ದೇಸಿ ಹಸು ಸಾಕಾಣಿಕೆ ಲಾಭದಾಯಕ
Team Udayavani, Feb 15, 2021, 3:22 PM IST
ಕನಕಪುರ: ದೇಸಿ ತಳಿ ಹಸು ಸಾಕಾಣಿಕೆಯಿಂದ ರೈತರಿಗೆ ಹೆಚ್ಚು ಲಾಭದಾಯಕವಾಗಲಿದೆ ಎಂದು ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ತಿಳಿಸಿದರು.
ತಾಲೂಕಿನ ಮರಳವಾಡಿ ಹೋಬಳಿ ಕಲ್ಲನಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ, ದೇಸಿ ಹಸುವಿನ ಹಾಲು ಆರೋಗ್ಯಕರ ಹಾಗೂ ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿ. ಹೀಗಾಗಿ ನಾಟಿ ಹಸುವಿನ ಹಾಲಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಮರಳವಾಡಿ ಬಯಲು ಸೀಮೆಯಾಗಿದ್ದು, ಬಹುತೇಕ ರೈತರು ನಾಟಿ ತಳಿ ಹಸು ಸಾಕಾಣಿಕೆ ಮಾಡುತ್ತಿದ್ದಾರೆ ಎಂದರು.
ಬಮೂಲ್‌ನಲ್ಲಿ ಉತ್ಪಾದನೆಯಾಗುತ್ತಿರುವ ಬೆಣ್ಣೆ, ಚೀಸ್, ಹಾಲಿನ ಫೌಡರ್ ಉತ್ಪನ್ನಗಳಲ್ಲಿ ಹೆಚ್ಚಿನ ಗುಣಮಟ್ಟ ಹೊಂದಿದೆ. ದೇಶ ಅಲ್ಲದೇ ವಿದೇಶದಲ್ಲೂ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ನಂದಿನಿಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಕೇಂದ್ರ ಅನುಮತಿನೀಡಿದೆ. ಅಧಿಕಾರಿಗಳು ಮತ್ತು ರೈತರ ಶ್ರಮದಿಂದ ರಾಜ್ಯದ 13ಒಕ್ಕೂಟಗಳಲ್ಲಿ ಬಮೂಲ್‌ಗೆ ಈ ಅವಕಾಶ ಸಿಕ್ಕಿದೆ ಎಂದರು.
ರಾಸುಗಳಿಗೆ ವಿಮೆ ಮಾಡಿಸಿ: ಕಲ್ಲನಕುಪ್ಪೆ ಗ್ರಾಮದ ಹಾಲುಉತ್ಪಾದಕರ ಸಂಘದ ಸಹಕಾರದಿಂದ 18 ರಿಂದ 20 ಲಕ್ಷ ರೂ.ವೆಚ್ಚದಲ್ಲಿ ಸುಸರ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಬಮೂ ಲ್ ನಿಂದಲೂ ಸಹಾಯಧನ ನೀಡಲಾಗುವುದು. ಪ್ರತಿಯೊಬ್ಬಸದಸ್ಯರು ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ರೈತರು ಪೂರೈಸುವ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಸಿಗಲಿದ್ದು, ಗ್ರಾಮೀಣ ಭಾಗದ ರೈತರು, ಯುವಕರು ಹೈನೋದ್ಯಮದಲ್ಲಿ ತೊಡಗಿ ಸ್ವಾವಲಂಬನೆ ಸಾಧಿಸಿಸುವುದರ ಜೊತೆಗೆ, ಉತ್ತಮ ಗುಣ ಮಟ್ಟದ ಹಾಲು ಪೂರೈಕೆಗೆ ಆದ್ಯತೆ ನೀಡಬೇಕು ಎಂದರು.
ಜಿಪಂ ಸದಸ್ಯ ಎಂ.ಎನ್ ನಾಗರಾಜು, ಸಾದೇನಹಳ್ಳಿಈಶ್ವರ್, ಒಕ್ಕೂಟದ ಡಿ.ಎಂ.ಪ್ರಕಾಶ್, ವಿಸ್ತರಣಾಧಿಕಾರಿಗಳಾದಪ್ರವೀಣ್, ಅಲ್ಲಾ ಸಾಬ್, ಮರಳವಾಡಿ ಗ್ರಾಪಂ ಅಧ್ಯಕ್ಷ ಚಲುವರಾಜು, ಕಲ್ಲನಕುಪ್ಪೆ ಹಾಲು ಉತ್ಪಾದಕ ಸಂಘದಅಧ್ಯಕ್ಷ ಚಂದ್ರು, ಗ್ರಾಪಂ ಸದಸ್ಯ ಶಿವಶಂಕರ್, ಯಲಚವಾಡಿ ಚಂದ್ರು, ಕಲ್ಲನಕುಪ್ಪೆ ಕುಮಾರ್, ದೇವರಾಜು, ಕಾರ್ಯದರ್ಶಿ ಚಂದ್ರು, ನಿಂಗೇಗೌಡ ಉಪಸ್ಥಿತರಿದ್ದರು.
40 ಸಾವಿರ ರೂ.ವರೆಗೆ ಸಬ್ಸಿಡಿ :
ದೇಸಿ ತಳಿ ಹಾಲಿಗೆ ಹೆಚ್ಚು ಪ್ರೋತ್ಸಾಹ ನೀಡಿ ಹಾಲಿನ ಉತ್ಪಾದನೆ ಹೆಚ್ಚಿಸಲು ಈ ಭಾಗದಲ್ಲಿ 60 ಹಸುಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ಸರ್ಕಾರದಿಂದ 40 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ. ಈ ಭಾಗದಲ್ಲಿ ಒಂದು ಬಿಎಂಸಿ ಕೇಂದ್ರ ತೆರೆಯಲು ಬೇಡಿಕೆಯಿದ್ದು, ಉತ್ಪಾದನೆಗೆ ತಕ್ಕಂತೆ ಬಮೂಲ್ ಸಹಕಾರ ನೀಡಲಿದೆ. ಮುಂದಿನ ದಿನಗಳಲ್ಲಿ ರೈತರು ನಾಟಿ ತಳಿ ಹಸು ಸಾಕಾಣಿಕೆಗೆ ಆದ್ಯತೆ ನೀಡಿ, ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ
Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Former Prime Minister: ಮನಮೋಹನ್ ಸಿಂಗ್ ಕುಟುಂಬದ ಪರಿಚಯ; ನಡೆದು ಬಂದ ಹಾದಿ….
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.