ರಸ್ತೆ ವಿಸ್ತರಣೆಗೆ ಭೂ ಮಾಲೀಕರ ಸಹಕಾರ ಅಗತ್ಯ


Team Udayavani, Dec 11, 2022, 1:20 PM IST

TDY-7

ಮಾಗಡಿ: ಪಟ್ಟಣದಲ್ಲಿ ಕೈಗೊಂಡಿರುವ ಕೆಸಿಎಫ್ ರಸ್ತೆ ವಿಸ್ತರಣೆಗೆ ಭೂಮಾಲೀಕರು ಸಹಕಾರ ನೀಡಿ ಹೃದಯ ಶ್ರೀಮಂತಿಕೆ ಮೆರೆಯಬೇಕಿದೆ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಕೆಸಿಫ್ ಅಧಿಕಾರಿಗಳ ಹಾಗೂ ಭೂಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭೂಮಾಲೀಕರು ಸಹಕಾರ ಕೊಟ್ಟರೆ ಕೆಸಿಫ್ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿಲು ಬದ್ಧನಾಗಿದ್ಧೇನೆ. ನೀವೆಲ್ಲ ಬೇಡ ಎಂದರೆ ನನ್ನ ತಕರಾರು ಏನೂ ಇಲ್ಲ. ಕೆಸಿಫ್ ಅಧಿಕಾರಿಗಳು ಜಂಟಿ ಮೆಸರ್‌ವೆುಂಟ್‌ ಸರ್ವೆ(ಜೆಎಂಸಿ)ಮಾಡಿ ವಿಸ್ತರಣೆಯ ಗೊಂದಲ ಸರಿಪಡಿಸಲಿದ್ದಾರೆ. ಇದು 15ರಡಿ ಪ್ರಾಥಮಿಕ ಅಧಿಸೂಚನೆಯಾಗಿದ್ದು, ಇದೇ ಅಂತಿಮವಲ್ಲ, ಜೆಎಂಸಿ ನಂತರ ಅಂತಿಮವಾಗಿ 19 ರಡಿ ಅಧಿಸೂಚನೆ ಹೊರಡಿಸಲಾಗುತ್ತದೆ. ಭೂಮಿ ಕಳೆದುಕೊಳ್ಳುವವರು ತಮ್ಮ ಭೂಸ್ವಾಧೀನಕ್ಕೆ ಸಿಗುವ ಪರಿಹಾರ ಕಡಿಮೆಯಾಗಿದ್ದರೆ, ನಾನೂ ಕಾನೂನು ಬದ್ಧವಾಗಿ ಹೆಚ್ಚಿನ ಪರಿಹಾರ ಕೊಡಿಸುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಪುರನಾಗರಿಕರನ್ನು ಗಣನೆಗೆ: ಪುರನಾಗರಿಕರನ್ನು ಗಣನೆಗೆ ತೆಗೆದುಕೊಂಡು ಕೆಸಿಫ್ ರಸ್ತೆ ಕಾಮಗಾರಿ ಕೈಗೊಳ್ಳುವ ಮೂಲಕ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಪುರನಾಗರಿಕರ ಭಾವನೆಯ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ, ಸುಮಾರು 50 ವರ್ಷದ ದೂರದೃಷ್ಟಿಯಿಂದ ಡಿಪಿಆರ್‌ ತಯಾರಾಗಿದೆ. ಸಾಧಕ-ಬಾಧಕ ನೋಡಿಕೊಂಡು ಪುರೋಭಿವೃದ್ಧಿಯೇ ನನ್ನ ಧ್ಯೇಯವಾಗಿದೆ. ಎಲ್ಲರೂ ಸಂಪೂರ್ಣ ಸಹಕಾರ ನೀಡಿ ಅಭಿವೃದ್ಧಿಗೆ ಕೈಜೋಡಿಸುವಂತೆ ಪುರನಾಗರಿಕರಿಗೆ ಮನವಿ ಮಾಡಿದರು.

ಸೂಕ್ತ ಪರಿಹಾರ ನಿಗದಿಪಡಿಸಿ: ಈ ಸಂಬಂಧ ಪುರನಾಗರಿಕರು ಒಕ್ಕರಲಿನಿಂದ ಒಪ್ಪಿಗೆ ಸೂಚಿಸಿದ್ದು, ಕೆಸಿಫ್ ಅಧಿಕಾರಿಗಳು ಜೆಎಂಸಿ ಮಾಡಿಸುವುದರಿಂದ ಯಾರ್ಯಾರು ಭೂಮಿ ಎಷ್ಟೆಷ್ಟು ರಸ್ತೆ ಅಗಲೀಕರಣ ಹೋಗುತ್ತದೆ ಎಂಬ ಚಿತ್ರಣ ಸಿಗುತ್ತದೆ. ಎಷ್ಟು ಭೂಮಿ ಉಳಿಸಿ ರಸ್ತೆ ಮಾಡಬಹುದು ಎಂಬ ಲೆಕ್ಕಚಾರವೂ ಸಿಗುತ್ತದೆ. ಜೆಎಂಸಿ ನಂತರ ಮತ್ತೂಂದು ಸಭೆ ಕರೆದು ಭೂ ಸ್ವಾಧೀನಕ್ಕೆ ಸೂಕ್ತ ಪರಿಹಾರ ನಿಗದಿಪಡಿಸಿ ಅಂತಿಮ ಗೊಳಿಸಲಾಗುವುದು. ಅಂಗಡಿ ಮಳಿಗೆ ಕಟ್ಟಿಕೊಳ್ಳುವವರು. ಹೈಟೆಕ್‌ ಕಾಂಫ್ಲೆಕ್ಸ್‌ ಕಟ್ಟಿಸಿ ಪಟ್ಣದ ಸೌಂದರ್ಯವನ್ನು ಹೆಚ್ಚಿಸುವಂತೆ ಶಾಸಕರು ಅಂಗಡಿ ಮಾಲೀಕರಿಗೆ ಸಲಹೆ ನೀಡಿದರು.

ಶಾಸಕರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ: ಗಣಪತಿ ದೇವಸ್ಥಾನದ ಟ್ರಸ್ಟಿ ಸತೀಶ್‌ ಮಾತನಾಡಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಒಪ್ಪಿಗೆ ಪಡೆದು ರಸ್ತೆ ಅಗಲೀಕರಣ ಮಾಡುವ ಅವಕಾಶವಿದೆ. ಪಟ್ಟಣದ ಎಲ್ಲರನ್ನು ಗಣನೆಗೆ ತೆಗೆದುಕೊಂಡು ರಸ್ತೆ ಅಗಲೀಕರಣವಾಗಲಿ. ರಸ್ತೆ ಮಧ್ಯ ಭಾಗದಿಂದ ಎರಡು ಬದಿಗೆ ಸಮನಾಗಿ ಸರ್ವೆ ಮಾಡಿಸಿ ರಸ್ತೆ ಅಗಲೀಕರಣ ಮಾಡಿಸಿ ತಾರತಮ್ಯ ಮಾಡಬೇಡಿ. ಏನೇ ರಸ್ತೆ ಅಗಲೀಕರಣವಾದರೂ ಪುರಪಿತೃಗಳ ಆಶಯದಂತೆ ಕಲ್ಯಾಗೇಟ್‌ ಗಣಪತಿ ದೇವಸ್ಥಾನ ಯಥಾಸ್ಥಿತಿ ಉಳಿಸಿ ಪುರನಾಗರಿಕರಿಗೆ ಧಾರ್ಮಿಕ ಕಾರ್ಯಗಳಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

ಕದಂಬ ಗಂಗರಾಜು ಮಾತನಾಡಿ, ಶಾಸಕ ಎ.ಮಂಜುನಾಥ್‌ ಅವರ ವೈಯಕ್ತಿಕ ಹಿತಾಸಕ್ತಿಯಿಲ್ಲ, ಶಾಸಕರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ ಸಲ್ಲಿಸಿದ ಅವರು, ಪುರೋಭಿವೃದ್ಧಿಯ ಹಿತಾದೃಷ್ಟಿಯಿಂದ ಕೆಸಿಫ್ ರಸ್ತೆ ಕೈಗೊಂಡಿದ್ದಾರೆ. ಎಲ್ಲರೂ ಸಹಕರಿಸೋಣ ಎಂದರು.

ಜನರ ಭಾವನೆಗೆ ಸ್ಪಂದಿಸಬೇಕು: ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್‌.ಜಿ.ರಮೇಶ್‌ ಗುಪ್ತಾ ಮತನಾಡಿ, ಶಾಸಕರು ಪುರನಾಗರಿಕರ ಭಾವನೆ ಸ್ಪಂದಿಸಬೇಕಿದೆ.ಪಟ್ಟಣದಲ್ಲಿ ನಾಲ್ಕು ಪಥದ ರಸ್ತೆ ಅನಾವಶ್ಯಕ ಎಂದರು.

ಸಂದೀಪ್‌, ಕೆ.ವಿ. ಬಾಲರಘು, ಎಂ.ಎನ್‌. ಮಂಜುನಾಥ್‌ ಮಾತನಾಡಿ, ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಜನರ ಭಾವನೆಗೆ ಸ್ಪಂದಿಸಬೇಕು. ಎಷ್ಟು ವಿಸ್ತೀರ್ಣ ಕಡಿಮೆ ಮಾಡಬಹುದು ಅಷ್ಟನ್ನು ಕಡಿಮೆ ಮಾಡಿಸಿ ಅಂಗಡಿ ಮಾಲೀಕರನ್ನು ಉಳಿಸಿ,ನಾವೂ ಕೂಡ ರಸ್ತೆ ಅಗಲೀಕರಣಕ್ಕೆ ಕೈಜೋಡಿಸುತ್ತೇವೆ ಎಂದು ಸಲಹೆ ನೀಡಿದರು. ಆನಂದ್‌, ಸಂದೀಪ್‌, ಮೋಹನ್‌ ,ಮೂರ್ತಿ, ಎಸ್‌.ನಾಗರಾಜಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಮು, ಭರತ್‌, ಎಂ.ಆರ್‌. ರಾಘವೇಂದ್ರ, ಕುಮಾರ್‌ ಎನ್‌.ಎನ್‌.ನಟರಾಜ್‌, ಮೂರ್ತಿ, ಶಿವಕುಮಾರ್‌, ಜಯರಾಮ್‌, ಪ್ರಭಾಕರ್‌, ದಿವಾಕರ್‌, ಶಿವರಾಜು ವೆಂಕಟೇಶ್‌, ಕೆಸಿಫ್ ಮುಖ್ಯ ಎಂಜಿನಿಯರ್‌ ವಿವೇಕ್‌, ಎಂಜಿನಿಯರ್‌ ಎಇಇ ಗುರುರಾಜ್‌, ಕುಮಾರ್‌ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

ಸಾರ್ವಜನಿಕರ ಸಂಚಾರಕ್ಕೆ ಸಹಕಾರಿ: ಪಟ್ಟಣದ ಕಲ್ಯಾಗೇಟ್‌ ವೃತ್ತದಲ್ಲಿರುವ ಗಣಪತಿ ದೇವಸ್ಥಾನವನ್ನು ಒಟ್ಟಾರೆ ಎಲ್ಲರ ಅಭಿಪ್ರಾಯದಂತೆ ಅಲ್ಲೇ ಉಳಿಸುತ್ತೇವೆ. ವೃತ್ತದಲ್ಲಿಯೇ ಸ್ಥಾಪಿಸಲಾಗುವುದು. ಹೊಸಪೇಟೆ ವೃತ್ತದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ತೆರುವುಗೊಳಿಸಿ ಹಿಂಭಾಗದಲ್ಲಿ ಸ್ಥಳ ಗುರುತಿಸಿ ಸ್ಥಾಪಿಸಲಾಗುವುದು. ಹೊಸಪೇಟೆ, ಹೊಂಬಾಳಮ್ಮನಕೆರೆ ಏರಿ ಬಳಿ ಮತ್ತು ಕಲ್ಯಾಗೇಟ್‌ ವೃತ್ತ ಹಾಗೂ ಸೋಮೇಶ್ವರಸ್ವಾಮಿ ವೃತ್ತಗಳಲ್ಲಿ ಜೆಂಕ್ಷನ್‌ ಮಾಡಲಾಗುವುದು. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚುತ್ತದೆ. ಸಾರ್ವಜನಿಕರ ಸಂಚಾರಕ್ಕೆ ಸಹಕಾರಿ ಆಗುತ್ತದೆ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

ಟಾಪ್ ನ್ಯೂಸ್

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.