Channapatna: ಮೆಗಾಸಿಟಿ ಹೆಸರಲ್ಲಿ ಜನರಿಗೆ ಟೋಪಿ
Team Udayavani, Sep 10, 2023, 3:15 PM IST
ಚನ್ನಪಟ್ಟಣ: ಡಿಕೆಎಸ್ ಸಹೋದರರು ವೈಯಕ್ತಿಕ ಲಾಭಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುತ್ತಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಕ್ಕೆ ಕೆಂಡ ಮಂಡಲರಾದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಸಿಪಿವೈ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.
ಈ ಸಂಬಂಧ ತಾಲೂಕಿನ ಮಾಕಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅವನಿಗೆ ಮಾಡೋದಕ್ಕೆ ಬೇರೆ ಏನೂ ಕೆಲಸ ಇಲ್ಲ. ಅದಕ್ಕೆ ಹೀಗೆ ಮಾತನಾಡ್ತಿದ್ದಾರೆ. ಅವನು ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಹೆಸರಲ್ಲಿ ಜನರಿಗೆ ಟೋಪಿ ಹಾಕಿ ದ್ದಾನೆ. ಮೆಗಾ ಸಿಟಿ ಮಾಡ್ತೀನಿ ಅಂತ ಟೋಪಿ ಹಾಕಿ ದ್ದಾನೆ. ಅದನ್ನ ಮರೆತು ಹೋಗಿದ್ದಾನಾ ಕೇಳಿ. ರಿಯಲ್ ಎಸ್ಟೇಟ್ ದಂಧೆ ಮಾಡಬೇಕಾದ ಅನಿವಾರ್ಯ ನಮಗಿಲ್ಲ. ಮೆಡಿಕಲ್ ಕಾಲೇಜು ಕನಕ ಪುರದಲ್ಲೂ ಆಗುತ್ತೆ, ರಾಮ ನಗರದಲ್ಲೂ ಆಗುತ್ತೆ. ಇವರೆಲ್ಲ ಕೆಲಸ ಇಲ್ಲ ಅಂತ ಬಂದು ಹೀಗೆ ಗೊಂದಲ ಮಾಡ್ತಿದ್ದಾರೆ. 20 ವರ್ಷದಿಂದ ಮಾಡ ದಿದ್ದವ್ರು ಈಗ ಬಂದ್ ಮಾಡ್ತೀವಿ, ಹೋರಾಟ ಮಾಡ್ತೀವಿ ಎಂದು ಬಂದಿದ್ದಾರೆ. 5 ವರ್ಷ ಬಿಜೆಪಿ ಸರ್ಕಾರ ಇದ್ದಾಗ ಮೆಡಿಕಲ್ ಕಾಲೇಜು ಮಾಡಲಿಲ್ಲ. ಅರಣ್ಯ ಮಂತ್ರಿ ಆಗಿದ್ರು, ಪ್ರವಾಸೋದ್ಯಮ ಮಂತ್ರಿ ಆಗಿದ್ರು. ಆಗ ಯಾಕೆ ಮೆಡಿಕಲ್ ಕಾಲೇಜು ಮಾಡ ಲಿಲ್ಲ. ಈಗ ಬಣ್ಣ ಹಾಕೊಂಡು ನಾಟಕ ಮಾಡಲು ಬಂದಿದ್ದಾನೆ. ಈಗ ಕಾಂಗ್ರೆಸ್ ಸರ್ಕಾರ ತೆಗೆತೀನಿ ಅಂತ ಹೇಳ್ತಿದ್ದಾನೆ. ಬರೀ ಸರ್ಕಾರ ಬೀಳಿಸೋ ಕೆಲಸ ಮಾತ್ರನಾ ಮಾಡೋದು. ಜನರಿಗೋಸ್ಕರ ಏನು ಮಾಡಿದ್ದಾನೆ.
ನಾಲಗೆ ಬಿಗಿ ಹಿಡಿದುಕೊಳ್ಳಲಿ: ಸಿಡಿ ಇಡ್ಕೊಂಡು ಎಲ್ಲಾ ಮಠಗಳಿಗೂ ಓಡಾಡ್ತಿದ್ದಾನೆ ಅಂತ ಮಾಧ್ಯಮಗಳಲ್ಲಿ ಬಂದಿತ್ತು. ಬಿಎಸ್ ವೈ ಸರ್ಕಾರದಲ್ಲಿ ಸಿಡಿ ಇದೆ ಅಂತ ಒಡಾಡ್ತಿದ್ದ. ಸಮ್ಮಿಶ್ರ ಸರ್ಕಾರ ಹೋಗಲು ಕಾರಣ ಯಾರು.? ಸರ್ಕಾರ ತೆಗೆದೆ ಅಂತ, ಬಾಂಬೆ ಬಾಯ್ಸ ಸೃಷ್ಟಿ ಮಾಡೆª ಅಂತ ಅವನೇ ಹೇಳ್ಕೊಂಡವನೆ. ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಅಂತ ಹೇಳ್ಕೊಂಡಿದ್ದವರು ಯಾರು. ಮೊದಲು ಅವನ ಹಿನ್ನಲೆ ಬಗ್ಗೆ ಚರ್ಚೆ ಮಾಡಿಕೊಳ್ಳಲಿ. ನಾವು ಕೆಲಸ ಮಾಡೋದಕ್ಕೆ ತಾಳ್ಮೆಯಿಂದ ಅವಕಾಶ ಕೊಡಿ. ವಿರೋಧ ಪಕ್ಷದ ಸಲಹೆಗಳನ್ನ ಸಕಾರಾತ್ಮಕವಾಗಿ ಸ್ವೀಕಾರ ಮಾಡ್ತೀವಿ. ಆದರೆ ಬಾಯಿಗೆ ಬಂದಹಾಗೆ ಮಾತನಾಡಿದ್ರೆ ನಾವು ಕೇಳಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಡಿ.ಕೆ.ಸುರೇಶ್ ಗುಡುಗಿದರು.
ಧಾರಾಳವಾಗಿ ಟಾರ್ಗೆಟ್ ಮಾಡಲಿ: ಬೆಂಗ ಳೂರು ಗ್ರಾಮಾಂತರ ಕ್ಷೇತ್ರ ಟಾರ್ಗೆಟ್ ವಿಚಾರದ ಬಗ್ಗೆ ತಿಳಿಸಿದ ಅವರು, ಧಾರಾಳವಾಗಿ ಮಾಡಲಿ ಟಾರ್ಗೆಟ್ ಮಾಡಲಿ, ಯಾರು ಬೇಡ ಅಂತಾರೆ. ಬಿಜೆಪಿ ಅವ್ರು ಮಾಡಲಿ, ಜೆಡಿಎಸ್ ಅವ್ರು ಮಾಡಲಿ. ಎಲ್ಲವನ್ನೂ ಜನ ನೋಡ್ತಾರೆ. ಅವರೇ ಅಂತಿಮ ತೀರ್ಮಾನ ಮಾಡ್ತಾರೆ ಎಂದು ಪ್ರತಿಪಾದಿಸಿದರು.
ಕಮಲ, ದಳ ಮೈತ್ರಿ ಅವರಿಗೆ ಬಿಟ್ಟ ವಿಚಾರ: ಚನ್ನಪಟ್ಟಣ: ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಚನ್ನಪಟ್ಟಣದ ಮಾಕಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದು ಆ ಪಕ್ಷಗಳ ವೈಯಕ್ತಿಕ ವಿಚಾರ. ಅವರ ಏನೇ ತೀರ್ಮಾನ ಮಾಡಿ ಮೈತ್ರಿ ಮಾಡ್ಕೊಂಡ್ರು ರಾಜ್ಯದ ಜನ ಗಮನಿಸ್ತಿದ್ದಾರೆ. ಕಾಂಗ್ರೆಸ್ ಒಕ್ಕೂಟ ದೇಶದಲ್ಲಿ ಒಗ್ಗಟ್ಟಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ಅಸ್ತಿತ್ವ ಕಳೆದು ಕೊಳ್ಳುವ ಭಯ ಕಾಡ್ತಿದೆ. ಹಾಗಾಗಿ ಅಸ್ತಿತ್ವ ಉಳಿಸಿಕೊಳ್ಳಿಲು ಮೈತ್ರಿ ಮಾಡ್ಕೊತ್ತಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದೆ. ದೇಶ ದಲ್ಲಿ ಬಿಜೆಪಿ ಆಡಳಿತ ನಡೆಸ್ತಿದೆ. ಕಾಂಗ್ರೆಸ್ ಜಾತ್ಯಾತೀತ ತತ್ವದ ಮೇಲೆ ಆಡಳಿತ ಮಾಡ್ತಿದೆ. ಯಾರು ಹೊಂದಾಣಿಕೆ ಮಾಡಿ ಕೊಂಡ್ರು ನಮ್ಮ ಸಿದ್ದಾಂತದ ಮೇಲೆ ನಾವು ಹೋರಾಟ ಮಾಡ್ತೀವಿ. ನಮ್ಮ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಹೋರಾಟ ಮಾಡ್ತೀವಿ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.