ನಾವ್ಯಾರನ್ನೂ ಟಾರ್ಗೆಟ್ ಮಾಡಿಲ್ಲ: ಡಿಕೆ ಸುರೇಶ್
Team Udayavani, Jan 30, 2022, 2:17 PM IST
ರಾಮನಗರ: ನಾವ್ಯಾರನ್ನು ಟಾರ್ಗೆಟ್ ಮಾಡ್ತಿಲ್ಲ.ಯಾರ ಬಗ್ಗೆಯೂ ಮಾತನಾಡುತ್ತಿಲ್ಲ. ನಮಗೆ ಅದರ ಅವಶ್ಯಕತೆಯೂ ಇಲ್ಲ. ಪಕ್ಷದ ವಿಚಾರ ಬಂದಾಗ ಪಕ್ಷ ಸಂಘಟನೆ ನಮ್ಮ ಗುರಿ. ಜನಪ್ರತಿನಿಧಿಯಾಗಿ ಜಿಲ್ಲೆಯಅಭಿವೃದ್ಧಿ ಮಾಡುವ ಗುರಿ ಇದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ತಾಲೂಕಿನ ಬಸವನಪುರದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗಹೀಗೆ ಪ್ರತಿಕ್ರಿಯಿಸಿದರು. ರಾಮನಗರದಿಂದ ಓಡಿಸೋಕೆ ಪ್ರಯತ್ನ ಮಾಡ್ತಿದ್ದಾರೆ. ಇನ್ನು ಹತ್ತು ಜನ್ಮ ತಾಳಿ ಬಂದರು ರಾಮನಗರದಿಂದ ಓಡಿಸೋಕೆ ಆಗಲ್ಲ ಎಂದು ಎಚ್. ಡಿ.ಕುಮಾರಸ್ವಾಮಿ ಪ್ರತಿ ಸವಾಲು ಹಾಕಿರುವ ಬಗ್ಗೆಗಮನ ಸೆಳೆದಾಗ, ನಾನೇಕೆ ಅವರನ್ನು ಓಡಿಸಲಿ. ಇದೊಳ್ಳೆ ಚೆನ್ನಾಗಾಯ್ತಲ್ಲ. ನಾನೇನು ಅವರ ಬಗ್ಗೆ ಮಾತನಾಡುತ್ತಲೇ ಇಲ್ಲ. ಅವರು ದೊಡ್ಡವರು. ಯಾರನ್ನು ಟಾರ್ಗೆಟ್ ಮಾಡೋದಾಗಲಿ, ಯಾರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅವರು ದೊಡ್ಡವರು ಮಾತನಾಡಲಿ ಎಂದರು.
ಮೇಕೆದಾಟು ಪಾದಯಾತ್ರೆ ರಾಮನಗರದ ಮೂಲಕ ಹಾದು ಹೋಗುವ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ಟಾರ್ಗೆಟ್ ಮಾಡಲಾಗತ್ತಿದೆ ಎಂದು ದೂರಿರುವ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್,ಅವರ ಅನಿಸಿಕೆ ಹಾಗಿದ್ದರೆ ನಾನೇನು ಮಾಡಲಿಕ್ಕೆ ಆಗಲ್ಲ. ಅವರ ಅನಿಸಿಕೆಗಳನ್ನು ನಾನು ಬದಲಾವಣೆ ಮಾಡೋಕೆ ಆಗಲ್ಲ. ನಮ್ಮ ಗುರಿ ಮೇಕೆದಾಟು ಯೋಜನೆ ಆಗಬೇಕು. ಆ ಮೂಲಕ ರಾಮನಗರ ಜಿಲ್ಲೆ, ರಾಜ್ಯಕ್ಕೆ ಒಳ್ಳೆಯದಾಗಬೇಕು. ಬೇರೆಯವರ ಗುರಿ ನನಗೆ ಗೊತ್ತಿಲ್ಲ ಎಂದರು.
ಕೊರೊನಾ ನಿಯಮ ಬದಲಾವಣೆ ಬಳಿಕ ಪಾದಯಾತ್ರೆ: ಕೋವಿಡ್ ಕಡಿಮೆಯಾದ ನಂತರ ಮೇಕೆದಾಟು ಪಾದಯಾತ್ರೆ ಪುನಃ ಆರಂಭಿಸುವುದಾಗಿ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಕೋವಿಡ್ ಕಡಿಮೆಯಾಗ್ತಿದೆ ಅಂತ ಸರ್ಕಾರ ಹೇಳ್ತಿದೆ. ಜ.30ರವರೆಗೆ ಕೋವಿಡ್ ನಿಯಮಜಾರಿಯಲ್ಲಿದೆ. ತದ ನಂತರ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಕಾದು ನೋಡ್ತೀವಿ. ನಿಯಮಗಳುಬದಲಾದ ನಂತರ ಶೀಘ್ರದಲ್ಲೇ ಎಲ್ಲರು ಕುಳಿತು ಚರ್ಚಿಸಿ ಪಾದಯಾತ್ರೆ ಪ್ರಾರಂಭ ಮಾಡ್ತೀವಿ ಎಂದರು.
ಹೋಗೋರು, ಬರೋರು ಇರ್ತಾರೆ: ಮಂಡ್ಯ ಜಿಲ್ಲೆಯಲ್ಲಿ ಕೆಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರುವ ಬಗ್ಗೆ ಮಾತು ಕೇಳಿ ಬರುತ್ತಿದೆ. ಕೆಲವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎಂಬ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಯಾರು ಏನು ಅಂತಗೊತ್ತಿಲ್ಲ. ರಾಜಕೀಯ ಪಕ್ಷ ಅಂದ ಮೇಲೆ ಬರುವವರು, ಹೋಗುವವರು ಇರ್ತಾರೆ. ಪಕ್ಷದ ತತ್ವ ಸಿದ್ಧಾಂತ ನಂಬಿ,ನಾಯಕರ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ಇಟ್ಟು,ಷರತ್ತುಗಳಿಲ್ಲದೆ ಪಕ್ಷಕ್ಕೆ ಬರೋರಿಗೆ ಸ್ವಾಗತ ಎಂದರು.ವಲಸಿಗ ಸಚಿವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವಿಚಾರದಲ್ಲಿ ತಮಗೆ ಆ ಬಗ್ಗೆ ಮಾಹಿತಿ ಇಲ್ಲ. ಸ್ಥಾನಮಾನಗಳನ್ನು ಕೊಡುವ ವಿಚಾರ ಹೈಕಮಾಂಡಿಗೆ ಬಿಟ್ಟಿದ್ದು. ಸಿ.ಎಂ.ಇಬ್ರಾಹಿಂರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ವಿಚಾರದಲ್ಲಿ ಡಿಕೆಶಿ, ಸಿದ್ದು ಚರ್ಚಿಸಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.