ವೈದ್ಯರೇ ಸೋಂಕಿತರಿಗೆ ಧೈರ್ಯ ತುಂಬಿ
Team Udayavani, Jun 5, 2021, 5:36 PM IST
ರಾಮನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್), ಸಂಘಮಿತ್ರ ಸೇವಾವಾಣಿ ಕಾರ್ಯಕರ್ತರು ಮತ್ತು ಕುಣಿಗಲ್ ತಾಲೂಕು ಅಂಗರಹಳ್ಳಿಯಲ್ಲಿರುವ ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನದ ಶ್ರೀಬಾಲ ಮಂಜುನಾಥ ಮಹಾಸ್ವಾಮೀಜಿ ಅವರು ಇಲ್ಲಿನ ಕೋವಿಡ್ ಸೋಂಕಿತರಿಗೆ ಹಣ್ಣು ವಿತರಿಸಿ, ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.
ನಗರದ ಕೋವಿಡ್ ರೆಫರಲ್ ಆಸ್ಪತ್ರೆ, ಜಿಲ್ಲಾಸ್ಪತ್ರೆಯ ನೂತನ ಕಟ್ಟಡದಲ್ಲಿರುವ ಸೋಂಕಿತರಿಗೆ ಹಣ್ಣು, ಓದಲು ಕಿರು ಪುಸ್ತಕಗಳನ್ನು ವಿತರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸೋಂಕಿತರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ತಾವೇ ಚಿಕಿತ್ಸಾ ಕೇಂದ್ರಗಳು, ಕೋವಿಡ್ ಸೆಂಟರ್ಗಳಿಗೆ ಭೇಟಿ ನೀಡಿ ಸೋಂಕಿತರಿಗೆ ಹಣ್ಣುಗಳನ್ನು ವಿತರಿಸುತ್ತಿದ್ದೇವೆ. ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸೋಂಕಿತರಿಗೆ ಧೈರ್ಯ ತುಂಬಿ, ಚೆನ್ನಾಗಿ ನೋಡಿಕೊಳ್ಳು ತ್ತಿರುವುದಾಗಿ ಸೋಂಕಿತರು ತಿಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಣ್ಣುಗಳ ಜೊತೆಗೆ ವಿವೇಕಾನಂದರ ಜೀವನ ಚರಿತ್ರೆ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರೀಯ ಸಾಹಿತ್ಯದ ಕಿರು ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ವಿರಾಮ ಕಾಲ ದಲ್ಲಿ ಈ ಪುಸ್ತಕಗಳನ್ನು ಓದಿ ಆತ್ಮ ವಿಶ್ವಾಸಗಳಿಸಲಿ ಎಂಬ ಸುದ್ದದ್ದೇಶದಿಂದ ಕೊಟ್ಟಿರುವುದಾಗಿ ತಿಳಿಸಿದರು.
ಮಠದಿಂದ ಸೋಂಕಿತರ ಆರೈಕೆ: ಧರ್ಮ ಬೆಳೆಯಬೇಕು. ಧರ್ಮವನ್ನು ನಂಬಿದವರು ಸಂಕಷ್ಟಕ್ಕೆ ಸಿಲುಕಬಾರದು, ಹಾಗೊಮ್ಮೆ ಸಿಲುಕಿ ದರೆ ಅವರಲ್ಲಿ ಭರವಸೆ ತುಂಬುವ ನಿಟ್ಟಿನಲ್ಲಿ ಮಠ ಮಾನ್ಯಗಳು ಮುಂದಾಗಬೇಕು. ಇದೇ ಉದ್ದೇಶದಲ್ಲೇ ಆದಿಚುಂಚನಗಿರಿ ಮಠ, ಸಿದ್ದಗಂಗಾ ಮಠ ಮತ್ತು ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಯವರು ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆದಿದ್ದಾರೆ.ಮಠಮಾನ್ಯಗಳು ಹೀಗೆ ಸೋಂಕಿತರ ಆರೈಕೆಗೆ ಮುಂದಾಗಿವೆ ಎಂದರು.
ಚಿಕಿತ್ಸಾ ವ್ಯವಸ್ಥೆಗೆ ಆದ್ಯತೆ ನೀಡಿ: ಕೋವಿಡ್ ಚಿಕಿತ್ಸಾ ವ್ಯವಸ್ಥೆಗೆ ಸರ್ಕಾರ ಇನ್ನು ಹೆಚ್ಚು ಒತ್ತು ಕೊಡಬೇಕಾಗಿದೆ. ಭವಿಷ್ಯದಲ್ಲಿಯೂ ಆರೋಗ್ಯ ಸುರಕ್ಷತಾ ವ್ಯವಸ್ಥೆಯನ್ನು ಮುಂದುವರೆಸುವ ಅಗತ್ಯವಿದೆ. ಹೀಗಾಗಿ ಸರ್ಕಾರ ತನ್ನ ಎಲ್ಲಾ ಪ್ರಯತ್ನವನ್ನು ಮಾಡಬೇಕು ಎಂದು ಸಲಹೆ ನೀಡಿದರು. ಸ್ವಾಮೀಜಿ ಜೊತೆ ಆರ್ಎಸ್ಎಸ್ ಸ್ವಯಂಸೇವಕರು ಹಾಜರಿದ್ದರು. ಸ್ವಾಮೀಜಿ ಅವರು ಕೆಂಪೇಗೌಡನ ದೊಡ್ಡಿ, ಆನುಮಾನಹಳ್ಳಿ, ಬಿಜ್ಜರಹಳ್ಳಿ ಕಟ್ಟೆ ಕೋವಿಡ್ ಕೇರ್ ಸೆಂಟರ್ಗಳಿಗೂ ಭೇಟಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.