ಕಳಪೆ ಕಾಮಗಾರಿಗೆ ಕೋಟ್ಯಂತರ ರೂ.ನಷ್ಟ
Team Udayavani, Jul 18, 2020, 8:39 AM IST
ಮಾಗಡಿ: ತಾಲೂಕಿನಲ್ಲಿ ನಿರ್ಮಿಸಿರುವ ಬಹುತೇಕ ಚೆಕ್ ಡ್ಯಾಂಗಳು ಚರಂಡಿಯಂತಿವೆ ಎಂದು ತಾಪಂ ಅಧ್ಯಕ್ಷ ನಾರಾಯಣಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪಿಡಿಒಗಳ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯವರು ನಿರ್ಮಿಸಿರುವ ಬಹುತೇಕ ಚೆಕ್ ಡ್ಯಾಂಗಳು ಚರಂಡಿಗಳಂತಿವೆ. ಅಧಿಕಾರಿಗಳು ಸ್ಥಳ ಪರಿಶೀಲಿಸದೇ, ಕಚೇರಿಯಲ್ಲಿ ಕುಳಿತು ಯೋಜನೆ ಸಿದ್ಧಪಡಿಸಿ, ಚರಂಡಿಗಳ ರೀತಿ ಯಲ್ಲಿ ಚೆಕ್ ಡ್ಯಾಂ ನಿರ್ಮಿಸಿದರೆ ಉಪ ಯೋಗವಾಗು ದಿಲ್ಲ. ಜೊತೆಗೆ ಕಳಪೆ ಕಾಮ ಗಾರಿಯಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಈ ಸಂಬಂಧ ಸಮಿತಿ ಒಳಗೊಂಡಂತೆ ಚೆಕ್ ಡ್ಯಾಂಗಳ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ನಡೆಸಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಕೆಆರ್‌ಡಿಎಲ್ ನವರು ಇದೇ ರೀತಿ ಕಳಪೆ ಕಾಮಗಾರಿ ನಡೆ ಸಿದ್ದು, ಕನಿಷ್ಠ ಪಕ್ಷ ಬೋರ್ಡ್ ಹಾಕಿರುವುದಿಲ್ಲ ಎಂದು ಆರೋಪಿಸಿದರು.
ಸಮನ್ವಯತೆ ಕಾಪಾಡಿ: ತಾಲೂಕಿನ ಬಹು ತೇಕ ಗ್ರಾಪಂ ಆಡಳಿತ ಮಂಡಳಿ ಅವಧಿ ಮುಗಿದಿದ್ದು, ಆಡಳಿತಾಧಿಕಾರಿಗಳ ನೇಮಕ ಮಾಡಲಾಗಿದೆ. ಪಂಚಾಯಿತಿ ಪಿಡಿಒಗಳು ಆಡಳಿತಾಧಿಕಾರಿಗಳೊಂದಿಗೆ ಸಮನ್ವಯ ಕಾಪಾ ಡಿಕೊಂಡು, ಸರ್ವ ತೋಮುಖ ಅಭಿವೃದ್ಧಿಗೆ ಸಹಕರಿಸಬೇಕು. ಪ್ರತಿ ಪಂಚಾಯಿತಿ ಫಲಕದಲ್ಲಿ ಆಡಳಿತಾಧಿಕಾರಿಗಳ ಹೆಸರು, ಮೊಬೈಲ್ ನಂಬರ್ ಪ್ರಕಟಿಸಬೇಕು. ಅವರಿಗಾಗಿ ಪ್ರತ್ಯೇಕ ಕಚೇರಿ ಸಿದ್ಧಪಡಿಸಿರಬೇಕು. ಹೊಸ ನೇಮಕಾತಿ ಮಾಡುವಂತಿಲ್ಲ. ಅಭಿವೃದ್ಧಿ ವಿಚಾರ ಹಣಕಾಸಿನ ವ್ಯವಹಾರ ಜಂಟಿಯಾಗಿಯೇ ನಡೆಸಬೇಕು. ಪಿಡಿಒಗಳು ಕ್ರಿಯಾ ಯೋಜನೆ ಸಿದ್ಧ ಪಡಿಸಿ, ಅಡಳಿತಾಧಿಕಾರಿ ಗಳ ಅನುಮೋದನೆ ಪಡೆದು ಕೆಲಸ ಮಾಡಬೇಕು. ರೆಕಾರ್ಡ್‌ಗಳನ್ನು ಸಮರ್ಪಕ ವಾಗಿ ನಿರ್ವಹಿಸ ಬೇಕು. ಗ್ರಾಪಂ ಸ್ವತ್ತು ರಕ್ಷಿಸ ಬೇಕು ಎಂದು ತಾಪಂ ಸಿಇಒ ಟಿ.ಪ್ರದೀಪ್, ಪಿಡಿಒಗಳಿಗೆ ಆದೇಶಿಸಿದರು.
ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಸಿ: ನಗರ ಪ್ರದೇಶದಿಂದ ಗ್ರಾಮಗಳಿಗೂ ಕೋವಿಡ್ ಒಕ್ಕರಿಸಿದ್ದು, ತಾಲೂಕಿನ ಎಲ್ಲ ಗ್ರಾಪಂ ಪಿಡಿಒ ಗಳು ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಬೇಕು. ಗ್ರಾಮದ ಸಮಸ್ಯೆಗಳಿಗೆ ಪಿಡಿಒಗಳು ಸ್ಪಂದಿಸ ಬೇಕು. ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮುಂಗಾರು ಮಳೆಯಾಗುತ್ತಿದ್ದು, ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳಾದ ಚಿಕನ್‌ಗೂನ್ಯ, ಡೆಂಗ್ಯೂ, ಎಚ್1ಎನ್1 ಹರಡುವ ಸಾಧ್ಯತೆ ಇರುವುದರಿಂದ ಗ್ರಾಮದಲ್ಲಿ ಚರಂಡಿಗಳಿಗೆ ಸಿಂಪಡಣೆ ಮಾಡ ಬೇಕು ಎಂದು ತಾಪಂ ಅಧ್ಯಕ್ಷ ನಾರಾಯಣಪ್ಪ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಅಂಬಿಕಾ, ಸದಸ್ಯ ಎಂ. ಎಚ್. ಸುರೇಶ್, ಕೆ.ಎಚ್.ಶಿವರಾಜು, ಧನಂಜಯ ನಾಯಕ್, ನರಸಿಂಹ ಮೂರ್ತಿ, ಹನುಮೇಗೌಡ, ಶಿವಮ್ಮ, ಸುಮಾ ರಮೇಶ್, ದಿವ್ಯಾರಾಣಿ, ಅಧಿಕಾರಿಗಳಾದ ನಾಗರಾಜು, ಶಿವ ಶಂಕರ್, ಚಿದಾನಂದ್, ರಂಗನಾಥ್, ಜನಾರ್ಧನ್, ಕುಮಾರಸ್ವಾಮಿ ಹಾಗೂ ಬಹುತೇಕ ಎಲ್ಲ ಪಂಚಾಯಿತಿ ಪಿಡಿಒಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.