ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸೋಣ: ಮಂಜು
Team Udayavani, Feb 17, 2021, 1:11 PM IST
ಮಾಗಡಿ: ನಾನು ಯಾರ ಮರ್ಜಿಗೂ ಕೆಲಸ ಮಾಡಲ್ಲ. ನಾವು, ನೀವು ಸೇರಿ ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡೋಣ ಎಂದು ಶಾಸಕ ಎ.ಮಂಜುನಾಥ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ನೇರವಾಗಿ ಉತ್ತರ ಸಿಗಬೇಕು. ಫಲಾನುಭವಿಗಳು ಹಕ್ಕು ಪತ್ರ ಪಡೆದು 25 ವರ್ಷಗಳಾಗಿದ್ದರೂ, ಅವರ ಹೆಸರಿಗೆ ಖಾತೆ, ಪಹಣೆಯಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿವರ್ಗ ಒಟ್ಟಾಗಿ ಕ್ಷೇತ್ರದ ಜನರ ಸಮಸ್ಯೆ ನಿವಾರಿಸಲು ಪ್ರಾಮಾಣಿಕ ಕೆಲಸ ಮಾಡೋಣ ಎಂದರು.
ಸರ್ಕಾರಿ ಕೆಚೇರಿಯಲ್ಲಿ ವಿಭಾಗ ಪತ್ರ, ಖಾತೆ, ಪಹಣಿ ಮಾಡದೆ ಸಣ್ಣಪುಟ್ಟ ಸಮಸ್ಯೆಗಳನ್ನು ತೋರಿಸಿ ವಿಳಂಬ ನೀತಿ ಅನುಸರಿಸಿ, ಜನರನ್ನು ಅಲೆಸುತ್ತಿದ್ದಾರೆ ಎಂಬ ಆರೋಪಕೇಳಿ ಬಂದಿದೆ. ಒಂದೆರಡು ಬಾರಿ ಕ್ಷಮೆ ಇರು ತ್ತದೆ.ಮೂರನೇ ಬಾರಿ ಕ್ಷಮೆಯಿಲ್ಲ. ಅರ್ಥ ಮಾಡಿ ಕೊಂಡು ಅಧಿಕಾರಿಗಳು ಕೆಸಲ ಮಾಡಬೇಕು. ಇದಕ್ಕಾ ಗಿಯೇ ಎಲ್ಲಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖ ದಲ್ಲಿಯೇಪರಿಹಾರ ದೊರಕಿಸಿಕೊಡಲು ಜನ ಸ್ಪಂದನಾ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು.
ಕಳ್ಳರು, ದರೋಡೆಕೋರರನ್ನು ಹಿಡಿಯಿರಿ: ಪಟ್ಟಣದಲ್ಲಿ ಇತ್ತೀಚೆಗೆ ಕಳ್ಳತನ ಹೆಚ್ಚುತ್ತಿದೆ. ರಾತ್ರಿ ಬೀಟ್ ಮಾಡುತ್ತಿಲ್ಲ. ತರಕಾರಿ, ಹೂ, ತರಲು ಮಾರುಕಟ್ಟೆ ಬರುವ ಬೈಕ್ ಸವಾರರಿಗೆ ಸುಮ್ಮನೇ 500 ರೂ. ದಂಡ ವಿಧಿಸಲಾಗುತ್ತಿದೆ ಎಂದು ಅನೇಕ ದೂರು ಕೇಳಿ ಬರುತ್ತಿದೆ. ದಂಡ ವಿಧಿಸುವುದು ಬಿಡಿ. ಕಳ್ಳರು, ದರೋಡೆಕೋರರನ್ನು ಹಿಡಿದು ಸೂಕ್ತ ಕಾನೂನು ಕ್ರಮಜರುಗಿಸಿ ಎಂದು ಪಿಎಸ್‌ಐಗೆ ತಾಕೀತು ಮಾಡಿದರು.
ಹಕ್ಕುಪತ್ರಗಳ ವಿತರಣೆ: ಯಾರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆಯೋ, ಅಂತವರಿಗೆ ದಾಖಲೆ ನೀಡಲು ಸರ್ಕಾರ ಆದೇಶದ 94(ಸಿ) ಹಕ್ಕುಪತ್ರ ವಿತರಿಸಲಾಗಿದೆ. ತಾಲೂಕಿನಲ್ಲಿಅರ್ಹರಿಗೆ 80 ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕಸಬಾ ಹೋಬಳಿ 24, ಮಾಡಬಾಳ್ ಹೋಬಳಿ 16, ಕುದೂರು ಹೋಬಳಿ 36, ತಿಪ್ಪಸಂದ್ರ ಹೋಬಳಿ ನಾಲ್ಕು ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು. ನೂರಾರು ಸಾರ್ವಜನಿಕರು ಶಾಸಕರಿಗೆ ತಮ್ಮ ಅಹವಾಲು ಸಲ್ಲಿಸಿದರು. ಹೆಚ್ಚು ಜನ ಸೇರಿದೆ ಎಂದು ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ವಾರಕ್ಕೊಮ್ಮೆ ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮ ರೂಪಿಸಲಾಗಿದೆ. ಜನರು ಅಲ್ಲಿಯೇ ತಮ್ಮ ದೂರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್, ತಾಪಂ ಇಒ ಟಿ.ಪ್ರದೀಪ್,ಶಿರಸ್ತೇದಾರ್ ಜಗದೀಶ್, ಪಿಎಸ್‌ಐ ಶ್ರೀಕಾಂತ್, ವಲಯಆರಣ್ಯಾಧಿಕಾರಿ ಪುಷ್ಪ ಲತಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಬಿ.ಎನ್. ನಾಗರಾಜು, ಪುರಸಭಾಧ್ಯಕ್ಷೆಭಾಗ್ಯಮ್ಮ ನಾರಾಯಣಪ್ಪ, ಸದಸ್ಯ ರಾದ ಎಂ.ಎನ್. ಮಂಜುನಾಥ್, ಅನಿಲ್‌ಕುಮಾರ್, ಕೆ.ವಿ.ಬಾಲರಘು,ಕಾಂತರಾಜು, ನಾಗರತ್ನಮ್ಮ, ಹೇಮಲತಾ, ತಾಲೂಕು ಜೆಡಿಎಸ್ ಯುವಾಧ್ಯಕ್ಷ ವಿಜಯಕುಮಾರ್, ಉಮೇಶ್, ರಂಗಣ್ಣ, ನರಸಿಂಹಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.