ಲಸಿಕೆ ಪಡೆದು ಒಂದು ಗಂಟೆಯೊಳಗೆ ವೃದ್ಧೆ ಸಾವು
Team Udayavani, Mar 18, 2021, 8:44 AM IST
ಕನಕಪುರ: ಕೋವಿಡ್ ಲಸಿಕೆ ಪಡೆದ ವೃದ್ಧೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಪಡುವಣಗೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು ಲಸಿಕೆ ಪಡೆದ ಸಾರ್ವಜನಿಕರ ಆತಂಕಕ್ಕೆ ಕಾರಣ ವಾಗಿದೆ.
ತಾಲೂಕಿನ ಮರಳವಾಡಿ ಹೋಬ ಳಿಯ ಪಡುವಣಗೆರೆ ಗ್ರಾಮದ ಸಜ್ಜಮ್ಮ (74) ಮೃತಪಟ್ಟವರು. ಲಸಿಕೆ ಪಡದ ಒಂದು ಗಂಟೆಯೊಳಗೆ ಈ ಘಟನೆ ಸಂಭವಿಸಿದೆ. ಪಡುವಣಗೆರೆ ಸಮು ದಾಯ ಆರೋಗ್ಯ ಕೇಂದ್ರದಲ್ಲಿ ಸಜ್ಜಮ್ಮ ಸೇರಿದಂತೆ ಹತ್ತಕ್ಕೂ ಹೆಚ್ಚು ವೃದ್ಧೆಯರು ಲಸಿಕೆ ಪಡೆದುಕೊಂಡರು. ಲಸಿಕೆ ನೀಡಿದ ವೈದ್ಯರು ಆರೋಗ್ಯ ಪರೀಕ್ಷೆ ನಡೆಸಿ ಯಾವುದೇ ಅಡ್ಡಪರಿಣಾಮ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಮನೆಗೆ ಕಳುಹಿಸಿ ಕೊಟ್ಟಿದ್ದರು. ಸಜ್ಜಮ್ಮ ಆಸ್ಪತ್ರೆಯಿಂದ ಮನೆಗೆ ಮರಳುವಾಗ
ಮನೆ ಯಿಂದ ಸ್ವಲ್ಪ ದೂರದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ಜಿಲ್ಲಾ ಆರೋಗ್ಯಧಿಕಾರಿ ನಿರಂಜನ್ ಮಾತನಾಡಿ. ಮೃತ ಸಜ್ಜಮ್ಮರೊಂದಿಗೆ ಅವರಿಗಿಂತ ಹಿರಿಯರು ಲಸಿಕೆ ಪಡೆದು ಆರೋಗ್ಯವಾಗಿದ್ದಾರೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಈವರೆಗೆ ಇಂತಹ ಘಟನೆಗಳ ಸಂಭವಿಸಿಲ್ಲ.ಯಾರು ಆತಂಕ ಪಡುವ ಅಗತ್ಯವಿಲ್ಲ. ಒಂದು ವೇಳೆ ಸಜ್ಜಮ್ಮ ಲಸಿಕೆಯಿಂದ ಮೃತಪಟ್ಟಿರುವುದು ಮರಣೋತ್ತರ ವರದಿಯಲ್ಲಿ ದೃಢಪಟ್ಟರೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವುದಾಗಿ ಮೃತರ ಕುಟುಂಬಕ್ಕೆ ಭರವಸೆ ನೀಡಿದರು.
ಮೃತರ ಪೋಷಕ ಗಣೇಶ್ ಮಾತನಾಡಿ, ಸಜ್ಜಮ್ಮ ಅವರಿಗೆ ಯಾವುದೇ ಆರೋಗ್ಯದ ಸಮಸ್ಯೆ ಇರಲಿಲ್ಲ. ಬಹಳ ಆರೋಗ್ಯವಾಗಿ ಇದ್ದರು ಮನೆಯಿಂದ 1 ಕಿ.ಮೀ.ದೂರವಿರುವ ಆರೋಗ್ಯ ಕೇಂದ್ರಕ್ಕೆ ನಡೆದುಕೊಂಡೆ ಹೋಗಿ ಲಸಿಕೆ ಪಡೆದಿದ್ದಾರೆ. ನಂತರ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಇದು ವೈದ್ಯರು ನೀಡಿರುವ ಲಸಿಕೆಯಿಂದಲೇ ಆಗಿರುವ ಸಾವು ಎಂದು ಆರೋಪಿಸಿ ಈ ಸಂಬಂಧ ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.