ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮಕ್ಕಳಿಗೆ ಉನತ್ನ ಶಿಕ್ಷಣ
ಸಂಪೂರ್ಣ ಸಮೂಹ ವಿದ್ಯಾ ಸಂಸ್ಥೆಯ ಮಾನವೀಯತೆ
Team Udayavani, Aug 9, 2021, 1:55 PM IST
ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮಕ್ಕಳಿಗೆ ಎಂಜಿನಿಯರಿಂಗ್ ಪದವಿ ಶಿಕ್ಷಣವನ್ನು ಉಚಿತವಾಗಿ ನೀಡುವುದಾಗಿ ಚನ್ನಪಟ್ಟಣ ಬಳಿಯ ಸಂಪೂರ್ಣ ಸಮೂಹ ವಿದ್ಯಾ ಸಂಸ್ಥೆಗಳ ತಾಂತ್ರಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಭೈರೇಗೌಡ ತಿಳಿಸಿದರು.
ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೋಷಕರನ್ನು ಕಳೆದುಕೊಂಡ ಬಡ ಕುಟುಂಬಗಳ 25 ಮಂದಿ ಮಕ್ಕಳಿಗೆ ನಾಲ್ಕೂ ವರ್ಷಗಳ ಕಾಲ ಉಚಿತ ಶಿಕ್ಷಣ ನೀಡಲು ತಮ್ಮ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಬಿ. ಎಂ.ಎಸ್ ನಾಯ್ಡು ಮತ್ತು ಅವರ ಪತ್ನಿ ಡಾ.ಸಂಪೂರ್ಣ ನಾಯ್ಡು ತೀರ್ಮಾನಿಸಿದ್ದಾರೆ.
ಜಿಲ್ಲೆಯ 25 ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಈ ಯೋಜನೆಗೆ ಕಾಲೇಜಿನ ಆಡಳಿತ ಮಂಡಳಿ ಸುಮಾರು1 ಕೋಟಿ ರೂ. ಮೌಲ್ಯದ ಉಚಿತ ಶಿಕ್ಷಣ ನೀಡಿದಂತಾಗುತ್ತದೆ ಎಂದರು.
ಹಾಸ್ಟೆಲ್ ವ್ಯವಸ್ಥೆಗೆ ಶುಲ್ಕ: ಎಂಜಿನಿಯರಿಂಗ್ ಪದವಿ ಉಚಿತವಾದರೂ ಮಕ್ಕಳು ಕೇವಲ ಡಾ.ವಿ ಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗದಿಪಡಿಸುವ ಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ಭರಿಸಿದರೆ ಸಾಕು. ಕಾಲೇಜಿನ ಹಾಸ್ಟೆಲ್ ವ್ಯವಸ್ಥೆಗೆ ವಿದ್ಯಾರ್ಥಿಗಳು ಶುಲ್ಕ ಭರಿಸಬೇಕಾಗುತ್ತದೆ. ಹಾಗೊಮ್ಮೆ ಹಾಸ್ಟೆಲ್ ಶುಲ್ಕ ಕಟ್ಟಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್ ಮುಂತಾದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ದಾಖಲಾತಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಚನ್ನಪಟ್ಟಣದ ಬಳಿ ಸಂಪೂರ್ಣ ಸಮೂಹ ಶಿಕ್ಷಣ ಸಂಸ್ಥೆ ಇದೆ. ಕಾಲೇಜಿನಗೆ ಸೇರಿದ ಒಟ್ಟು ಭೂಮಿ ಸುಮಾರು 100 ಎಕರೆ ಪ್ರದೇಶದ ವಿಸ್ತೀರ್ಣವಿದೆ ಎಂದು ಶೈಕ್ಷಣಿಕವಾಗಿ ತಮ್ಮ ಕಾಲೇಜಿನ ಸಾಧನೆ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯ ಪ್ರಥಮ ಖಾಸಗಿ ಕೃಷಿ ಕಾಲೇಜು: ಸಂಪೂರ್ಣ ಸಮೂಹ ಸಂಸ್ಥೆಯ ಕೃಷಿ ಪದವಿ ವಿಭಾಗದ ಪ್ರಾಂಶುಪಾಲ ಡಾ. ಶಿವಲಿಂಗೇಗೌಡ
ಮಾತನಾಡಿ, ಕಾಲೇಜಿನಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಮತ್ತು ಹಾರಿrಕಲ್ಚರ್ ತರಗತಿ ಆರಂಭಿಸಲಾಗಿದೆ. ಕೃಷಿ ಕಾಲೇಜು ಮೈಸೂರು ವಿವಿ ವ್ಯಾಪ್ತಿಗೆ ಒಳಪಡಲಿದೆ. ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ವಿಷಯ ಬೋಧಿಸುವ ಪ್ರಥಮ ಖಾಸಗಿ ಕಾಲೇಜು ತಮ್ಮದಾಗಿದೆ.ಕೊಠಡಿಯೊಳಗಿನ ಶಿಕ್ಷಣದ ಜೊತೆಗೆ ಫೀಲ್ಡ್ ಪ್ರಾಕ್ಟಿಕಲ್‌ಗೆ ಒತ್ತು ನೀಡಲಾಗುವುದು. 4ರಿಂದ 6 ತಿಂಗಳ ಕಾಲ ಬಿಎಸ್ಸಿ ಕೃಷಿ ಪದವಿಗೆ ಸೇರುವ ವಿದ್ಯಾ
ರ್ಥಿಗಳು ರೈತರೊಂದಿಗೆ ಇದ್ದು, ಕೃಷಿ ಚಟುವಟಿಕೆಗಳ ಅನುಭವಪಡೆಯಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕ (ಅಡ್ಮಿನ್) ಉಮೇಶ್, ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸತೀಶ್ ಇದ್ದರು
ಬಿಎಸ್ಸಿಕೃಷಿ ಮತ್ತು ತೋಟಗಾರಿಕೆ ಪದವಿ ಶಿಕ್ಷಣದಲ್ಲಿ ಅಧುನಿಕ ತಂತ್ರಜ್ಞಾನದ ಪರಿಣಿತಿ ನೀಡಲಾಗುವುದು. ಸದ್ಯದಲ್ಲೇ ಕೃಷಿ ಕ್ಷೇತ್ರದಲ್ಲಿ ರೋಬೋಟಿಕ್ಸ್ ವಿಷಯವನ್ನು ಕಾಲೇಜಿನಲ್ಲಿ ಪರಿಚಯಿಸಲಾಗುವುದು.
– ಡಾ.ಶಿವಲಿಂಗೇಗೌಡ,
ಪ್ರಾಂಶುಪಾಲರು, ಕೃಷಿ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.