Dog Temple: ಬೊಂಬೆನಗರಿಯಲ್ಲಿ ಶ್ವಾನ ದೇಗುಲದಲ್ಲಿ ವಿಶೇಷ ಪೂಜೆ

Team Udayavani, Aug 20, 2023, 4:38 PM IST

Dog Temple: ಬೊಂಬೆನಗರಿಯಲ್ಲಿ ಶ್ವಾನ ದೇಗುಲದಲ್ಲಿ ವಿಶೇಷ ಪೂಜೆ

ಚನ್ನಪಟ್ಟಣ: ದೇವರಿಗೆ ಗುಡಿ ಕಟ್ಟಿ ಪೂಜೆ ಮಾಡೋದು ಸರ್ವೆ ಸಾಮಾನ್ಯ. ಆದರೆ, ನಂಬಿಕಸ್ಥ ಶ್ವಾನಗಳಿಗೆ ಗುಡಿ ಕಟ್ಟಿಸಿ ಪೂಜೆ ಸಲ್ಲಿಸುವುದು ವಿಶೇಷದಲ್ಲಿ ವಿಶೇಷ.

ಹೌದು.. ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಅಗ್ರಹಾರ ವಳಗೆರೆಹಳ್ಳಿ ಅರ್ಥಾತ್‌ ಎ.ವಿ.ಹಳ್ಳಿ ಗ್ರಾಮ ದಲ್ಲಿ ದೇವರಿಗೂ ನಾಯಿಗಳಿಗೆ ವಿಶೇಷ ಮೊದಲ ಪೂಜೆ ಮಾಡಲಾಗುತ್ತದೆ. ರಾಜ್ಯದಲ್ಲೂ ಎಲ್ಲೂ ಇಲ್ಲದ ಶ್ವಾನ ದೇಗುಲ ಇಲ್ಲಿದೆ. ಹಾಗೆಯೇ ಈ ಗ್ರಾಮ ದಲ್ಲಿ ದೇವರ ಮೊರೆ ಹೋದರೆ ಇಷ್ಟಾರ್ಥ ಮೊದಲು ಈಡೇರುತ್ತೆ ಎಂಬ ನಂಬಿಕೆ ಕೂಡಯಿದೆ. ಅದರಂತೆ ವರ್ಷಕ್ಕೊಮ್ಮೆ ಈ ಗ್ರಾಮ ದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬರುವ ಭಕ್ತರು ಮೊದಲಿಗೆ ಶ್ವಾನಕ್ಕೆ ನಮಸ್ಕಾರ ಮಾಡಿದ ನಂತರವೇ ಗ್ರಾಮದ ಅಗ್ರದೇವತೆ ವೀರಮಾಸ್ತಿ ಕೆಂಪಮ್ಮ ದೇವರ ದರ್ಶನ ಪಡೆಯುತ್ತಾರೆ. ನಿಯತ್ತಿಗೆ ಮತ್ತೂಂದು ಹೆಸರೇ ಆಗಿರುವ ನಾಯಿ ಗಳಿಗೂ ಈ ಗ್ರಾಮದಲ್ಲಿ ವಿಶೇಷ ಪ್ರಾಧಾನ್ಯತೆ ಸಿಕ್ಕಿರು ವುದು ಮಾದರಿಯಾಗಿದೆ. ಆಗಸ್ಟ್‌ ಮಧ್ಯ ಮಾಸದಲ್ಲಿ ಆರಂಭವಾಗುವ ಮಕ್ಕೆ ಮಳೆ ಮಧ್ಯ ಪಾದದಲ್ಲಿ ಎ.ವಿ.ಹಳ್ಳಿ ಗ್ರಾಮ ದಲ್ಲಿ ಶ್ವಾನ ದೇವಸ್ಥಾನ ಹಾಗೂ ವೀರಮಾಸ್ತಿ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವ‌ ನಡೆಯುತ್ತದೆ. ಈ ಸಾವಿರಾರು ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಾರೆ.

ಹಿನ್ನೆಲೆ ಏನು?:  ಎ.ವಿ ಹಳ್ಳಿ ಗ್ರಾಮದಲ್ಲಿರುವ ಕೃತಜ್ಞತಾ ಮನೋಭಾವದ ನಾಯಿಗೊಸ್ಕರವೇ ಕಟ್ಟಿರುವ ವಿಶೇಷ ದೇವಸ್ಥಾನ. ನಾಯಿಗಳಿಗಾಗಿಯೇ ಇಲ್ಲಿಯ ಗ್ರಾಮ ಸ್ಥರು ಗುಡಿಯೊಂದನ್ನು ಕಟ್ಟಿಸಿ ಪ್ರತಿದಿನ ವಿಶೇಷ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಕುರಿಗಳ ರಕ್ಷಣೆಗೆ ಕುರುಬರು ನಾಯಿಗಳನ್ನ ಕರೆದು ಕೊಂಡು ಬರುತ್ತಿದ್ದರು. ಈಗಲೂ ಕೂಡ ಕೆಲ ಗ್ರಾಮೀಣ ಪ್ರದೇಶ ಗಳಲ್ಲಿ ಕಾಣಬಹುದಾಗಿದೆ. ಅದರಂತೆ ಈ ಗ್ರಾಮಕ್ಕೂ ಬಹಳ ವರ್ಷಗಳ ಹಿಂದೆ ಬರಲಾಯಿತು. ಹೀಗೆ ಮಂದೆ ಕುರಿ ಸಾಕಾಣಿಕೆ ವೇಳೆ ಈ ಗ್ರಾಮದಲ್ಲಿ ಬೀಡುಬಿಟ್ಟ ನಾಯಿ ಗಳೆಲ್ಲ ಆಶ್ಚರ್ಯಕರ ರೀತಿಯಲ್ಲಿ ಕಾಣೆಯಾಗು ತ್ತಿದ್ದವು. ನಾಯಿಗಳು ಕಾಣೆಯಾಗು ತ್ತಿರುವುದರ ರಹಸ್ಯ ಬೆನ್ನಟ್ಟಿದ ಇಲ್ಲಿಯ ಶಕ್ತಿ ದೇವತೆ ವೀರಮಾಸ್ತಿ ಕೆಂಪಮ್ಮ ದೇವರ ಮೊರೆ ಹೋದರು. ಈ ವೇಳೆ ದೇವರು ಹೇಳಿ ದಂತೆ ಕಾಡಿ ನಲ್ಲಿರುವ ನನ್ನ ದೇಗುಲಕ್ಕೆ ದ್ವಾರ ಪಾಲಕರ ಅವಶ್ಯಕತೆ ಇದೆ. ಆದ್ದರಿಂದ ನನ್ನ ದೇಗುಲದ ಸಮೀಪ ದಲ್ಲಿ ನಾಯಿ ಗಳಿಗಾಗಿ ಗುಡಿ ಕಟ್ಟಿಸುವಂತೆ ದೇವತೆ ಆಜ್ಞೆ ಮಾಡಿ ದ್ದಳಂತೆ. ಹೀಗಾಗಿ ನಾಯಿಗಳ ಶ್ವಾನ ವಿಗ್ರಹ ಮಾಡಿ ಅಲ್ಲಿಯೇ ಗುಡಿ ಕಟ್ಟಿಸಿ ನಿತ್ಯ ದೇವರು ಮುನ್ನ ಈ ಶ್ವಾನಗಳಿಗೆ ಪೂಜೆ ಸಲ್ಲಿಸಿದ ನಂತರವೇ ಇತರ ದೇವರಿಗೆ ಪೂಜೆ ಮಾಡಲಾಗುತ್ತಿದೆ.

ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬರುವ ಭಕ್ತರು ಮೊದಲಿಗೆ ಶ್ವಾನಕ್ಕೆ ನಮಸ್ಕಾರ ಮಾಡಿದ ನಂತರವೇ ವೀರಮಾಸ್ತಿ ಕೆಂಪಮ್ಮ ದೇವರ ದರ್ಶನ ಪಡೆಯುತ್ತಾರೆ. ನಮ್ಮೂರಿನಲ್ಲಿ ಶ್ವಾನ ದೇವರಂತೆಯೇ ಪರಿಗಣಿಸಿ ವಿಶೇಷ ಸ್ಥಾನ ನೀಡಿರುವುದು ನಂಬಿಕೆಗೆ ಮತ್ತೂಂದು ಹೆಸರು ಎಂದು ಕೆರಯಲ್ಪಡುವ ಶ್ವಾನಕ್ಕೆ ಕೊಟ್ಟ ಪ್ರಾಧಾನ್ಯತೆ ತೋರುತ್ತದೆ. -ಶಿವರಾಜು, ಎ.ವಿ.ಹಳ್ಳಿ ಡೇರಿ ಮುಖ್ಯ ಕಾರ್ಯವಾಹಕ 

ಆಗಸ್ಟ್‌ ಮಧ್ಯ ಮಾಸದಲ್ಲಿ ಆರಂಭವಾಗುವ ಮಕ್ಕೆ ಮಳೆಯ ಮಧ್ಯ ಪಾದದಲ್ಲಿ ಎ.ವಿ.ಹಳ್ಳಿ \ ಗ್ರಾಮದಲ್ಲಿ ಶ್ವಾನ ದೇವಸ್ಥಾನ ಹಾಗೂ ವೀರಮಾಸ್ತಿ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ರಾಜ್ಯದ ವಿವಿದ ಮೂಲೆಗಳಿಂದ ಆಗಮಿಸುತ್ತಾರೆ. -ಶ್ರೀನಿವಾಸ್‌, ಅರ್ಚಕರು, ಶ್ವಾನ ದೇವಸ್ಥಾನ, ಎ.ವಿ.ಹಳ್ಳಿ

ಟಾಪ್ ನ್ಯೂಸ್

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.