ರಾಮನಗರದ 989 ಗ್ರಾಮ ಸೋಂಕು ಮುಕ್ತ
Team Udayavani, Jun 7, 2021, 5:24 PM IST
ರಾಮನಗರ: ಕೋವಿಡ್ ಎರಡನೇ ಅಲೆಯಲ್ಲಿ ಜಿಲ್ಲೆ ಯಲ್ಲಿ ಪ್ರಸ್ತುತ 989 ಗ್ರಾಮಗಳು ಸೋಂಕು ಮುಕ್ತವಾಗಿವೆ. ಈ ಪೈಕಿ 52 ಜನ ವಸತಿ ಇಲ್ಲದ ಗ್ರಾಮಗಳು ಸೇರಿ ದಂತೆ 118 ಗ್ರಾಮಗಳಲ್ಲಿ ಸೋಂಕು ಪ್ರಕರಣಗಳೇ ಪತ್ತೆಯಾಗಿಲ್ಲ.
657 ಗ್ರಾಮಗಳಲ್ಲಿ ಕೇವಲ 1ರಿಂದ 5 ಸಕ್ರಿಯ ಪ್ರಕರಣಗಳಿವೆ. 101 ಗ್ರಾಮಗಳಲ್ಲಿ 5ಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಚನ್ನಪಟ್ಟಣದ 68 ಗ್ರಾಮಗಳು, ಕನಕಪುರದ 390 ಗ್ರಾಮಗಳು, ಮಾಗಡಿಯ 359 ಗ್ರಾಮಗಳು ಮತ್ತು ರಾಮನಗರದ 172 ಗ್ರಾಮಗಳಲ್ಲಿ ಪ್ರಸ್ತುತ ಶೂನ್ಯ ಸಕ್ರಿಯ ಸೋಂಕು ಪಕ್ರರಣಗಳು ಉಳ್ಳ ಗ್ರಾಮಗಳಾಗಿವೆ.
ಜಿಲ್ಲೆಯಲ್ಲಿ 1ರಿಂದ 5 ಸೋಂಕು ಪ್ರಕರಣಗಳು ಉಳ್ಳ 657 ಗ್ರಾಮಗಳಿವೆ. ಈ ಪೈಕಿ ಚನ್ನಪಟ್ಟಣದಲ್ಲಿ 102 ಗ್ರಾಮಗಳು, ಕನಕಪುರದಲ್ಲಿ 284, ಮಾಗಡಿಯಲ್ಲಿ 149 ಗ್ರಾಮಗಳು, ರಾಮನಗರದಲ್ಲಿ 122 ಗ್ರಾಮಗಳಿವೆ. 5ಕ್ಕೂ ಹೆಚ್ಚು ಸೋಂಕಿತರ ಸಕ್ರಿಯ ಪ್ರಕರಣಗಳಿರುವ 101 ಗ್ರಾಮಗಳಿವೆ. ಈ ಪೈಕಿ ಚನ್ನಪಟ್ಟಣದಲ್ಲಿ 23, ಕನಕಪುರದಲ್ಲಿ 42, ಮಾಗಡಿಯಲ್ಲಿ 20 ಮತ್ತು ರಾಮನಗರದಲ್ಲಿ 16 ಗ್ರಾಮಗಳಿವೆ.
ಸೋಂಕು ತಗುಲದ ಗ್ರಾಮಗಳು: ಜಿಲ್ಲೆಯ 118 ಗ್ರಾಮಗಳಲ್ಲಿ (52 ಜನವಸತಿ ಇಲ್ಲದ ಗ್ರಾಮಗಳು ಸೇರಿದಂತೆ) ಕೋವಿಡ್ ಸೋಂಕು ಪ್ರಕರಣಗಳೇ ಪತ್ತೆ ಯಾಗಿಲ್ಲ. ಮೇ ತಿಂಗಳ ಆರಂಭದಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಸಾಗಿ, ಮೇ ಮಾಸಾಂತ್ಯಕ್ಕೆ ಕಡಿಮೆಯಾಗಿದೆ.
ಕೋವಿಡ್ ಸೋಂಕು ಮೊದಲನೇ ಅಲೆಯ ವೇಳೆ ಹೊರಗಿ ನಿಂದ ಗ್ರಾಮದೊಳಗೆ ಬೇರ್ಯಾರನ್ನು ಬರಲು ಅವಕಾಶ ಮಾಡಿಕೊಡದೆ, ದಿಗ್ಬಂದನ ಹಾಕಿದ್ದರು. ಆದರೆ, ಎರಡನೆ ಅಲೆಯ ಭೀಕರತೆಗೆ ಅನ್ಯ ಊರುಗಳಿಗೆ ತೆರಳಿದ್ದವರು, ತಮ್ಮ ತವರು ಗ್ರಾಮಗಳಿಗೆ ವಾಪಸ್ಸಾಗಿದ್ದಾರೆ. ಜತೆಗೆ ಕೊಂಚ ನಿರ್ಲಕ್ಷ್ಯವೂ ಮನೆ ಮಾಡಿದ್ದರಿಂದ ಸೋಂಕು ಗ್ರಾಮಗಳಲ್ಲಿ ನುಸುಳಿದೆ.
ಹೋಂ ಐಸೋಲೇಷನ್ ರದ್ದು: ಗ್ರಾಮೀಣ ಭಾಗದಲ್ಲಿ ಕಡಿಮೆ ಲಕ್ಷಣಗಳು ಉಳ್ಳ ಸೋಂಕಿತರಿಗೆ ಹೋಂ ಐಸೋಲೇಷನ್ಗೆ ಅವಕಾಶ ಕೊಡಲಾಗಿತ್ತು. ಆದರೆ, ಬಹುತೇಕರ ಮನೆಯಲ್ಲಿ ಸೋಂಕಿತರು ಪ್ರತ್ಯೇಕ ವಾಸಕ್ಕೆ ಅನುಕೂಲ ಇಲ್ಲದ್ದ ಕಾರಣ, ಲಕ್ಷಣಗಳಿಲ್ಲದಿದ್ದರೂ ಸೋಂಕು ಬಂದಿದೆ ಎಂಬ ನಿರ್ಲಕ್ಷ್ಯದಿಂದ ಕೆಲವರು ಗ್ರಾಮಗಳಲ್ಲಿ ಮನಸೋ ಇಚ್ಚೆ ಅಡ್ಡಾಡಿದ್ದಾರೆ, ಹೀಗಾಗಿ ಗ್ರಾಮಗಳಲ್ಲಿ ಕೋವಿಡ್ ಸೋಂಕು ಹೆಚ್ಚಳಕ್ಕೆ ಕಾರಣವಾಗಿತ್ತು. ಆದರೆ, ಹೋಂ ಐಸೋಲೇಷನ್ ರದ್ದು ಪಡಿಸಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಲ್ಲಿ ದಾಖಲಿಸಿದ ನಂತರ ಸೋಂಕು ಹರಡುವುದು ಸಾಕಷ್ಟು ತಗ್ಗಿದೆ ಎಂದು ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.