ರಾಜೀವ್‌ ಗಾಂಧಿ ಆರೋಗ್ಯ ವಿವಿ ಇನ್ನಷ್ಟು ವಿಳಂಬ!


Team Udayavani, May 9, 2022, 2:35 PM IST

Untitled-1

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್‌ ಗಾಂಧಿ ಆರೋಗ್ಯ ವಿವಿ ಮತ್ತು ಆರೋಗ್ಯ ನಗರ ಕಟ್ಟಡಗಳ ನಿರ್ಮಾಣ ಕಾಮಗಾರಿ ಇನ್ನಷ್ಟು ವಿಳಂಬವಾಗುವ ಎಲ್ಲ ಲಕ್ಷಣ ಗಳು ಗೋಚರಿಸುತ್ತಿವೆ. ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಆರೋಗ್ಯ ವಿವಿ ಅಧಿಕಾರಿಗಳ ಹೇಳಿಕೆಗಳು ಭಿನ್ನವಾಗಿವೆ. ಹೀಗಾಗಿ, ವಿಳಂಬ ಸಾಧ್ಯತೆ ಹೆಚ್ಚಾಗಿದೆ.

2023 ಚುನಾವಣಾ ವರ್ಷವಾದ್ದರಿಂದ ಬಿಜೆಪಿ ಸರ್ಕಾರ ರಾಜೀವ್‌ ಗಾಂಧಿ ವಿವಿ ಕಟ್ಟಡ ನಿರ್ಮಾಣ ಆರಂಭಿಸಿ ಜಿಲ್ಲೆಯ ಮತದಾರರ ಮನವೊಲಿಸಿಕೊಳ್ಳಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳಿಗೆ ಪುಷ್ಠಿ ನೀಡುವ ಯಾವ ಲಕ್ಷಣಗಳು ಸಹ ಗೋಚರಿಸುತ್ತಿಲ್ಲ. 2021ರ ಜನವರಿಯಲ್ಲಿ ಅಂದು ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗದ್ದಿ ಡಾ.ಸಿ.ಎನ್‌.ಅಶ್ವತ್ಥ್ನಾರಾ ಯಣ ಸ್ಥಳ ಪರಿಶೀಲನೆ ನಡೆಸಿದ್ದರು. ಅದಾದ ನಂತರ ಪೂರಕ ಬೆಳವಣಿಗೆಗಳು ಆಗಿಲ್ಲ. ಹೀಗಾಗಿ, ವಿಳಂಬವಾಗು ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ವಿವಿ ಅಧಿಕಾರಿಗಳ ಹೇಳಿಕೆ ಏನು?: ಕಳೆದ ಜನವರಿ ಯಲ್ಲಿ ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಚಿವ ಡಾ.ಸಿ.ಎನ್‌.ಅಶ್ವತ್ಥ್ನಾರಾಯಣ ಅವರು ರಾಜೀವ್‌ ಗಾಂಧಿ ವಿವಿ ನಿರ್ಮಾಣ ಕಾರ್ಯವನ್ನು ಅತಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಭರವಸೆ ನೀಡಿ ದ್ದರು. ಇದಕ್ಕೆ ಪೂರಕ ಎಂಬಂತೆ 2022-23ನೇ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿಗಳು 600 ಕೋಟಿ ರೂ. ಅನುದಾನವನ್ನು ಘೋಷಿಸಿದರು. ಆಯವ್ಯಯದ ಘೋಷಣೆಯ ನಂತರ ತೀರಾ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಉಪಕುಲಪತಿ ಡಾ.ಎಂ.ಕೆ.ರಮೇಶ್‌ ಮಾತನಾಡಿ, ವಿವಿ ಕಟ್ಟಡ ನಿರ್ಮಾಣಕ್ಕೆ ರಾಮನಗರದ ಅರ್ಚಕರಹಳ್ಳಿಯಲ್ಲಿ ನಿಗದಿಯಾಗಿರುವ ಜಮೀನು ವ್ಯಾಜ್ಯದಿಂದ ಮುಕ್ತವಾಗುವವರೆಗೆ ಕ್ಯಾಂಪಸ್‌ ಸ್ಥಳಾಂತರ ಅಥವಾ ನಿರ್ಮಾಣ ಬೇಡ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮತ್ತು ಸೆನೆಟ್‌ ಸ್ಪಷ್ಟವಾಗಿ ಹೇಳಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಿ ಕಟ್ಟಡ ನಿರ್ಮಿಸಲು ಒಟ್ಟು 274 ಎಕರೆಯಲ್ಲಿ ಸರ್ಕಾರ ನಮಗೆ 70 ಎಕರೆ ಮಾತ್ರ ನೀಡಿದ್ದು, ಉಳಿದ ಜಾಗ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿದೆ. ವ್ಯಾಜ್ಯ ಮುಕ್ತ ಭೂಮಿ ದೊರೆತ ನಂತರವೇ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಡಳಿತ ಕಟ್ಟಡ ಸೇರಿದಂತೆ ವಿವಿಗೆ ಸಂಬಂಧಿಸಿದಂತೆ ವೈದ್ಯಕೀಯ ಕಾಲೇಜು ಕಟ್ಟಡಗಳನ್ನು ನಿರ್ಮಿಸಬೇಕಾಗಿದೆ.

ವಿವಿಯ ಜೊತೆಗೆ ಆರೋಗ್ಯ ನಗರವನ್ನು ನಿರ್ಮಾಣ ಮಾಡಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿ ದಂತೆ ಸಮಗ್ರ ಮತ್ತು ಅತ್ಯಾಧುನಿಕ ವ್ಯವಸ್ಥೆಯನ್ನು ಸೃಜಿಸುವುದು ಸರ್ಕಾರದ ಮೂಲ ಉದ್ದೇಶ. 2022-23ರ ಆಯವ್ಯಯ ಮಂಡನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀವ್‌ ಗಾಂಧಿ ವಿವಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 600 ಕೋಟಿ ರೂ ಅನುದಾನ ನೀಡಲಿದೆ ಎಂಬ ಘೋಷಣೆಗೆ ಪ್ರತಿಕ್ರಿಯಿಸಿರುವ ಉಪಕುಲಪತಿ, ಸರ್ಕಾರ ಘೋಷಿಸಿರುವ ಮೊತ್ತದಲ್ಲಿ ವಿವಿಯ ಆಡಳಿತ ವಿಭಾಗಕ್ಕೆ ಕಟ್ಟಡವನ್ನು ನಿರ್ಮಿಸಬಹುದಷ್ಟೆ, ಯೋಜನೆ ಉಳಿದ ಕಾಮಗಾರಿಗಳು ಸಾಧ್ಯವಿಲ್ಲ ಎಂದು ಸಹ ಪತ್ರಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸಚಿವರ ಹೇಳಿಕೆಗಳಿಗೂ, ವಿವಿ ಆಡಳಿತದ ಚುಕ್ಕಾಣಿ ಹಿಡಿದಿರುವ ಅಧಿಕಾರಿಗಳ ಹೇಳಿಕೆಗಳು ತಾಳೆ ಆಗುತ್ತಿಲ್ಲ. ಈ ಬೆಳವಣಿಗೆಗಳಿಂದ ಆರೋಗ್ಯ ವಿವಿ ಸಧ್ಯ ದಲ್ಲಿ ಸಾಕಾರವಾಗುವುದಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.

ವಿವಿ ಸದಸ್ಯರು ಮತ್ತು ವಿದ್ಯಾರ್ಥಿಗಳಿಂದ ವಿರೋಧ! :

ರಾಜೀವ್‌ ಗಾಂಧಿ ಆರೋಗ್ಯ ವಿವಿಯನ್ನು ಬೆಂಗಳೂರಿ ನಿಂದ ಅರ್ಚಕರಹಳ್ಳಿಗೆ ಸ್ಥಳಾಂತರಕ್ಕೆ ಕೆಲವು ಸೆನಟ್‌ ಸದಸ್ಯರ ವಿರೋಧವಿದೆ. ವಿವಿಯ ಕೆಲವು ವಿದ್ಯಾರ್ಥಿಗಳು ಸಹ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಸ್ಥಳಾಂತರಕ್ಕೆ ವಿರೋಧಿ ಸಿದ್ದರು. 2018ರಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ವೇಳೆ ರಾಜೀವ್‌ ಗಾಂಧಿ ವಿವಿ ಸ್ಥಳಾಂತರಕ್ಕೆ ಬಿಗಿ ನಿಲುವು ತೆಗೆದುಕೊಂಡಿತು. ಪ್ರಥಮ ಹೆಜ್ಜೆಯಾಗಿ ರಾಮನಗರದ ಕಂದಾಯ ಭವನದಲ್ಲಿ ಆರೋಗ್ಯ ವಿವಿಯ ಎಂಜಿ ನಿಯರಿಂಗ್‌ ವಿಭಾಗ ಆರಂಭವಾಯಿತು. ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಹಾಜರಿದ್ದರು. ಈ ವಿಚಾರದಲ್ಲೂ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಧ್ಯ ಈ ಪ್ರಕ್ರಿಯೆ ಅಲ್ಲಿಗೆ ನಿಂತಿದೆ. ಕಂದಾಯ ಭವನವೀಗ ಕೋವಿಡ್‌ ರೆಫ‌ರಲ್‌ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ. ರಾಜೀವ್‌ ಗಾಂಧಿ ಆರೋಗ್ಯ ವಿವಿ ಸ್ಥಳಾಂತರಕ್ಕೆ ನಿರಂತರ ವಿರೋಧ ವ್ಯಕ್ತವಾಗುತ್ತಲೇ ಇದೆ. ಆಡಳಿತ ವಿಭಾಗವನ್ನು ಬೆಂಗಳೂರಿನಿಂದ ಹೊರಗೆ ಸ್ಥಳಾಂತರ ಬೇಡ. ಸಂಶೋಧನಾ ವಿಭಾಗ ಮತ್ತು ಆಸ್ಪತ್ರೆ ವಿಭಾಗಗಳನ್ನು ಬೇಕಿ ದ್ದರೆ ರಾಮನಗಕ್ಕೆ ಸ್ಥಳಾಂತರಸಲಿ ಎಂದು ವಿವಿಗೆ ಸಂಬಂಧಿ ಸಿದ ಕೆಲವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ವಿವಿ ಸ್ಥಳಾಂತರ, ಜಿಲ್ಲೆಗೆ ಗರಿ! :

ರಾಜ್ಯದ ಉಳಿದ ಜಿಲ್ಲೆಗಳು ಸಹ ಅಭಿವೃದ್ಧಿ ಪಥದಲ್ಲಿ ಸಾಗಬೇಕಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ಸ್ಥಾಪನೆ ಯಾಗಿದ್ದು, ಆ ಜಿಲ್ಲೆಗೆ ಗರಿ ಸಂದಿದೆ. ಇದೇ ರೀತಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ರಾಮನಗರಕ್ಕೆ ಸ್ಥಳಾಂತರವಾಗ ಬೇಕು ಎಂಬುದು ಜಿಲ್ಲೆಯ ಜನತೆಯ ಅಭಿಪ್ರಾಯ.

2007ರಲ್ಲಿ ಯೋಜನೆ ಘೋಷಿಸಿದ ಮಾಜಿ ಸಿಎಂ ಎಚ್‌ಡಿಕೆ : 2007ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು. ಬೆಂಗಳೂರಿನಲ್ಲಿರುವ ರಾಜೀವ್‌ ಗಾಂಧಿ ವಿವಿ ವಿಸ್ತರಣೆಗೆ ಅವಕಾಶವಿಲ್ಲದ್ದನ್ನು ಗಮನಸಿದ ಅವರು, ಅರ್ಚಕರಹಳ್ಳಿ ಬಳಿಯಲ್ಲಿ 216 ಎಕರೆ ಭೂಮಿ ವಶಪಡಿಸಿಕೊಂಡು 71 ಎಕರೆ ಭೂಮಿಯಲ್ಲಿ ಇಡೀ ವಿವಿಗೆ ಕಟ್ಟಡಗಳನ್ನು ನಿರ್ಮಿಸುವುದು ಅಲ್ಲದೆ, ಸೂಪರ್‌ ಸ್ಪಷಾಲಿಟಿ ಆಸ್ಪತ್ರೆಗಳು ಸೇರಿದಂತೆ ಸಮಗ್ರ ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗಳನ್ನು ನಿರ್ಮಿಸುವ ಗುರಿ ಹೊಂದಿ ವಿವಿ ಮತ್ತು ಆರೋಗ್ಯ ನಗರ ಯೋಜನೆಯನ್ನು ಘೋಷಿಸಿದ್ದರು. 330 ಕೋಟಿ ರೂ. ಅನುದಾನವನ್ನು ಆಯವ್ಯಯದ ಮೂಲಕ ಮೀಸಲಿಟ್ಟರು. 216 ಎಕರೆ ಪೈಕಿ ಸರ್ಕಾರಕ್ಕೆ ಸೇರಿದ 41.15 ಎಕರೆ ಭೂಮಿ ಹೊರತು 175.01 ಎಕರೆ ಭೂಮಿ ಖಾಸಗಿಯವರಿಂದ ಖರೀದಿಸುವ ಪ್ರಕ್ರಿಯೆ ಆರಂಭವಾಯಿತು. ಈ ಪೈಕಿ 100 ಎಕರೆ ಭೂಮಿಯ ಮಾಲೀಕರಿಗೆ ಪರಿಹಾರವನ್ನು ಸರ್ಕಾರಕ್ಕೆ ಕೊಟ್ಟಿದೆ. ಉಳಿದ 75 ಎಕರೆ ಭೂಮಿಯ ಮಾಲೀಕರು ಪರಿಹಾರದ ವಿಚಾರದಲ್ಲಿ ತಕರಾರು ಇನ್ನು ಜೀವಂತವಿದ್ದು, ಸರ್ಕಾರ ಈ ಮಾಲೀಕರ ಮನವೊಲಿಸಿ ಭೂಮಿ ವಶಕ್ಕೆ ಪಡೆದುಕೊಂಡರೆ ವಿವಿ ಮತ್ತು ಆರೋಗ್ಯ ನಿರ್ಮಾಣಕ್ಕೆ ಬೇಕಾದ ಎಲ್ಲ ಪ್ರಮಾಣದ ಭೂಮಿ ಸರ್ಕರದ ಸುಪರ್ದಿಗೆ ಬರಲಿದೆ.

 

-ಬಿ.ವಿ.  ಸೂರ್ಯಪ್ರಕಾಶ್‌

ಟಾಪ್ ನ್ಯೂಸ್

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

1-tallur

ತಲ್ಲೂರು: ಪಿಕಪ್‌- ಕಾರು ಢಿಕ್ಕಿ

1-gooli

Gangolli:ಅರ್ಧ ಗಂಟೆಗೂ ಹೆಚ್ಚು ಭೀತಿ ಮೂಡಿಸಿದ ಗೂಳಿ ಕಾಳಗ

accident

Sringeri; ಪ್ರವಾಸಿ ವಾಹನಗಳ ಢಿಕ್ಕಿ: ವೃದ್ಧೆ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.