ಸಹಕಾರ ಸಂಘದಲ್ಲಿ ರಾಜಕೀಯ ಬೆರಸಬೇಡಿ: ಹರೀಶ್‌ಕುಮಾರ್
Team Udayavani, Feb 17, 2021, 1:05 PM IST
ಕನಕಪುರ: ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯ ತರದೆ ಗ್ರಾಮದ ಎಲ್ಲ ರೈತರು ಒಮ್ಮತದಿಂದ ಸಂಘ ರಚನೆಗೆ ಸಹಕರಿಸಬೇಕು ಎಂದು ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ತಿಳಿಸಿದರು. ತಾಲೂಕಿನ ಹಾರೋಹಳ್ಳಿ ಹೋಬಳಿ ಕರಿಕಲ್ಲುದೊಡ್ಡಿಯಲ್ಲಿ ನೂತನ ಹಾಲು ಉತ್ಪಾದಕ ಸಹಕಾರ ಸಂಘ ರಚನೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಹಕಾರ ಸಂಘಗಳಲ್ಲಿ ಪ್ರಸ್ತುತ ರಾಜಕೀಯ ಬೆರೆತು, ಸದಸ್ಯರಲ್ಲಿ ವೈಮನಸ್ಸು ಉಂಟಾಗಿ ಸಂಘದ ವಾತಾವರಣಹದಗೆಡುತ್ತಿದೆ. ಇದರಿಂದ ಸಂಘದ ಅಭಿವೃದ್ಧಿಗೆಹಿನ್ನಡೆಯಾಗುತ್ತದೆ. ಸಂಘದಲ್ಲಿ ರಾಜಕೀಯ ಬೆರೆಸದೆಒಮ್ಮತದಿಂದ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಸಂಘದ ನೋಂದಣಿಗೆ ಗ್ರಾಮದ 13 ಸದಸ್ಯರನ್ನುಗ್ರಾಮಸ್ಥರೇ ಆಯ್ಕೆ ಮಾಡಬೇಕು. ಸಂಘ ರಚನೆ ಬಳಿಕಒಮ್ಮತದಿಂದ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವಅವಕಾಶವಿದೆ. ಗ್ರಾಮಸ್ಥರಲ್ಲಿ ಹೊಂದಾಣಿಕೆ ಕೊರತೆ ಇದ್ದರೆ, ಚುನಾವಣೆ ಮೂಲಕ ನಿರ್ದೇಶಕರನ್ನು ಅಧಿಕಾರಿಗಳು ಆಯ್ಕೆ ಮಾಡಲಿದ್ದಾರೆ ಎಂದರು.
ಪ್ರತಿ ಗ್ರಾಮದಲ್ಲೂ ಸಂಘ ರಚನೆ: ಗ್ರಾಮೀಣ ಭಾಗಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಹೈನೋದ್ಯಮದಲ್ಲಿತೊಡಗಿದ್ದಾರೆ. ಸಂಘಗಳಿಗೆ ಹಾಲು ಪೂರೈಸಲು ಒಂದುಗ್ರಾಮದಿಂದ ಮತ್ತೂಂದು ಗ್ರಾಮಕ್ಕೆ ಹೋಗಬೇಕಾದಅನಿವಾರ್ಯತೆಯಿದೆ. ಹೀಗಾಗಿ ಪ್ರತಿ ಗ್ರಾಮದಲ್ಲಿಹಾಲು ಉತ್ಪಾದಕರ ಸಹಕಾರ ಸಂಘ ರಚಿಸಿಮಹಿಳೆಯರಿಗೆ ಮತ್ತು ನಿರುದ್ಯೋಗಿಗಳಿಗೆ ಹೆಚ್ಚಿನಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
13 ಪ್ರವರ್ತಕರ ಆಯ್ಕೆ: ಸಂಘದ ನೋಂದಣಾ ಚಟು ವಟಿಕೆಗಳಿಗೆ ಗ್ರಾಮದ ಸತೀಶ್‌ರಾವ್, ಮುತ್ತುರಾಜ್, ರವಿ, ಸತೀಶ್, ಜಗದೀಶ್, ಶಿವಮ್ಮ, ಗೌರಮ್ಮ, ಶ್ರೀನಿವಾಸ್, ಸುಬ್ಬಣ್ಣ, ಗಣೇಶ್, ವೈರಮುಡಿ, ರಾಮಕೃಷ್ಣ, ಬಾಳೆ ಗೌಡ ಸೇರಿದಂತೆ 13 ಪ್ರವರ್ತಕರನ್ನು ಆಯ್ಕೆ ಮಾಡಲಾಯಿತು. ಜಿಪಂ ಸದಸ್ಯ ಎಂ.ಎನ್ ನಾಗ ರಾಜು, ಸಾದೇನಹಳ್ಳಿ ಈಶ್ವರ್, ಒಕ್ಕೂಟದ ಡಿ.ಎಂ.ಪ್ರಕಾಶ್, ವಿಸ್ತರಣಾಧಿಕಾರಿಗಳಾದ ಪವ್ರಿàಣ್,ಅಲ್ಲಾ ಸಾಬ್, ಮರಳವಾಡಿ ಗ್ರಾಪಂ ಅಧ್ಯಕ್ಷ ಚಲುವರಾಜು, ಕಲ್ಲನಕುಪ್ಪೆ ಹಾಲು ಉತ್ಪಾದಕ ಸಂಘದ ಅಧ್ಯಕ್ಷಚಂದ್ರು, ಗ್ರಾಪಂ ಸದಸ್ಯ ಶಿವಶಂಕರ್, ಯಲಚವಾಡಿಚಂದ್ರು, ಕಲ್ಲನಕುಪ್ಪೆ ಕುಮಾರ್, ದೇವರಾಜು, ಕಾರ್ಯದರ್ಶಿ ಚಂದ್ರು, ನಿಂಗೇಗೌಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ
By Election: ಸಿ.ಪಿ.ಯೋಗೇಶ್ವರ್ ಬಾಯಿ ಮಾತಿನ ಭಗೀರಥ: ಎಚ್.ಡಿ.ದೇವೇಗೌಡ ವಾಗ್ದಾಳಿ
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.