ಧಾನ್ಯದ ಕಿಟ್ ನೀಡಲು ನಿರ್ಧಾರ
Team Udayavani, Apr 26, 2020, 1:18 PM IST
ಮಾಗಡಿ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ವೃತ್ತಿಪರರಿಗೆ ಪೌರಕಾರ್ಮಿಕರಿಗೆ ದವಸ ಧಾನ್ಯದ ಕಿಟ್ ಹಂಚಿ ಸಹಾಯ ನೀಡಲು ತೀರ್ಮಾನಿಸಿದ್ದೇನೆ ಎಂದು ಎಂಎಲ್‌ಸಿ ಎಚ್.ಎಂ.ರೇವಣ್ಣ ತಿಳಿಸಿದರು.
ಪಟ್ಟಣದ ರೇವಣ್ಣ ತೋಟದ ಮನೆಯಲ್ಲಿ ಏರ್ಪಡಿಸಿದ್ದ ಸುದ್ದಗೋಷ್ಠಿಯಲ್ಲಿ ಮಾತನಾಡಿ, ಭಾನುವಾರ ಬೆಳಗ್ಗೆ 10ಕ್ಕೆ ಸಂಕಷ್ಟದಲ್ಲಿರುವ ವೃತ್ತಿಪರ ಸವಿತಾ, ಮಡಿವಾಳ ಸಮಾಜದವರಿಗೆ ಹಾಗೂ ಆಟೋ ಡ್ರೈವರ್ ಅಗರ್‌ಬತ್ತಿ ವ್ಯಾಜ್ಯವಿಲೇವಾರಿ ಚಾಲಕರು ಹಾಗೂ ಪೌರಕಾರ್ಮಿಕರಿಗೆ ಧವಸ ಧಾನ್ಯದ ಕಿಟ್ ವಿತರಿಸಲಾಗುವುದು. ಬುಧವಾರ ಕಾರ್ಡ್ ಇಲ್ಲದವರಿಗೆ, ವಲಸಿಗರಿಗೆ ಹಾಗೂ ಅಂಗವಿಕಲರಿಗೆ, ಧವಸ ಧಾನ್ಯದ ಕಿಟ್ ವಿತರಿಸಲಾಗುವುದು. ಬೀಡಿ ಕಾರ್ಮಿಕರಿಗೆ ಕರ್ಬೂಜದ ಹಣ್ಣು, ಟೊಮೆಟೋ, ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗುವುದು ಎಂದರು.
ಕೆಪಿಸಿಸಿ ಟಾಸ್ಕ್ ಪೋರ್ಸ್ ಕಮಿಟಿ 8 ಜಿಲ್ಲೆಗೆ ನೇಮಕಗೊಂಡಿದ್ದು, ಅಧ್ಯಕ್ಷನಾಗಿದ್ದೇನೆ. ಎಲ್ಲೆಡೆ ಸಂಚರಿಸಿ ಕೋವಿಡ್ 19 ನಿರ್ಮೂಲನೆಗೆ ಜನರಲ್ಲಿ ಅರಿವು ಮೂಡಿಸಿ, ಮಾಸ್ಕ್ ಸ್ಯಾನಿಟೈಸರ್ ನೀಡಿ ಜಾಗೃತಿಗೊಳಿಸಲಾಗುತ್ತಿದೆ. ಬಡವರಿಗೆ ಕಾಂಗ್ರೆಸ್ ದಾನಿಗಳ ಸಹಕಾರದಿಂದ ತರಕಾರಿ, ಅಹಾರ ಪದಾರ್ಥಗಳ ವಿತರಣೆ ಮಾಡಲಾಗುತ್ತಿದೆ. ಕಾರ್ಡ್ ಇಲ್ಲದವರು 306, ವಲಸಿಗರು-180, ಅಂಗವಿಕಲರು-200 ಮಂದಿ, ವೃತ್ತಿಪರ ಸಮಾಜದವರು-500 ಮಂದಿ ಸೇರಿದಂತೆ ಒಟ್ಟಾರೆ 1,500 ಕಿಟ್ ನೀಡಲು ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಸಮಾಜ ಸೇವಕಿ ವತ್ಸಲಾ ರೇವಣ್ಣ, ಶಶಾಂಕ್, ಚಿತ್ರನಟ ಅನೂಪ್ ರೇವಣ್ಣ, ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಬಸವರಾಜು, ಪುರಸಭೆ ಸದಸ್ಯ ರಘು, ಕೆ.ವಿ.ಬಾಲರಘು, ಶಿವಕುಮಾರ್, ಎಚ್.ಆರ್. ಮಂಜುನಾಥ್, ತೇಜಾ, ಎಚ್.ಶಿವಕುಮಾರ್, ಟಿ.ಎಸ್ .ಬಾಲರಾಜು, ಎಚ್.ಜಿ.ವೆಂಕಟೇಶ್, ಕೆಂಪಣ್ಣ, ಮೂರ್ತಿ, ರಿಯಾಜ್, ಎಂ.ಟಿ.ಶಿವಣ್ಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.