ಗ್ಯಾಸ್ ಗೋಡೌನ್ ಸ್ಥಳಾಂತರಿಸಿ
ಮಾಲಿಕರ ವಿರುದ್ಧ ಘೋಷಣೆ ಕೂಗಿದ ನಿವಾಸಿಗಳು | ಅಧಿಕಾರಿಗಳಿಂದ ಸೂಚನೆ
Team Udayavani, Jun 3, 2019, 10:08 AM IST
ರಾಮನಗರದ ಅರ್ಕಾವತಿ ಬಡಾವಣೆ ನಿವಾಸಿಗಳು ತಮ್ಮ ಬಡಾವಣೆಯಲ್ಲಿರುವ ಗ್ಯಾಸ್ ಗೋಡೌನ್ ಘಟಕವನ್ನು ಸ್ಥಳಾಂತರಿಸುವಂತೆ ಪ್ರತಿಭಟನೆ ನಡೆಸಿದರು.
ರಾಮನಗರ:ಜನವಸತಿ ಪ್ರದೇಶದಲ್ಲಿರುವ ಎಚ್.ಪಿ. ಕಂಪನಿಯ ಗ್ಯಾಸ್ ಸಿಲಿಂಡರ್‌ಗಳ ಗೋಡೌನ್ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಇಲ್ಲಿನ ಅರ್ಕಾವತಿ ಬಡಾವಣೆ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ನಿವಾಸಿಗಳಿಂದ ಹೋರಾಟದ ಎಚ್ಚರಿಕೆ: ನಗರದ ಅರ್ಕಾವತಿ ಬಡಾವಣೆಯಲ್ಲಿರುವ ಗ್ಯಾಸ್ ಗೋಡೌನ್ ಘಟಕದ ಎದುರು ಜಮಾಯಿಸಿದ ನಾಗರಿಕರು, ಏಜೆನ್ಸಿ ಮಾಲಿಕ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಿರಂತರ ಅಪಾಯದ ಆತಂಕಕ್ಕೆ ಕಾರಣವಾಗಿರುವ ಈ ಘಟಕವನ್ನು ಕೂಡಲೇ ಸ್ಥಳಾಂತರಿಸದಿದ್ದರೆ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಅರ್ಕಾವತಿ ಬಡಾವಣೆಯ ಸರ್ವೆ ನಂ.104ರ ಸರ್ಕಾರಿ ಖರಾಬು ಜಮೀನಿನಲ್ಲಿÃುವ ಘಟಕದ ಸುತ್ತಮುತ್ತ ಜನವಸತಿ ಕಟ್ಟಡಗಳಿವೆ, ಉದ್ಯಾನವನ ಕೂಡ ಇದೆ. ಒಂದು ವೇಳೆ ಅವಘಡ ನಡೆದಿದ್ದೇ ಆದಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಣ ಹಾನಿ ಸಂಭಸುವ ಆತಂಕವಿದೆ ಎಂದು ನಾಗರೀಕರು ಪ್ರತಿಕ್ರಿಯಿಸಿದರು.
ನಿರಪೇಕ್ಷಣಾ ಪತ್ರ ನಿರಾಕರಿಸಿರುವ ನಗರಸಭೆ: ಜನವಸತಿ ಪ್ರದೇಶದಲ್ಲಿ ಅಪಾಯಕಾರಿಯಾಗಿರುವ ಗ್ಯಾಸ್ ಗೋಡೌನ್ ಘಟಕಕ್ಕೆ ನಾಗರಿಕರ ತೀವ್ರ ವಿರೋಧಕ್ಕೆ ಎಚ್ಚೆತ್ತ ನಗರಸಭೆ ಕಳೆದ ಮೂರು ವರ್ಷದಿಂದ ನಿರಾಕ್ಷೇಪಣಾ ಪತ್ರವನ್ನು ನಿರಾಕರಿಸಿದೆ. ಆದರೂ ಈ ಘಟಕ ಇಲ್ಲೇ ಇದೆ. ಘಟಕವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿರುÊುದಾಗಿ, ಹಲವಾರು ಬಾರಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಸ್ಥಳಾಂತರಿಸುವಂತೆ ಸೂಚನೆ: ರಾಮನಗರ ತಹಸೀಲ್ದಾರ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗೋದಾಮು ಸ್ಥಳಾಂತರಿಸುವಂತೆ ಎಚ್ಪಿ ಗ್ಯಾಸ್ ಏಜೆನ್ಸಿ ಮಾಲಿಕರಿಗೆ ಸೂಚನೆ ನೀಡಿದ್ದಾರೆ. ಆದರೆ, ತಹಸೀಲ್ದಾರ್ ಆದೇಶಕ್ಕೂ ಕಿಮ್ಮತ್ತು ನೀಡದೆ ಅಲ್ಲೇ ಮುಂದುವರಿಸುತ್ತಿದ್ದಾರೆ ಎಂದರು.
ಆತಂಕದಲ್ಲೇ ಜೀವನ: ಬಡಾವಣೆ ನಿವಾಸಿಗಳು ಪ್ರತಿ ನಿತ್ಯ ಆತಂಕದಲ್ಲೇ ದಿನದೂಡುವಂತಾಗಿದೆ. ಒಂದು ಸಿಲಿಂಡರ್ ಸ್ಫೋಟಗೊಂಡರೆ ಭಾರೀ ಅನಾಹುತ ಸಂಭಸುತ್ತದೆ. ನೂರಾರು ಸಿಲಿಂಡರ್ ಒಮ್ಮೆಲೆ ಸ್ಫೋಟಗೊಂಡರೆ ಆಗುವ ಅನಾಹುತ ಊಹೆಗೂ ನಿಲುಕದ್ದು ಆತಂಕ ವ್ಯಕ್ತಪಡಿಸಿದರು. ಗೋದಾಮಿಗೆ ಹೊಂದಿಕೊಂಡಂತೆ ಮನೆಗಳು ನಿರ್ಮಾಣವಾಗಿದೆ. ಅನತಿ ದೂರದಲ್ಲೇ ಶಾಲೆ ಕೂಡ ಇದೆ. ಪೊಲೀಸ್ ವಸತಿ ಗೃಹ ಹಾಗೂ ಸರಕಾರಿ ಅಧಿಕಾರಿಗಳ ವಸತಿ ಗೃಹಗಳೂ ಇವೆ. ಒಂದು ವೇಳೆ ಪ್ರಾಣ ಹಾನಿ ಸಂಭಸಿದರೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ನಾಗರೀಕರು ಎಚ್ಚರಿಸಿದರು.
ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೂ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದೆ. ಈ ವಿಚಾರದಲ್ಲಿ ಅವರು ಸಹ ಮೌನ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಪ್ರತಿಭಟನೆಯಲ್ಲಿ ಬಡಾವಣೆಯ ನಿವಾಸಿಗಳಾದ ರಾಜಣ್ಣ, ಪುಟ್ಟರಾಮಣ್ಣ, ಯಶವಂತರಾವ್, ಪೂರ್ಣಚಂದ್ರ, ಹನುಮಂತೇಗೌಡ, ಜಗದೀಶ್, ಬ್ಯಾಂಕ್ ಶಿವಣ್ಣ, ರೈಡ್ ನಾಗರಾಜು, ವಕೀಲ ಅಂಬರೀಷ್, ಕಿರಣ್, ಭೋಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.