Donkey milk: ಬೊಂಬೆನಗರಿಯಲ್ಲಿ ಕತ್ತೆ ಹಾಲಿಗೆ ಬೇಡಿಕೆ!
Team Udayavani, Sep 4, 2024, 2:55 PM IST
ಚನ್ನಪಟ್ಟಣ: ಹಾಲು ಅಂದಾಕ್ಷಣ ನೆನಪಿಗೆ ಬರುವುದು ಹಸು ಇಲ್ಲವೇ ಎಮ್ಮೆಯ ಹಾಲು. ಆದರೆ, ಹಸು-ಎಮ್ಮೆ ಹಾಲಿಗಿಂತ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗಿದೆ. ಕತ್ತೆಯನ್ನು ಜನರು ನಿರ್ಲಕ್ಷ್ಯದಿಂದ ಕಾಣುತ್ತಾರೆ. ಆದರೆ, ಇದೀಗ ಕತ್ತೆಗೂ ಒಂದು ಒಳ್ಳೆಯ ಕಾಲ ಬಂದಿದೆ.
ಹೌದು…ಕತ್ತೆ ಹಾಲಿಗೆ ಸಂಪೂರ್ಣ ಬೇಡಿಕೆ ಬಂದಿದ್ದು, ಎಲ್ಲೆಡೆ ಈಗ ಅದರದ್ದೇ ಹವಾ ಆಗಿದೆ. ಬೊಂಬೆನಗರಿಯ ವಿವಿಧ ಬಡಾವಣೆಗಳಲ್ಲಿ, ಹಾದಿ ಬೀದಿಯಲ್ಲಿ ಕತ್ತೆ ಹಾಲಿಗೆ ಭಾರೀ ಬೇಡಿಕೆ ಬಂದಿದೆ. ಒಂದು ಲೀಟರ್ ಡೇರಿ ಹಾಲಿಗೆ ರೂ.45 ರೂಪಾಯಿ. ಆದರೆ ಕತ್ತೆ ಹಾಲಿಗೆ ರೂ.50ಗೆ ಕೇವಲ 5 ಎಂಎಲ್ ಅಥವಾ ಒಳ್ಳೆಗೆ ನೂರು ರೂಪಾಯಿ ದರ ಇದೆ.
ಕತ್ತೆ ಹಾಲು ಸೇವನೆ ಯಿಂದ ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಕಡಿಮೆಯಾಗುತ್ತದೆಯಂತೆ. ಇದರಿಂದ ನಗರದ ಜನರು ಕತ್ತೆ ಹಾಲು ಕುಡಿಯಲು ಆಸಕ್ತಿ ವಹಿಸಿರುವುದು ಅಚ್ಚರಿ ಮೂಡಿ ಸಿದೆ. ಕತ್ತೆ ಹಾಲು ಅರ್ಧ ಲೀಟರ್ ನಷ್ಟು ಸಿಗುವುದಿಲ್ಲ. ಇದು ಎಂಎಲ್‌ನಲ್ಲಿ ಮಾತ್ರ ಗ್ರಾಹಕರ ಎದುರು ಹಾಲು ಕರೆದು ಕೊಡಲಾಗುತ್ತದೆ. ರೂ.80-100ಗೆ 10 ಎಂಎಲ್ ಹಾಲು ಸಿಗುತ್ತದೆ. ಒಂದು ಲೀಟರ್ ಹಾಲಿಗೆ ರೂ.5,000 ಆಗಬಹುದು.
ನಿರೋಧಕ ಶಕ್ತಿ ಹೆಚ್ಚುವುದು: ಕತ್ತೆ ಹಾಲಿನಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ವೈಜ್ಞಾನಿಕವಾಗಿಯೂ ರುಜು ವಾತಾಗಿದೆ. ಹಾಗಾಗಿ ಈ ಹಾಲಿಗೆ ಬೇಡಿಕೆ ಬರಲು ಪ್ರಮುಖ ಕಾರಣವಾಗಿದೆ. ನೆರೆಯ ರಾಜ್ಯಗಳಿಂದ ಹತ್ತಾರು ಕುಟುಂಬಗಳು ಕತ್ತೆಯೊಂದಿಗೆ ಚನ್ನಪಟ್ಟಣ ನಗರ ಹಾಗೂ ಗ್ರಾಮೀಣ ಭಾಗಕ್ಕೆ ಬಂದು ಹಾಲು ಮಾರುತ್ತಿವೆ. ನಗರ ಸೇರಿದಂತೆ ಹಳ್ಳಿಗಳಿಗೆ ಬೆಳಗ್ಗೆ 6 ಗಂಟೆಗೆ ಹೋಗಿ 10-11 ಗಂಟೆಗೆ ವೇಳೆ 1000-1500 ರೂ.ಗಳಿಕೆ ಮಾಡುತ್ತಿರುವ ದೃಶ್ಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ದೊಡ್ಡವರು ಕೂಡ ಚೌಕಾಸಿ ಮಾಡಿ ಹಾಲು ಕುಡಿಯುತ್ತಿದ್ದಾರೆ: ಕತ್ತೆ ಮಾಲಿಕರು ಕತ್ತೆ ಹಾಲಿನ ಮಹತ್ವದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಾರೆ. ಬೇಕಾ ದವರು ಅಲ್ಲೇ ಕತ್ತೆ ಹಾಲನ್ನು ಕರೆಸಿಕೊಂಡು ಕುಡಿಯುತ್ತಿದ್ದಾರೆ. ಬಾಣಂತಿಯರು ತಮ್ಮ ಕಂದಮ್ಮಗಳಿಗೆ ಕತ್ತೆ ಹಾಲು ಕುಡಿಸಿ ಬುದ್ಧಿವಂತರಾಗಲಿ, ಶಕ್ತಿವಂತರಾಗಲಿ, ರೋಗ ನಿರೋಧಕ ಶಕ್ತಿ ಹೆಚ್ಚಾಗಲಿ ಅಂತಿದರೆ, ರಸ್ತೆಯಲ್ಲಿ ಕತ್ತೆ ಕಂಡು ದೊಡ್ಡವರು ಕೂಡ ಚೌಕಾಸಿ ಮಾಡಿ ಹಾಲು ಕುಡಿಯುತ್ತಿದ್ದಾರೆ. ಕತ್ತೆಗಳು ಅಂದರೆ ಕೇರ್ ಮಾಡದ ಜನ, ಇದೀಗ ಕೈಗೆಟುಕದ ಅದರ ಹಾಲಿಗೆ ಮುಗಿ ಬೀಳುತ್ತಿರುವುದಂತು ಸಾಮಾನ್ಯವಾಗಿದೆ.
ದಿನವೊಂದಕ್ಕೆ ಸುಮಾರು ಅರ್ಧ ಲೀಟರ್ ಹಾಲು: ಒಂದು ಕತ್ತೆ ದಿನವೊಂದಕ್ಕೆ ಸುಮಾರು ಅರ್ಧ ಲೀಟರ್ ಹಾಲು ನೀಡುತ್ತದೆ. ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡಬೇಕು. ಹೆಚ್ಚೆಂದರೆ ದಿನಕ್ಕೆ 1200-1500 ರು. ಸಂಪಾದಿಸುತ್ತೇವೆ. ನಾನು ನಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವು. ವರ್ಷದಲ್ಲಿ ಮೂರು ತಿಂಗಳು ಬೇರೆ ನಗರಕ್ಕೆ ಹೋಗಿ ಹಾಲು ಮಾರುತ್ತೇವೆ ಎನ್ನುತ್ತಾರೆ ಕತ್ತೆ ಮಾಲೀಕ ಸಂದೇಶ್. ಅತ್ಯುತ್ತಮ ಪೌಷ್ಟಿಕಾಹಾರ ಎಂಬ ಹೆಗ್ಗಳಿಕೆ: ಪ್ರಾಚೀನ ಗ್ರೀಸ್‌ನ ರಾಣಿ ಕ್ಲಿಯೋಪಾತ್ರಾ ತಮ್ಮ ಸೌಂದರ್ಯವನ್ನು ವೃದ್ಧಿಸಲು ಕತ್ತೆಯ ಹಾಲನ್ನು ಬಳಸುತ್ತಿದ್ದರಂತೆ. ಅದು 2,000 ವರ್ಷಗಳ ಹಿಂದಿನ ಕಥೆ. ಆದರೆ, ಈಗಲೂ ಕತ್ತೆಯ ಹಾಲಿಗೆ ಬೇಡಿಕೆ ಇದೆ. ಕೇವಲ ಸೌಂದರ್ಯ ವರ್ಧಕ ಸಾಧನವಾಗಿ ಅಲ್ಲದೆ, ಅತ್ಯುತ್ತಮ ಪೌಷ್ಟಿಕಾಹಾರ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಕತ್ತೆಯ ಹಾಲು ತಾಯಂದಿರ ಎದೆಹಾಲಿನಷ್ಟೇ ಶ್ರೇಷ್ಠ ಮತ್ತು ಪೌಷ್ಟಿಕಾಂಶ ಭರಿತ ಎನ್ನುತ್ತಾರೆ ಆಹಾರ ತಜ್ಞರು.
ವೃದ್ಧಾಪ್ಯ ಬದಲಾವಣೆ ಮುಂದೂಡುವ ತ್ವಚೆಗಾಗಿ: ಕತ್ತೆಯ ಹಾಲಿನಲ್ಲಿ ವೃದ್ಧಾಪ್ಯದ ಬದಲಾವಣೆಗಳನ್ನು ಮುಂದೂಡುವ, ತ್ವಚೆಯ ಆರೋಗ್ಯವನ್ನು ರಕ್ಷಿಸುವ ಅಂಶಗಳು ಇದ್ದು, ಸೌಂದರ್ಯವರ್ಧಕ ಕ್ರೀಮ್, ಸೋಪ್, ಶ್ಯಾಂಪೂಗಳಲ್ಲಿಯೂ ಇದೀಗ ಬಳಕೆಯಾಗುತ್ತಿದೆ. ಹೀಗಾಗಿ ಕೇವಲ ಕುಡಿಯಲು ಮಾತ್ರವಲ್ಲದೆ ಇತರ ಆಯಾಮಗಳೂ ಇದರಲ್ಲಿವೆ.
”ಜನ ಈಗ ಪರಂಪರಾನುಗತ ವಿಧಾನಗಳ ಮೂಲಕ ಸೌಂದರ್ಯವರ್ಧನೆ ಬಯಸುತ್ತಿದ್ದಾರೆ. ಇದರ ಪರಿಣಾಮ ಕತ್ತೆ ಹಾಲಿನಿಂದ ತಯಾರಿಸುವ ಉತ್ಪನ್ನಗಳಿಗೆ ಬೇಡಿಕೆ ಇದೆ. ಮಕ್ಕಳಿಗೆ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ, ಚರ್ಮದ ಅಲರ್ಜಿಗಳಿಂದ ಬಳಲುತ್ತಿರುವವರಿಗೆ ಇದು ಉತ್ತಮ ಎನ್ನುತ್ತಾರೆ ಆಹಾರ ತಜ್ಞರು.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗದ ಪ್ರಕಾರ ಕತ್ತೆ ಹಾಲು ಹಲವು ಪೌಷ್ಟಿ ಕಾಂಶಗಳನ್ನು ಒಳಗೊಂಡಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸೇವನೆಗೆ ಅರ್ಹವಾದ ಹಾಲುಗಳಲ್ಲಿ ಕತ್ತೆ ಹಾಲಿಗೆ ಸ್ಥಾನ ಇದೆ. ಭಾರತದಲ್ಲಿ ಕತ್ತೆ ಹಾಲು ಸೇವಿಸುವವರು ಕಡಿಮೆ. ಆದರೆ ಇತ್ತೀಚೆಗೆ ಕಾಸ್ಮೆಟಿಕ್ಸ್ ಉದ್ದಿಮೆಯಲ್ಲಿ ಬಳಸಲಾಗುತ್ತಿದೆ ಎನ್ನುತ್ತಾರೆ ವೈದ್ಯರು.
ಕತ್ತೆ ಹಾಲು ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಕಡಿಮೆಯಾಗುತ್ತದೆಯಂತೆ. ಇದರಿಂದ ನಗರದ ಜನರು ಕತ್ತೆ ಹಾಲು ಕುಡಿಯಲು ಆಸಕ್ತಿ ವಹಿಸಿರುವುದು ಅಚ್ಚರಿ ಮೂಡಿಸಿದೆ. ಕತ್ತೆ ಹಾಲು ಅರ್ಧ ಲೀಟರ್‌ನಷ್ಟು ಸಿಗು ವುದಿಲ್ಲ. ಇದು ಎಂಎಲ್ ಅಥವಾ ಒಳ್ಳೆ ಯಲ್ಲಿ ಮಾತ್ರ ಸಿಗುತ್ತದೆ. ಎದುರು ಹಾಲು ಕರೆದು ಕೊಡಲಾಗುತ್ತದೆ. ರೂ.80-100ಗೆ 10 ಎಂಎಲ್ ಹಾಲು ಸಿಗುತ್ತದೆ. –ಸಂದೇಶ್, ಕತ್ತೆ ಮಾಲಿಕ
– ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ
Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.