ಹಿರಿಯರಿಗೆ ಪ್ರೀತಿ,ಗೌರವ ನೀಡಿ
Team Udayavani, Oct 17, 2020, 2:58 PM IST
ಮಾಗಡಿ: ಹಿರಿಯರ ಅನುಭಾವ ಕಿರಿಯರ ಜ್ಞಾನ ಸೇರಿದರೆ ಮಾತ್ರ ಸುಂದರ ಸಾಮರಸ್ಯ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ಮಾಗಡಿ ಜೆಎಂಎಫ್ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ಮನೋಹರ್ ಅಭಿಪ್ರಾಯಪಟ್ಟರು.
ಹಿರಿಯ ನಾಗರಿಕರ ದಿನಾಚರಣೆ, ಹೆಣ್ಣು ಮಕ್ಕಳ ಸಂರಕ್ಷಣಾ ದಿನಾಚರಣೆ ಹಾಗೂ ಸಂವಿಧಾನ ದಿನಾಚರಣೆ ಪ್ರಯುಕ್ತ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ನಡೆದ ಕಾನೂನು ಅರಿವು ನೆರವು ವರ್ಚುಯಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯರು ದೇವರಿದ್ದಂತೆ, ದೇವರಿಗೆ ತೋರುವಷ್ಟೆ ಶ್ರದ್ಧೆ, ಭಕ್ತಿ, ಪ್ರೀತಿ, ಮಮಕಾರವನ್ನು ಹೆತ್ತ ತಂದೆ, ತಾಯಿಗೂ ಕೊಡುವುದು ಮಕ್ಕಳ ಆದ್ಯ ಕರ್ತವ್ಯ. ಜೀವನದಲ್ಲಿ ಎಂದೂ ತಂದೆ, ತಾಯಿಯನ್ನು ಬೀದಿಪಾಲು ಮಾಡಬಾರದು. ಯಾರು ತಂದೆ ತಾಯಿಯನ್ನುಪ್ರೀತಿ ಕಾಣುತ್ತಾರೋ ಅವರು ಜೀವನದಲ್ಲಿ ಸಂತೋಷದಿಂದ ಬದುಕು ನಡೆಸಲು ಸಾಧ್ಯ ಎಂದರು.
ಜೆಎಂಎಫ್ಸಿ ನ್ಯಾಯಾಧೀಶ ಹನುಮಂತ್ ಆನಂತರಾವ್ ಸಾತ್ವಿಕ್ ಮಾತನಾಡಿ, ಸಣ್ಣಪುಟ್ಟ ವ್ಯಾಜ್ಯಗಳನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುವುದು ಸೂಕ್ತ. ಆಧುನಿಕ ಭರಾಟೆಯ ಯಾಂತ್ರಿಕ ಜೀವನ ಮನಷತ್ವವನ್ನೇ ನಾಶ ಮಾಡುತ್ತಿದೆ. ಮನುಷ್ಯ ಮಾನವೀಯ ಗುಣಗಳನ್ನು ಬೆಳಸಿಕೊಂಡು ಸಮಾಜದಲ್ಲಿ ಗುರು, ಹಿರಿಯರನ್ನು ಗೌರವದಿಂದಕಾಣಬೇಕೆಂದರು.
ಎಷ್ಟೇ ಕಷ್ಟವಾದರೂ ಹೆತ್ತ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡಬಾರದು. ಅವರು ಅಕ್ಕರೆಯಿಂದ ಸಾಕಿ ಸಲುಹಿ ವಿದ್ಯಾವಂತರಾಗಿ ಮಾಡಿದ್ದರಿಂದಲೇ ನಾವು ಗೌರವಯುತ ಸ್ಥಾನದಲ್ಲಿದ್ದೇವೆ ಎಂದರು. ನ್ಯಾಯಾಧೀಶೆ ನಳಿನಾ ಎಸ್.ಸಿ, ವಕೀಲರಾ ಕುಮಾರಿ ವತ್ಸಲಾ ಮಾತನಾಡಿದರು. ಸಿಡಿಪಿಒ ಇಲಾಖೆ ಅಧಿಕಾರಿ ಸುರೇಂದ್ರ, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.
ಹಿರಿಯ ನಾಗರಿಕರಿಗೆ ಸರ್ಕಾರ ಸಾಮಾಜಿಕ ಭದ್ರತೆ ಸೇರಿದಂತೆಹಲವಾರು ಸೌಲತ್ತುಗಳನ್ನು ನೀಡುತ್ತಿದೆ. ಇವುಗಳನ್ನು ಹಿರಿಯರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಕ್ಕಳು ವೃದ್ಧರಿಗೆ ಆಸ್ತಿಗಾಗಿ ತೊಂದರೆಕೊಟ್ಟರೆ ಕಾನೂನಿನಲ್ಲಿಕನಿಷ್ಠ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. –ಜೆ.ಲತಾ, ನ್ಯಾಯಾಧೀಶೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.