ಬಿರುಗಾಳಿ ಮಳೆಗೆ ಬಾಳೆ ಫಸಲು ನಾಶ
Team Udayavani, Apr 17, 2021, 3:06 PM IST
ಕನಕಪುರ: ಬಿರುಗಾಳಿ ಮಳೆಗೆ ರೈತಬೆಳೆದಿದ್ದ 3 ಎಕರೆ ಕಟಾವಿಗೆ ಬಂದಿದ್ದಬಾಳೆ ಫಸಲು ನೆಲಕಚ್ಚಿರುವ ಘಟನೆಸೀಗೆಕೋಟೆ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಕಸಬಾ ಹೋಬಳಿಯಸೀಗೆಕೋಟೆ ಗ್ರಾಮದ ಸುಜಯಮೂರ್ತಿಎಂಬುವರಿಗೆ ಸೇರಿದ ಬಾಳೆ ಫಸಲುಗುರುವಾರ ಸಂಜೆ ಬೀಸಿದ ಬಿರುಗಾಳಿಸಹಿತ ಮಳೆಗೆ ಸಮೃದ್ಧವಾಗಿ ಬೆಳೆದಿದ್ದಬಾಳೆ ಗಿಡಗಳು ಮುರಿದುಬಿದ್ದಿವೆ.
ಹೆಚ್ಚುಆದಾಯ ಬರುವ ನಿರೀಕ್ಷೆಇಟ್ಟುಕೊಂಡಿದ್ದ ರೈತ ಬೆಳೆ ಕಳೆದುಕೊಂಡುಕಂಗಾಲಾಗಿ ದಿಕ್ಕುತೋಚದಂತಾಗಿದೆ.ಸೀಗೆಕೋಟೆ ಗ್ರಾಮದ ರೈತ ಸುಜಯಮೂರ್ತಿ ತಮ್ಮ ಮೂರು ಎಕರೆಜಾಗದಲ್ಲಿ ಲಕ್ಷಾಂತರ ಬಂಡವಾಳ ಹೂಡಿಬಾಳೆ ಗಿಡಗಳನ್ನು ಹಾಕಿದ್ದರು ಬೇಸಿಗೆಆರಂಭವಾಗಿದ್ದು ನೀರಿನಕೊರತೆಯಿದ್ದರೂ ಅಕ್ಕಪಕ್ಕದ ರೈತರಪಂಪ್ಸೆಟ್ ಗಳಿಂದ ನೀರನ್ನು ಎರವಲುಪಡೆದು ಹೆಚ್ಚಿನ ಮುತುವರ್ಜಿವಹಿಸಿದ್ದರು.
ಬಾಳೆ ಗಿಡಗಳುಸಮೃದ್ಧವಾಗಿ ಬೆಳೆದು ಗೊನೆ ಬಿಟ್ಟಿದ್ದವುಕೆಲವೇ ದಿನಗಳಲ್ಲಿ ಬಾಳೆಗೊನೆಗಳನ್ನುಕಟಾವು ಮಾಡಿ ಸಾವಿರಾರು ರೂಆದಾಯ ಮಾಡುವ ನಿರೀಕ್ಷೆಯಲ್ಲಿದ್ದರೈತನ ಲೆಕ್ಕಾಚಾರವನ್ನು ಬಿರುಗಾಳಿ ಸಹಿತಮಳೆ ಎಲ್ಲವನ್ನು ತಲೆಕೆಳಗು ಮಾಡಿದೆಗುರುವಾರ ಸಂಜೆ ಏಕಾಏಕಿ ಬಂದಬಿರುಗಾಳಿಗೆ ಸುಮಾರು ಮೂರು ಎಕರೆಜಾಗದಲ್ಲಿ ಬೆಳೆದಿದ್ದ ಬಾಳೆಗಿಡಗಳುನೆಲಕ್ಕುರುಳಿವೆ ಬಾಳೆ ಬೆಳೆಯಿಂದಆದಾಯ ನಿರೀಕ್ಷಿಸುತ್ತಿದ್ದ ರೈತ ಸುಜಯಮೂರ್ತಿಗೆ ಹಾಕಿದ ಬಂಡವಾಳವೂ ಕೈತಪ್ಪಿದೆ.
ಇದರಿಂದ ರೈತ ಸುಜಯಮೂರ್ತಿ ಬೆಳೆ ಕಳೆದುಕೊಂಡುಕಂಗಾಲಾಗಿ ದಿಕ್ಕುತೋಚದಂತಾಗಿರುವರೈತ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.