Dasara dolls: ಅಕ್ಕತಂಗಿಯರಿಂದ ದಸರಾ ಬೃಹತ್ ಬೊಂಬೆ ಹಬ್ಬ
Team Udayavani, Oct 23, 2023, 5:36 PM IST
ರಾಮನಗರ: ಪ್ರತಿ ಮನೆಯಲ್ಲಿ ಬೊಂಬೆಯನ್ನು ಕೂರಿಸುವುದು ಹಳೇ ಮೈಸೂರು ಭಾಗದಲ್ಲಿ ದಸರಾ ಹಬ್ಬದ ಆಚರಣೆಯ ಪ್ರಮುಖ ಸಂಪ್ರದಾಯ. ಜಿಲ್ಲೆಯ ಚನ್ನಪಟ್ಟಣದ ಕೋಟೆ ಜಟ್ಟಿಗರ ಬೀದಿಯಲ್ಲಿ ರಮಾಮಣಿ ಮತ್ತು ಸಹೋದರಿಯರು ಕೂರಿಸಿರುವ ಬೃಹತ್ ಬೊಂಬೆಗಳ ಪ್ರದರ್ಶನ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಕಳೆದ 40ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಬೊಂಬೆ ಹಬ್ಬವನ್ನು ಆಚರಿಸಿಕೊಂಡು ಬಂದಿರುವ ಚನ್ನಪಟ್ಟಣದ ವಾಸುದೇವ ಶಾಸ್ತ್ರಿ ಅವರ ಪುತ್ರಿಯರಾದ ರಮಾಮಣಿ, ಪುಷ್ಪವಲ್ಲಿ, ಲತಾ ಮತ್ತು ಮಾಲಿನಿ ಎಂಬ ನಾಲ್ಕು ಮಂದಿ ಸಹೋದರಿಯರು 2 ರಿಂದ 3 ಸಾವಿರದಷ್ಟು ಬೊಂಬೆಗಳನ್ನು ಕೂರಿಸಿದ್ದು, ಇವರ ಬೃಹತ್ ಬೊಂಬೆಗಳ ಸಂಗ್ರಹ ಎಲ್ಲರ ಗಮನ ಸೆಳೆಯುತ್ತಿದೆ. ತಮ್ಮ ಸಂಗ್ರಹದಲ್ಲಿ 4 ಸಾವಿರಕ್ಕೂ ಹೆಚ್ಚು ಬೊಂಬೆಗಳಿದ್ದು ಸ್ಥಳಾವಕಾಶದ ಕೊರತೆಯಿಂದ ಹೆಚ್ಚು ಬೊಂಬೆಗಳನ್ನು ಕೂರಿಸಿಲ್ಲ ಎಂದು ಸಹೋದರಿಯರು ಹೇಳುತ್ತಾರೆ.
ಏನೆಲ್ಲಾ ಬೊಂಬೆಗಳಿವೆ: ನಾಲ್ಕು ಮಂದಿ ಸೋದರಿಯರು ಅತ್ಯಂತ ಆಸಕ್ತಿಯಿಂದ ಪ್ರತಿವರ್ಷ ಕೂರಿಸುತ್ತಿರುವ ಬೊಂಬೆಗಳ ಸಂಗ್ರಹದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಬೊಂಬೆಗಳು, ಮಹಾಭಾರತ, ವಿಷ್ಣುವಿನ ದಶಾವತಾರ, ಸೀತಾಕಲ್ಯಾಣ, ಗಿರಿಜಾಕಲ್ಯಾಣ ಸೇರಿದಂತೆ ನಮ್ಮ ಧಾರ್ಮಿಕ ಹಿನ್ನೆಲೆ ಸಾರುವ ಬೊಂಬೆಗಳು, ಕೃಷಿ, ಗ್ರಾಮೀಣ ಜೀವನ, ಜನರ ಸಂಪ್ರದಾಯ ಸಾರುವ ಬೊಂಬೆಗಳು, ಮೈಸೂರು ದಸರಾ ಮಾದರಿಯ ಬೊಂಬೆಗಳು, ಹಲೇ ಮೈಸೂರು ಭಾಗದ ವಿಶಿಷ್ಟ ಬೊಂಬೆಗಳು ಎನಿಸಿರುವ ಚಂದನದ ಪಟ್ಟದ ಬೊಂಬೆಗಳು, ರಾಜರಾಣಿ ಬೊಂಬೆಗಳು ಹೀಗೆ ಬಹುದೊಡ್ಡ ಬೊಂಬೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ.
ಕೆಲವು ಪ್ರದೇಶದ ಕರಕುಶಲ ವಸ್ತುಗಳು: ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆಗಳ ಬಹುದೊಡ್ಡ ಸಂಗ್ರಹದ ಜೊತೆಗೆ ಆಂಧ್ರ, ಛತ್ತೀಸ್ ಘಡ, ಗುಜರಾತ್, ಮಥುರಾ, ಒರಿಸ್ಸಾ ಹೀಗೆ ದೇಶದ ವಿವಿಧ ಪ್ರದೇಶಗಳಲ್ಲಿನ ಕರಕುಶಲ ಬೊಂಬೆಗಳು ಇವರ ಸಂಗ್ರಹದಲ್ಲಿದ್ದು, ಹೊರಗೆ ಪ್ರವಾಸ ಹೋದಾಗಲೆಲ್ಲಾ ಅಲ್ಲಿ ಕಾಣುವ ಸ್ಥಳೀಯ ಬೊಂಬೆಗಳನ್ನು ಖರೀದಿಸಿ ತಂದು ತಮ್ಮ ಸಂಗ್ರಹದಲ್ಲಿರಿಸುತ್ತಿದ್ದಾರೆ. ಬೊಂಬೆಗಳನ್ನು ಸಂಗ್ರಹಿಸುವ ಹಾಗೂ ಪ್ರತಿವರ್ಷ ದಸರಾ ಸಮಯದಲ್ಲಿ 9 ದಿನಗಳ ಕಾಲ ನವರಾತ್ರಿ ಬೊಂಬೆಯನ್ನು ಕೂಡಿಸುವ ಹವ್ಯಾಸವನ್ನು ಈ ಸೋದರಿಯರು ಬೆಳೆಸಿಕೊಂಡು ಬಂದಿದ್ದಾರೆ.
ನೂರಾರು ವರ್ಷಗಳ ಹಳೆ ಬೊಂಬೆಗಳೂ ಇವೆ: ಇನ್ನು ಈ ಸಹೋದರಿಯರ ಬೊಂಬೆಗಳ ಸಂಗ್ರಹದಲ್ಲಿ ನೂರಾರು ವರ್ಷಗಳಷ್ಟು ಹಳೆಯ ಬೊಂಬೆಗಳ ಸಂಗ್ರಹವೂ ಇದೆ. ತಲೆಮಾರುಗಳಿಂದ ಬಂದಿರುವ ಅಪರೂಪದ ಬೊಂಬೆಗಳನ್ನು ಸಂರಕ್ಷಣೆ ಮಾಡಿಕೊಂಡು ಬಂದಿರುವ ಇವರು, ಇವುಗಳು ಹಾಳಾಗದಂತೆ ಕಾಪಾಡಿಕೊಂಡು ಬಂದಿದ್ದು, ಒಂದು ವೇಳೆ ಪುರಾತನ ಬೊಂಬೆಗಳಿಗೆ ಅಲ್ಪಸ್ವಲ್ಪ ಹಾನಿಯಾದಲ್ಲಿ ಅವುಗಳನ್ನು ಅದೇ ರೀತಿ ರಿಪೇರಿಮಾಡುವ ಕೆಲಸವನ್ನು ಮಾಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಇವರ ಸಂಗ್ರಹದಲ್ಲಿ ಸಾಕಷ್ಟು ಹಳೆಯ ಕಾಲದ ಬೊಂಬೆಗಳನ್ನು ಕಾಣಬಹುದಾಗಿದೆ.
ಸಾರ್ವಜನಿಕ ವೀಕ್ಷಣೆಗೆ ಅವಕಾಶ: ಪ್ರತಿವರ್ಷ ಬೊಂಬೆಗಳನ್ನು ಕೂರಿಸುವ ಇವರು ದಸರಾ ಸಮ ಯದಲ್ಲಿ 10 ದಿನಗಳ ಕಾಲ ಬೊಂಬೆಗಳನ್ನು ಸಾರ್ವಜನಿಕರು ಮುಕ್ತವಾಗಿ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ನಿರ್ಬಂಧವಿಲ್ಲದೆ ಎಲ್ಲರೂ ಬೊಂಬೆಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದು, ಪ್ರತಿದಿನ ಇವರ ಮನೆಗೆ ನೂರಾರು ಮಂದಿ ಭೇಟಿ ನೀಡಿ ಬೊಂಬೆಗಳನ್ನು ವೀಕ್ಷಿಸಿ ಸಂತೋಷ ಪಡು ತ್ತಿದ್ದಾರೆ. ಅದರಲ್ಲೂ ಮಕ್ಕಳು ಬೊಂಬೆಗಳನ್ನು ನೋಡಿ ಆನಂದಿಸುತ್ತಿದ್ದಾರೆ.
ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಬೊಂಬೆಗಳನ್ನು ಕೂರಿಸುತ್ತಿದ್ದರು. ಅವರಿಂದ ಪ್ರೇರಿತರಾಗಿ ನಾವು ಬೊಂಬೆ ಕೂರಿಸುವ ಹವ್ಯಾಸವನ್ನು ಬೆಳೆಸಿಕೊಂಡೆವು. ನಾವು ಹೋದಕಡೆಯಲೆಲ್ಲಾ ಬೊಂಬೆಗಳನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಿದ್ದು, ನಮ್ಮ ಕುಟುಂಬದಲ್ಲಿ ತಲೆಮಾರುಗಳಿಂದ ಬಂದ ಬೊಂಬೆಗಳು ನಮ್ಮ ಬಳಿ ಇವೆ. ಇವು ಹಾನಿಯಾದರೆ ಅದನ್ನು ಮರುಸೃಷ್ಟಿ ಮಾಡುತ್ತೇವೆ. ದಸರಾ ಸಮಯದಲ್ಲಿ ಸಾರ್ವಜನಿಕರು ಈ ಬೊಂಬೆಗಳನ್ನು ಮುಕ್ತವಾಗಿ ವೀಕ್ಷಣೆ ಮಾಡಬಹುದಾಗಿದೆ. – ರಮಾಮಣಿ, ಬೊಂಬೆಕೂರಿಸಿರುವವರು
ದಸರಾ ಸಮಯದಲ್ಲಿ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ ಹಳೇ ಮೈಸೂರು ಭಾಗದ ಸಾಕಷ್ಟು ಕುಟುಂಬಗಳಲ್ಲಿ ಇವೆ. ಆದರೆ, ಇಷ್ಟೋಂದು ಬೊಂಬೆಗಳನ್ನು ನಾವು ಎಲ್ಲೂ ನೋಡಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯನ್ನು ಪಾಲಿಸುತ್ತಾ, ಎಲ್ಲರಿಗೂ ಇದರ ಬಗ್ಗೆ ಅರಿವು ಮೂಡಿಸುತ್ತಿರುವ ಈ ಸಹೋದರಿಯರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ. – ಹೊಯ್ಸಳ, ಇಸ್ರೋ ನೌಕರ, ಚನ್ನಪಟ್ಟಣ
-ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.