ಷ ರೂ.ನಲ್ಲಿ ಕಾಂಕ್ರೀಟ್ ರಸ್ತೆ
Team Udayavani, Apr 12, 2022, 3:09 PM IST
ಮಾಗಡಿ: ಕಕ್ಕಪ್ಪನಪಾಳ್ಯದ ಕಾಂಕ್ರೀಟ್ ರಸ್ತೆಯನ್ನು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ತಾಲೂಕಿನ ತಗ್ಗೀಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಕ್ಕಪ್ಪನಪಾಳ್ಯದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಭರವಸೆ ಈಡೇರಿಕೆ: ಚುನಾವಣೆ ವೇಳೆ ನನ್ನನ್ನು ಪ್ರೀತಿಯಿಂದ ಗ್ರಾಮಕ್ಕೆ ಬರಮಾಡಿಕೊಂಡು ನನಗೆ ಹೆಚ್ಚು ಮತಗಳನ್ನು ಕೊಡುವ ಮೂಲಕ ಬಹು ಮತದಿಂದ ಗೆಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ. ಅವರ ಪ್ರೀತಿ ವಿಶ್ವಾಸ ಚಿರ ಋಣಿ ಯಾಗಿದ್ದೇನೆ ಎಂದರು. ಚುನಾವಣೆ ಮತಕೇಳಲು ನಾನು ಬಂದ ವೇಳೆ ನಾನು ಈ ಗ್ರಾಮಕ್ಕೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಆರ್‌ಡಿಪಿಆರ್ ನಿಂದ ಸುಮಾರು 70 ಲಕ್ಷ ರೂ. ಅನುದಾನ ಮಂಜೂರಾತಿ ತಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ.
ಪಕ್ಷ ಸಂಘಟನೆಗೆಒತ್ತು: ಈ ಭಾಗದ ಸುತ್ತಮುತ್ತಲ ಏಳು ಹಳ್ಳಿಗಳ ಸಮಗ್ರ ಅಭಿವೃದ್ಧಿಗೊಳಿಸಲು ಸಂಕಲ್ಪ ತೊಟ್ಟಿದ್ದೇನೆ. ಜೆಡಿಎಸ್ ವರಿಷ್ಠರು ನನಗೆ ಜಿಲ್ಲೆಯ ಜವಾಬ್ದಾರಿ ಕೊಟ್ಟಿದ್ದಾರೆ. ರಾಮನಗರ ಕೇಂದ್ರ ಸ್ಥಾನದಲ್ಲಿ ಕಚೇರಿ ತೆರೆದು ವಾರಕ್ಕೊಮ್ಮೆ ಜೆಡಿಎಸ್ ಕಾರ್ಯಕರ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದು, ಸಂಘಟಿಸುವುದು ಮಾಡಿ, ಪಕ್ಷವನ್ನು ಸದೃಢವಾಗಿ ಕಟ್ಟುತ್ತೇನೆ. ತಾಲೂಕು ಕೇಂದ್ರಗಳಲ್ಲೂ ಅಧ್ಯಕ್ಷರನ್ನು ನೇಮಕ ಮಾಡಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡಲು ಪ್ರೋತ್ಸಾಹಿಸಲಾಗುವುದು. ಈ ಕ್ಷೇತ್ರದ ಅಭಿವೃದ್ಧಿ ಮಾಗಡಿ ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕನಾಗಿಸಿದ್ದಾರೆ ಎಂದ ಅವರ ನನ್ನ ಆಡಳಿತದ ಅವಧಿಯಲ್ಲಿ ಬೆಳಗುಂಬ ಬೆಟ್ಟದಲ್ಲಿ ಕ್ರಷರ್ ನಡೆಸಲು ಬಿಡುವುದಿಲ್ಲ, ಗ್ರಾಮದ ಜನರ ವಿರುದ್ಧವಾಗಿ ಎಂದೂ ನಡೆದುಕೊಳ್ಳುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
ಕ್ರಷರ್ ಅನುಕೂಲಕ್ಕೆ ಕಾಂಕ್ರಿಟ್ ರಸ್ತೆ: ಬೆಳಗುಂಬ ಬೆಟ್ಟದಲ್ಲಿ ಕ್ರಷರ್ ನಡೆಯುತ್ತಿತ್ತು. ಇದರಿಂದ ಕಕ್ಕಪ್ಪನಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರಿಗೆ ತೊಂದರೆಯಾಗಿದೆ. ಈ ಭಾಗದಲ್ಲಿರುವ ರೈತರೆಲ್ಲರೂ ಅರ್ಧ, ಒಂದು ಎಕರೆ ಜಮೀನು ಹೊಂದಿದ್ದೇವೆ. ಅರ್ಧ ಕಿಮೀ ಸಮೀಪವೇ ಕ್ರಷರ್ ಇರುವುದು, ಇದರಿಂದ ಮನೆ ಬಿರುಕುಬಿಟ್ಟಿವೆ. ರಾತ್ರಿ ವೇಳೆ ನಿದ್ದೆ ಮಾಡಲಾಗುತ್ತಿಲ್ಲ, ಜತೆಗೆ ಕ್ರಷರ್ ಶಬ್ಧಕ್ಕೆ ದನಕರುಗಳು ಕುರಿ,ಮೇಕೆಗಳು ಸಾವನ್ನಪ್ಪಿವೆ ಎಂದು ಕಕ್ಕಪ್ಪನಪಾಳ್ಯದ ಪುಷ್ಪಲತಾ ರಾಮಕೃಷ್ಣ ಆರೋಪಿಸಿದರು.
ಬಡಕುಟುಂಬದವರಾಗಿದ್ದು, ನಮಗೆ ಕ್ರಷರ್‌ನಿಂದ ತೊಂದರೆಯಾಗುತ್ತಿದೆ. ಕ್ರಷರ್ ಗೆ ನೀಡಿರುವ ಅನುಮತಿ ರದ್ದುಪಡಿಸಿ ನೆಮ್ಮದಿಯಿಂದ ಬದುಕು ನಡೆಸಲು ಸಹಕರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಸಧ್ಯಕ್ಕೆ ಕ್ರಷರ್ ನಿಲ್ಲಿಸಲಾಗಿದೆ. ಇದಕ್ಕೆ ಕೆಲವರು ನಮ್ಮ ವಿರುದ್ಧ ಪೊಲೀಸ್ ಕೇಸು ಎಂಬಬೆದರಿಕೆ ಹಾಕಿದ್ದಾರೆ. ಅದಕ್ಕೆ ನಾವು ಹೆದರುವುದಿಲ್ಲ, ನೆಮ್ಮದಿ ಜೀವನ ಬೇಕಷ್ಟೆ. ಕ್ರಷರ್‌ಗೆ ಅನುಕೂಲ ಮಾಡಿಕೊಡಲು ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದ್ದಾರೆ ಎಂಬ ಆರೋಪವನ್ನು ಮಾಡಿದರು.
ಪುರಸಭಾ ಮಾಜಿ ಅಧ್ಯಕ್ಷ ನರಸೇಗೌಡ, ಬೆಳಗುಂಬ ಗ್ರಾಪಂ ಅಧ್ಯಕ್ಷ ಬಿ.ಎನ್.ಕೋಟಪ್ಪ, ಉಪಾಧ್ಯಕ್ಷ ಸದಾಶಿವಯ್ಯ, ಕನಕಾ ಗಿರೀಶ್, ಶೋಭಾ, ಭೈರಪ್ಪ, ಗಂಗಲಕ್ಷ್ಮಮ್ಮ,,ದವಳಗಿರಿ ಚಂದ್ರಣ್ಣ, ರಾಮಣ್ಣ , ಪದ್ಮಾ, ದಿನೇಶ್, ಭರತ್, ಮುನಿರಾಜು, ರಮೇಶ್, ಶಿವಣ್ಣ, ವೆಂಕಟೇಶ್, ಕುಮಾರ್, ರಂಗಸ್ವಾಮಿ, ರವಿ ಜಯಕುಮಾರ್, ನರಸಿಂಹಯ್ಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.