ಬೆಳೆಗೆ ಔಷಧ ಸಿಂಪಡಿಸಲು ಡ್ರೋನ್‌

1 ಎಕರೆಗೆ ಔಷಧಿ ಸಿಂಪಡಣೆಗೆ 15 ನಿಮಿಷ: 8ಲಕ್ಷ ಮೌಲ್ಯದ ಡ್ರೋನ್‌ ಖರೀದಿ ಕಷ್ಟಸಾಧ್ಯ

Team Udayavani, Sep 17, 2021, 4:41 PM IST

ಬೆಳೆಗೆ ಔಷಧ ಸಿಂಪಡಿಸಲು ಡ್ರೋನ್‌

ಕುದೂರು: ಚಿತ್ರೀರಕಣಕ್ಕಾಗಿ ಡ್ರೋನ್‌ಗಳನ್ನು ಬಳಸುವುದು ನಮ್ಮಗೆಲ್ಲ ತಿಳಿದಿರುವ ವಿಚಾರ. ಈಗ ಅವುಗಳನ್ನು ಕೃಷಿ ಚಟುವಟಿಕೆಗಳಿಗೂ ಬಳಸಬಹುದು ಎನ್ನುತ್ತಿದೆ ನಬಾರ್ಡ್‌. ಹೌದು ಔಷಧ ಸಿಂಪಡಿಸುವ ಡ್ರೋನ್‌ ಕೃಷಿಯಲ್ಲಿ ರೈತರ ಗಮನ ಸೆಳೆಯುತ್ತಿದೆ.

ಕೃಷಿ ಕಾರ್ಮಿಕರ ಕೊರತೆಯಿರುವುದರಿಂದ ಬಹುಪಯೋಗಿ ಯಂತ್ರಗಳ ಬಗ್ಗೆ ರೈತರು ಅಲೋಚಿಸುತ್ತಿದ್ದಾರೆ. ಅದರಕ್ಕೆ ಪೂರಕವಾಗಿರುವ ಈ
ಡ್ರೋಣ್‌ ಕೇವಲ 15 ನಿಮಿಷದಲ್ಲಿ ಒಂದು ಎಕ್ಕರೆಗೆ ಔಷಧಿ ಸಿಂಪಡಿಸಲಿದೆ.

ಕೋವಿಡ್‌ ಲಗ್ಗೆಯ ಬಳಿಕ ಸಮಸ್ತವೂ ವರ್ಚುಯಲ್‌ ಜಗತ್ತಿನತ್ತ ಹೊರಳುತ್ತಿದೆ. ಶಾಲೆ ಮಾತ್ರವಲ್ಲ ರೈತರ ಕೃಷಿಯೂ ತಂತ್ರಜ್ಞಾನದ
ನೆರವಿಂದ ರೈತ ಸ್ನೇಹಿಯಾಗುವತ್ತ ಹೆಜ್ಜೆಹಾಕಿದೆ. ಇದಕ್ಕೆ ಸಾಕ್ಷಿಯಾಗಿ ಸಿಲ್ಕ್ ಜಿಲ್ಲೆಯ ಮಾಗಡಿ ತಾಲೂಕಿನ ದೊಡ್ಡಸೋಮನಹಳ್ಳಿ ಕೃಷಿ ಚಟುವಟಿಕೆಗಳಿಗೆ ಈಗ ಕೂಲಿ ಕೆಲಸಗಾರರ ಅವಲಂಬನೆ ಕಡಿಮೆ ಮಾಡಲು ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಬಳಸುವ ಸಲುವಾಗಿ ರೇಷ್ಮೆ ನಗರಿ ಜಿಲ್ಲೆಯಲ್ಲಿಯೂ ನಬಾರ್ಡ್‌ ಸಹಯೋಗದಿಂದ ರೈತರು ನೂತನ ಇಸ್ರೇಲ್‌ ಮಾದರಿ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿ ಎಂಬಂತೆ ಮಾಗಡಿಯ ದೊಡ್ಡಸೋಮನಹಳ್ಳಿಯಲ್ಲಿ ರೈತರು ಡ್ರೋನ್‌ ಬಳಸಿ ರಾಗಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವ ಮೂಲಕ
ಗಮನ ಸೆಳೆದಿದ್ದಾರೆ.

ದೊಡ್ಡ ದೊಡ್ಡ ಸಭೆಗಳಲ್ಲಿ ದೃಶ್ಯ ಚಿತ್ರೀಕರಿಸಲು ಹಾಗೂ ಭದ್ರತೆಗೆ ಬಳಸುವ ಸಾಧನವಾಗಿದ್ದ ಈ ಡ್ರೋನ್‌ ಈಗ ರೈತರ ಹೊಲ ಗದ್ದೆಗಳ ಮೇಲೆ
ಹಾರಾಡುತ್ತಾ ರಾಸಾಯನಿಕ ಸಿಂಪಡಿಸುತ್ತಿದೆ. ಎಕರೆಗೆ 350 ರೂ.ವೆಚ್ಚ : ಎಕರೆಗೆ 350 ರೂ.ಹಣ ನೀಡಿ ಪ್ರಾಯೋಗಿಕವಾಗಿ ಡ್ರೋನ್‌ ಮೂಲಕ
ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಎಕರೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಹೆಚ್ಚು ಸಮಯ ಬೇಕು. ಆದರೆ, ಡ್ರೋನ್‌ ಮೂಲಕ ಕೆಲವೇ ನಿಮಿಷಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬಹುದು. ಇದರಿಂದ ಹಣ ಹಾಗೂ ಸಮಯದ ಉಳಿತಾಯವಾಗುತ್ತಿದೆ ಎನ್ನುತ್ತಾರೆ ಕೆಲ ರೈತರು.

ಇದನ್ನೂ ಓದಿ:ರೇಗಿಸಿದವನ ವಿರುದ್ಧ ರೊಚ್ಚಿಗೆದ್ದ ಮಂಗ!: ಹುಡುಕಿ-ಹುಡುಕಿ ಕಚ್ಚಿ ಗಾಯ ಮಾಡಿದ ಕೋತಿ

ಜಿಪಿಎಸ್‌ ಇದೆ. ಸೈಡ್ ಎಫೆಕ್ಟ್ ಇಲ್ಲ : ಈ ಡ್ರೋನ್‌ ಸಾಧನಕ್ಕೆ ಜಿಪಿಎಸ್‌ ಅಳವಡಿಸಲಾಗಿದೆ. ಹೊಲದ ಬದುವಿನಲ್ಲೇ ಕುಳಿತು ರಿಮೋಟ್‌ ಕಂಟ್ರೋಲ್‌ನಿಂದ ಇಡೀ ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಬಹುದಾಗಿದೆ. ಇದರಿಂದ ಕೂಲಿಯಾಳು ಸಮಸ್ಯೆಯಿಲ್ಲ, ಕ್ರಿಮಿನಾಶಕದ ಸೈಡ್ ಎಫೆಕ್ಟ್ ಸಹ ಇಲ್ಲ.

ಲೆಕ್ಕಾಕೊಡುತ್ತೆ ಈ ಡ್ರೋನ್‌: ಸುಮಾರು 8 ಲಕ್ಷ ರೂ. ಮೌಲ್ಯದ ಡ್ರೋನ್‌ ಗೆ 11 ಲೀಟರ್‌ ಸಾಮರ್ಥ್ಯದ ಕ್ಯಾನ್‌ ಅಳವಡಿಸಲಾಗಿದೆ. ಇದರ ಜತೆಗೆ ಜಿಪಿಎಸ್‌ ಸಹ ಅಳವಡಿಸಲಾಗಿದ್ದು, ಎಷ್ಟು ಎಕರೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ ಎಂಬುದರ ನಿಖರ ಲೆಕ್ಕ
ತಿಳಿಯಬಹುದಾಗಿದೆ.

ತೋಟಗಾರಿಕೆ ಬೆಳೆಗಳಿಗೂ ಸೈ: ಭತ್ತ, ಕಡಲೆ, ತೊಗರಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ನಿಂಬೆ, ಮಾವು, ಸಪೋಟ ಸೇರಿದಂತೆ ಎತ್ತರದ ಮರಗಳಿಗೂ ಸುಲಭವಾಗಿ ಕ್ರಿಮಿನಾಶಕ ಸಿಂಪಡಿಸಬಹುದು. ಡ್ರೋನ್‌ಗೆ 5ಲೀಟರ್‌ ಟ್ಯಾಂಕ್‌ ಅಳವಡಿಸಲಾಗಿದ್ದು ಕ್ರಿಮಿನಾಶಕ ಮಿಶ್ರಣ ಬೆರಿಸಿ ಜಿಪಿಎಸ್‌ ಮೂಲಕ ಕೆಲಸ ನಿಗದಿ ಮಾಡಿದ್ರೆ ಸಾಕು ಕೆಲಸ ಮುಗಿದಂತೆ.

ಗಂಗಾವತಿ ಮೊದಲು: ರಾಜ್ಯದಲ್ಲಿ ಮೊದಲು ಭತ್ತದ ಕಣಜ ಖ್ಯಾತಿಯ ಗಂಗಾವತಿ ಭತ್ತದ ಗದ್ದೆಗಳ ಮೇಲೆ ಡ್ರೋನ್‌ ಹಾರಾಟ ನಡೆಸಿ ಬೆಂಕಿ ರೋಗಕ್ಕೆ ರಾಸಾಯನಿಕ ಸಿಂಪಡಿಸುವಲ್ಲಿ ಯಶಸ್ವಿಯಾಗಿತ್ತು. ತಮಿಳುನಾಡಿನಿಂದ ವಿಜ್ಞಾನಿಗಳು ಡ್ರೋನ್‌ ತರಿಸಿಕೊಂಡಿದ್ದರು. ಇದಾದ ಬಳಿಕ ಹಂತ-ಹಂತವಾಗಿ ಡ್ರೋನ್‌ ಬಗ್ಗೆ ಕೃಷಿ ಕ್ಷೇತ್ರದ ಇತರೆ ಜಿಲ್ಲೆಗಳಿಗೂ ರೈತರಿಗೂ ಹತ್ತಿರವಾಗುತ್ತಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಿ ಅನೇಕ ದೇಶಗಳು ಹೆಚ್ಚು ಇಳುವರಿ ಪಡೆಯುತ್ತಿವೆ. ಹೀಗಾಗಿ ಇಸ್ರೇಲ್‌ ಕೃಷಿಯ ತಂತ್ರ ಜ್ಞಾನ ಮಾಗಡಿ ತಾಲೂಕಿಗೂ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ.
– ಅಂಥೋನಿ ಸ್ವಾಮಿ, ಕ್ರಯಾಜಿನ್‌
ನೋಟಿಕ್‌ ಕಂಪನಿ ಅಧಿಕಾರಿ.

ನಮ್ಮ ಕಾಳಾರಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ತಂತ್ರಜ್ಞಾನ ಆಧಾರಿತ ಕೃಷಿ ಮಾಡುವ ನಿಟ್ಟಿನಲ್ಲಿ ಐದಾರು ಎಕರೆ ಜಾಗ ಮೀಸಲಿಟ್ಟು ಪ್ರಾಯೋಗಿಕವಾಗಿ ತಂತ್ರಜ್ಞಾನ ಆಧಾರಿತ ಬೇಸಾಯ ಮಾಡಲು ಮುಂದಾಗಿದ್ದೇವೆ ಹಾಗೂ ಕಂಪನಿಗಳು ಹಾಗೂ ವಿಜ್ಞಾನಿಗಳು ನಮ್ಮ ಸಹಾಯಕ್ಕೆ ನಿಂತಿದ್ದಾರೆ.
– ಸುರೇಶ್‌, ಗ್ರಾಪಂ ಅಧ್ಯಕ್ಷ

– ಕೆ.ಎಸ್‌.ಮಂಜುನಾಥ್‌ ಕುದೂರು

ಟಾಪ್ ನ್ಯೂಸ್

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK-by-Poll

By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್‌.ಡಿ.ಕುಮಾರಸ್ವಾಮಿ

DK-Shivakuamar

By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ

HDK-election

By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

Nikhil—Somanna

By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ

CPY-1

By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.