Eco-friendly Ganpati: ಪರಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಬೇಡಿಕೆ
Team Udayavani, Sep 7, 2023, 12:16 PM IST
ಕುದೂರು: ಗಣೇಶನ ಹಬ್ಬ ಹತ್ತಿರವಾಗುತ್ತಿದ್ದಂತೆ ಗಣೇಶನ ಮೂರ್ತಿಗಳನ್ನು ವಿವಿಧ ರೂಪಗಳಲ್ಲಿ ನೋಡಲು ಗ್ರಾಹಕರು ಬಯಸುತ್ತಾರೆ, ಅದೇ ರೀತಿ ಕಲಾವಿದರು ಕೂಡ ಗ್ರಾಹಕರ ಆಕರ್ಷಣೆಗೆ ತಕ್ಕಂತೆ ವಿವಿಧ ರೀತಿಯ ಗಣೇಶನ ವಿಗ್ರಹಗಳು ಸಿದ್ಧವಾಗಿವೆ.
ಮಾಗಡಿ ತಾಲೂಕಿನ ಸೋಲೂರು ಹೋಬ ಳಿಯ ಬಾಣವಾಡಿ ಗ್ರಾಮದಲ್ಲಿ ಬಸವರಾಜು ಕುಟುಂಬದವರು ಸುಮಾರು 50 ವರ್ಷದಿಂದ ಪರಿಸರ ಗಣಪತಿ ಮೂರ್ತಿಗಳನ್ನು ಮಾಡುವುದರಲ್ಲಿ ಎತ್ತಿದ ಕೈ, ಬಸವರಾಜು ಅವರ ಪುತ್ರ ಪ್ರಭುದೇವ್ ಅವರು ಕೂಡ ವಿವಿಧ ವಿನ್ಯಾಸದ ಗಣಪತಿ ವಿಗ್ರಹಗಳನ್ನು ಮಾಡುವುದರಲ್ಲಿ ನಿಸ್ಸಿಮಾರಾಗಿದ್ದಾರೆ, ಹಲವು ವರ್ಷಗಳಿಂದಲೂ ಬಸವರಾಜು ಕುಟುಂಬದವರು ಮಾಡುವ ಗಣೇಶ ವಿಗ್ರಹಗಳನ್ನು ಖರೀದಿಸಲು ತುಮಕೂರು, ಬೆಂಗಳೂರು, ಗೌರಿಬಿದನೂರು, ಹಾಸನ, ಕುಣಿಗಲ್, ಮತ್ತೆ ತಮಿಳುನಾಡು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಬಹಳಷ್ಟು ಬೇಡಿಕೆ ಇದ್ದು ಅಲ್ಲಿಂದ ಭಕ್ತರು ಬಂದು ಗಣೇಶನ ದೊಡ್ಡ ದೊಡ್ಡ ಮೂರ್ತಿಗಳನು ತೆಗೆದುಕೊಂಡು ಹೋಗುತ್ತಾರೆ, ಈ ಕುಟುಂಬದವರು ಕಾಲು ಅಡಿಯಿಂದ ಸುಮಾರು ಹದಿನೈದು ಅಡಿ ಗಣಪನ ವಿಗ್ರಹದ ಮೂರ್ತಿಯನ್ನು ತಯಾರಿಸುತ್ತಾರೆ, ಇವರ ಗಣಪತಿಗೆ ರಾಜ್ಯ ವಲ್ಲದೇ ಅಂತರಾಜ್ಯದಲ್ಲಿಯೂ ಹೆಚ್ಚಿನ ಬೇಡಿಕೆ ಇದೆ.
ಪರಿಸರ ಸ್ನೇಹಿ ಗಣೇಶ: ಬಸವರಾಜು ಕುಟುಂಬದವರು ಜೇಡಿಮಣ್ಣಿನಿಂದಲೇ ಗಣೇಶನ ಮೂರ್ತಿಗಳನ್ನು ಮಾಡು ವುದನ್ನು ಕರಗತ ಮಾಡಿಕೊಂಡು ಬಂದಿದ್ದಾರೆ. ಯಾವುದೇ ರಾಸಾಯನಿಕ ಬಣ್ಣವನ್ನು ಬಳಸದೆ ಪರಿಸರಕ್ಕೆ ಹಾನಿಯಾಗದ ವಾಟರ್ ಪೇಂಟ್ ಬಳಿದು ಗಣೇಶನ ವಿಗ್ರಹಕ್ಕೆ ಅಂದ ಹೆಚ್ಚಿಸುತ್ತಾರೆ, ಬೇರೆ ಕಡೆಯಿಂದ ಪ್ರತಿ ವರ್ಷ ಬಸವ ಜಯಂತಿ ಯಂದು ಕೆರೆಗಳಿಂದ ಜೇಡಿ ಮಣ್ಣನ್ನು ತೆಗೆದುಕೊಂಡು ಬಂದು ಅದಕ್ಕೆ ಪೂಜೆ ಸಲ್ಲಿಸಿ, ಗಣಪತಿ ತಯಾರಿಕೆಗೆ ಚಾಲನೆ ನೀಡುತ್ತಾ, 3 ರಿಂದ 5 ತಿಂಗಳ ಕಾಲ ನಿರಂತರವಾಗಿ ಗಣಪತಿಯನ್ನು ತಯಾರಿಸುವ ಇವರಿಗೆ ಇದೇ ಜೀವನಕ್ಕೆ ಆಧಾರವಾಗಿದೆ, ಉಳಿದ ಅವಧಿಯಲ್ಲಿ ದೇವಾಲಯದ ಗೋಪುರಗಳಿಗೆ ವಿಗ್ರಹ ನಿರ್ಮಿಸುವುದು ಬಣ್ಣ ಹಚ್ಚುವ ಕೆಲಸವನ್ನು ನಿರ್ವಹಿಸಿ ವರ್ಷಕ್ಕೆ ಆಗುವಷ್ಟು ಆದಾಯವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ.
ವಿಭಿನ್ನವಾದ ಗಣಪ ಮೂರ್ತಿಗಳ ತಯಾರಿಸಿ : ಪಂಚಮುಖೀ ಗಣೇಶ, ದರ್ಬಾರ್ ಗಣೇಶ, ಹಂಸದ ಮೇಲೆ ಕುಳಿತ ಗಣಪ, ಬಸವಣ್ಣ ಗಣಪ, ಕೃಷ್ಣವತಾರ, ಲಕ್ಷ್ಮೀನರಸಿಂಹ ಗಣೇಶ, ಗುಡವಾಹನ ಗಣಪ, ವೆಂಕಟೇಶ್ವರ ಗಣಪ, ಆಂಜನೇಯ ಗಣಪ, ನವಿಲಮೇಲೆ ಕುಳಿತ ಗಣಪ, ಹೀಗೆ ಗ್ರಾಹಕರ ಅಭಿ ರುಚಿಗೆ ತಕ್ಕಂತೆ ವಿವಿಧ ರೀತಿಯ ಗಣಪತಿ ಮೂರ್ತಿಗಳನ್ನು ಬಸವರಾಜು ಮತ್ತು ಪ್ರಭುದೇವ್ ಅವರು ತಯಾರಿಸುತ್ತಾರೆ. ಸುಮಾರು ನೂರು ರೂ.ನಿಂದ ಹಿಡಿದು 50 ಸಾವಿರ ರೂ.ಬೆಲೆ ಬಾಳುವ ಗಣಪನನ್ನು ತಯಾರಿಸುತ್ತಾರೆ. ಮೂರ್ತಿ ತಯಾರಿಕೆಗೆ ಬಸವರಾಜು ಅವರ ಕುಟುಂಬದವರು ಕೈ ಜೋಡಿಸುತ್ತಾರೆ, ಅದರಿಂದ ಹೆಚ್ಚು ಗಣಪನ ಮೂರ್ತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಅರ್ಧ ಅಡಿ, ಒಂದು ಅಡಿ, ಒಂದೂವರೆ ಅಡಿ, ಎರಡು ಅಡಿ, ಗಣಪನ ಮೂರ್ತಿಗಳನ್ನು ಅಚ್ಚುಗಳ ಮೂಲಕವೇ ತಯಾರಿಸುತ್ತಾರೆ. ಎತ್ತರದ ಮೂರ್ತಿಗಳನ್ನು ಕೈಯಿಂದ ಮಾಡುವಲ್ಲಿ ಬಸವರಾಜು ನಿಸ್ಸಿಮರಾಗಿದ್ದಾರೆ.
ಸರ್ಕಾರ ಪಿಒಪಿ ಗಣಪತಿ ತಯಾರಿಕೆ ತಡೆಯಿಂದ ಜೇಡಿಮಣ್ಣಿನ ಗಣಪತಿಗೆ ವರ್ಷದಿಂದ ವರ್ಷಕ್ಕೆ ಬಾರಿ ಬೇಡಿಕೆಯಿದೆ, ಬೃಹತ್ ಮಟ್ಟದ ಗಣಪತಿ ಯನ್ನು ತಯಾರಿಸಲು ಜಾಗದ ಕೊರತೆ ಇದೆ, ಗ್ರಾಪಂ ಯಿಂದ ಒಂದು ನಿವೇಶನ ನೀಡಿದರೆ ಸಹಕಾರಿ ಯಾಗುತ್ತದೆ. ಜೇಡಿ ಮಣ್ಣಿನ ಗಣಪ ನನ್ನು ತಯಾರಿ ಸುವ ಮೂಲಕ ಪರಿಸರ ಸ್ನೇಹಿಯಾಗಿದ್ದೇವೆ, ಇಷ್ಟೆಲ್ಲಾ ಕಷ್ಟಪಟ್ಟು ಜೀವನ ಸಾಗಿಸಿ ಕೊಂಡು ಬಂದರು. ಸರ್ಕಾರ ಕಲಾವಿದರನ್ನು ಗುರುತಿಸುವಲ್ಲಿ ನಿರ್ಲಕ್ಷ್ಯಸಿದೆ. – ಬಸವರಾಜು, ಕಲಾವಿದ
ಜೇಡಿ ಮಣ್ಣಿನಿಂದ ಮಾಡುವ ಸಂಪ್ರದಾಯಕ ಗಣಪನಿಗೆ ಬೇಡಿಕೆ ಇದೆ, ಗ್ರಾಹಕರ ಅಭಿ ರುಚಿಗೆ ತಕ್ಕಂತೆ ಪ್ರತಿ ವರ್ಷ ಬದಲಾವಣೆ ಯಾಗುತ್ತಲೆ ಇವೆ, ಅವರ ಅಭಿರುಚಿಗೆ ತಕ್ಕಂತೆ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಗ್ರಾಹಕರನ್ನು ಸಂತೃಪ್ತಿಗೊಳಿಸುವುದೇ ನಮ್ಮ ಕೆಲಸವಾಗಿದೆ. – ಪ್ರಭುದೇವ್, ಕಲಾವಿದ
–ಕೆ.ಎಸ್.ಮಂಜುನಾಥ್ ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.