ಸಭೆಯ ಗದ್ದಲದ ನಡುವೆ ಸಿಇಒ ನೇಮಕಕ್ಕೆ ನಿರ್ಣಯ
Team Udayavani, Sep 23, 2019, 3:38 PM IST
ರಾಮನಗರ: ಬಿಡದಿಯ ರೈತರ ಸೇವಾ ಸಹಕಾರ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಗದ್ದಲ, ಗೊಂದಲದಲ್ಲಿ ಮುಕ್ತಾಯವಾಯಿತು. ಸಂಘದಲ್ಲಾಗಿರುವ ಅವ್ಯವಹಾರಗಳ ತನಿಖೆ ಮುಗಿಯುವವರೆಗೂ ಸರ್ವ ಸದಸ್ಯರ ಸಭೆ ಬೇಡ ಮುಂದೂಡಿ ಎಂಬ ಆಗ್ರಹಗಳ ನಡುವೆ ಸಿಇಒ ನೇಮಕ ಸೇರಿದಂತೆ ಕೆಲವು ಪ್ರಮುಖ ವಿಷಯಗಳಿಗೆ ನಿರ್ಣಯ ಕೈಗೊಳ್ಳಲಾಗಿದೆ.
ಬಿಡದಿಯ ರೈತ ಸಮುದಾಯ ಭವನದಲ್ಲಿ ಭಾನುವಾರ ಬೆಳಗ್ಗೆ ಸರ್ವ ಸದಸ್ಯರ ಸಭೆ ಉದ್ಘಾಟನೆಯಾಗುತ್ತಲೇ ಕೆಲವು ಸದಸ್ಯರು ಸಂಘದ ವಿರುದ್ಧ ಗಂಭೀರ ಆರೋಪಗಳಿವೆ. ಸದರಿ ಆರೋಪಗಳ ತನಿಖೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆಜ್ಞೆ ಮಾಡಿದ್ದಾರೆ. ತನಿಖೆ ಕಳೆದ ಜುಲೈನಲ್ಲಿ ಆರಂಭವಾಗಿದೆ, 90 ದಿನಗಳಲ್ಲಿ ವರದಿ ಕೈಸೇರಲಿದೆ. ಅಲ್ಲಿಯವರೆಗೂ ಸರ್ವ ಸದಸ್ಯರ ಸಭೆ ಬೇಡ ಎಂದು ಒತ್ತಾಯಿಸಿದರು.
ಸಹಾಯಕ ನಿಬಂಧಕರಿಗೆ ಪ್ರಸ್ತಾವನೆ ಕಳಿಸಿ: ಸಂಘದ ಸದಸ್ಯರಾದ ರೇಣುಕಯ್ಯ, ಬಾನಂದೂರು ಬಸವರಾಜು ಮತ್ತು ನಂಜುಂಡಿ ಮಾತನಾಡಿ, ಸಂಘದಲ್ಲಿ ಗುಮಾಸ್ತ ಹುದ್ದೆಯಲ್ಲಿದ್ದವರನ್ನೇ ಪ್ರಭಾರ ಸಿಒಇ ಹುದ್ದೆಯಲ್ಲಿ ಕಾರ್ಯನಿರ್ವಹಿಸುವಂತೆ ನೇಮಕ ಮಾಡಿಕೊಳ್ಳಲಾಗಿದೆ. ಸಂಘವು ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ, ಶೀಘ್ರವೇ ಹೊಸ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಕ ಮಾಡಿಕೊಳ್ಳಲು ನಿರ್ಣಯ ಕೈಗೊಂಡು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಪ್ರಸ್ತಾವನೆ ಕಳುಹಿಸುವಂತೆ ಒತ್ತಾಯಿಸಿದರು.
ಆರೋಪಗಳೇನು?: 2016-17ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕೋರಂ ಇಲ್ಲದಿದ್ದರು ಸಭೆ ನಡೆಸಿ ಬೈಲಾ ನಿಯಮವನ್ನು ಉಲ್ಲಂ ಸಲಾಗಿದೆ. ಬಿಡದಿಯಲ್ಲಿರುವ ಸಂಘದ ಕಚೇರಿಯ ಮುಂಭಾಗ ನಿರ್ಮಿಸಿರುವ ಕಟ್ಟಡಕ್ಕೆ ಟೆಂಡರ್ ಕರೆಯದೆ, 9.49 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಸಹಕಾರ ಸಂಘಗಳ ನಿಬಂಧನೆಗಳನ್ನು ಮೀರಿ ಬಿಡದಿ ಹೋಬಳಿ ಇಟ್ಟಮಡು ಗ್ರಾಮದಲ್ಲಿ 10.50 ಲಕ್ಷ ರೂ. ಬದಲಿಗೆ 12.59 ಲಕ್ಷ ರೂ. ವ್ಯಯಿಸಲಾಗಿದೆ.
ನಿಯಮ ಉಲ್ಲಂ ಸಿ ಸಿಬ್ಬಂದಿ ನೇಮಕ: ಸಂಘದ ಕ್ಯಾಶ್ ಕೌಂಟರ್ ಮತ್ತು ಇತರ ಪೀಠೊಪಕರಣ ಕಾಮಾಗಿರಿ ಸಂಬಂಧಿಸಿದಂತೆ ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣ ಪತ್ರ ಪಡೆದಿಲ್ಲ. ಇಲಾಖೆಅನುಮತಿಯನ್ನು ಪಡೆಯದೇ ಹಣ ವ್ಯಯಿಸಲಾಗಿದೆ. ಸಹಾಕರ ಸಂಘಗಳ ಅಧಿನಿಯಮವನ್ನು ಉಲ್ಲಂ ಸಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.
ಆರೋಪಗಳ ತನಿಖೆಗೆ ಆದೇಶ: ಸಂಘದ ಕಟ್ಟಡವೊಂದಕ್ಕೆ 20 ಸಾವಿರ ಬಾಡಿಗೆ ಬದಲಿಗೆ 15 ಸಾವಿರಕ್ಕೆ ಇಳಿಸಿರುವುದು, ಸಂಘದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವೇತ್ರ ಶ್ರೇಣಿ ಮತ್ತು ವೃಂದ ಬಲವನ್ನು ಮಂಜೂರು ಮಾಡಿರುವ ವಿಷಯದಲ್ಲಿಯು ನಿಯಮಗಳ ಉಲ್ಲಂಘನೆಯಾಗಿದೆ. 2013-14ರಿಂದ 2017-18ನೇ ಸಾಲಿನ ಶಾಸನ ಬದ್ಧ ಲೆಕ್ಕಪರಿಶೋಧಕರ ವರದಿಗಳಲ್ಲಿ ಕಂಡು ಬಂದಿರುವ ಗಂಭೀರವಾದ ನ್ಯೂನತೆಗಳನ್ನು ಸರಿಪಡಿಸದಿರುವುದು, 2015-16ನೆ ಸಾಲಿಗೆ ಹೋಲಿಸಿದರೆ 2016-17, 2017-18ನೇ ಸಾಲಿನಲ್ಲಿ ನಿವ್ವಳ ಲಾಭದಲ್ಲಿ ಕಡಿಮೆಯಾಗಿರುವ ವಿಚಾರ ಹೀಗೆ 10ರಿಂದ 12 ಆರೋಪಗಳ ತನಿಖೆಗೆ ಆದೇಶವಾಗಿದೆ. ಹೀಗಾಗಿ ಸಭೆ ನಡೆಸುವುದು ಬೇಡ ಎಂದು ಸದಸ್ಯರಾದ ಬಸವರಾಜು, ರೇಣುಕಪ್ಪ, ಪುಟ್ಟರೇವಯ್ಯ, ನಂಜುಂಡಿ ಅವರು ಏರಿದ ದನಿಯಲ್ಲೇ ಪಟ್ಟು ಹಿಡಿದರು.
ತನಿಖೆಗೆ ಯಾರು ತಡೆದಿಲ್ಲ: ಸಂಘದ ಅಧ್ಯಕ್ಷ ಬೈರೇಗೌಡ ಮಾತನಾಡಿ, ತನಿಖೆಯನ್ನು ಯಾರು ತಡೆದಿಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ. ಸರ್ವ ಸದಸ್ಯರ ಸಭೆಯನ್ನು ನಡೆಯಲು ಬಿಡಿ ಎಂದು ಮಾಡಿದ ಮನವಿಗೆ ಸದಸ್ಯರು, ತಮ್ಮ ಪಟ್ಟು ಸಡಿಸಲಿಲ್ಲ. ಪ್ರಭಾರ ಸಿಇಒ ಸೀನಪ್ಪ ಮತ್ತು ಕೆಲವು ಪದಾಧಿಕಾರಿಗಳು ಮತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದಸ್ಯರ ಧರಣಿ: ಪದಾಧಿಕಾರಿಗಳ ಸಮಜಾಯಿಷಿಗಳಿಗೆ ಸಮಾಧಾನಗೊಳ್ಳದ ಸದಸ್ಯರಾದ ಬಸವರಾಜು, ರೇಣುಕಯ್ಯ ಮತ್ತಿತರರು ವೇದಿಕೆಯ ಮೇಲೆ ಧರಣಿ ಕುಳಿತು ಪ್ರತಿಭಟಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಉಮಾ, ನಿರ್ದೇಶಕರಾದ ಎಂ.ಚಂದ್ರಶೇಖರ್, ನಿರ್ದೇಶಕರಾದ ಜಿ.ಡಿ.ಸತೀಶ್, ಆರ್.ಮಲ್ಲೇಶ್, ಬಿ.ಪಿ.ರಾಮು, ಸಿ.ಎನ್ .ನಾಗರಾಜಯ್ಯ, ಶಿವಯ್ಯ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.