ಸುರಕ್ಷತೆಯ ಪಾಠ ಮಾಡಿದ ಶಿಕ್ಷಣ ಸಚಿವರು


Team Udayavani, Jan 3, 2021, 1:33 PM IST

ಸುರಕ್ಷತೆಯ ಪಾಠ ಮಾಡಿದ ಶಿಕ್ಷಣ ಸಚಿವರು

ರಾಮನಗರ: ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಕೋವಿಡ್‌ ಮುಂಜಾಗ್ರತೆ ಪಾಠ ಮಾಡಿದರು.

ಕೋವಿಡ್‌ ಸೋಂಕಿನ ಬಗ್ಗೆ ಆತಂಕ ಬೇಡ, ಬ್ರಿಟನ್‌ ಕೋವಿಡ್ ಬಗ್ಗೆ ಹೆದರಿಕೆ ಬೇಡ. ಆದರೆ ಜಾಗ್ರತೆ ಇರಲಿ. ಸದಾ ಮಾಸ್ಕ್ ಹಾಕಿರಿ, ದೈಹಿಕ ಅಂತರ ಕಾಪಾಡಿಕೊಳ್ಳಿ, ಪದೇ ಪದೇ ಕೈ ತೊಳೆಯಿರಿ. ಕಣ್ಣು, ಮೂಗು, ಬಾಯಿಗೆ ಕೈ ಹಾಕಿಕೊಳ್ಳಬೇಡಿ. ಶಾಲೆಗೆ ಬರುವಾಗ ತಿಂಡಿ ತಿಂದುಬನ್ನಿ, ಮನೆಯಿಂದಲೇ ಸ್ವತ್ಛವಾದ ಕುಡಿಯುವನೀರು ತನ್ನಿ, ಪಾನಿಪೂರಿ ತಿನ್ನುವ ಆಸೆಇನ್ನೊಂದಷ್ಟು ದಿನ ಬೇಡ. ಮನೆಯಲ್ಲೇಮಾಡಿಕೊಂಡು ತಿನ್ನಿ. ಯಾವ ಕಾರಣಕ್ಕೂ ಕಲಿಕೆ ನಿಲ್ಲಿಸಬೇಡಿ ಎಂದು ಪಾಠ ಮಾಡಿದರು.

ಪರೀಕ್ಷೆ ಬರದೇ ಪಾಸಾಗ್ತೀವಿ: ಮಾರ್ಚ್‌ನಲ್ಲಿ ಪರೀಕ್ಷೆಗೆ ಸಿದ್ಧವೇಎಂದು ಸಚಿವರು ಕೇಳಿದ ಪ್ರಶ್ನೆಗೆವಿದ್ಯಾರ್ಥಿಗಳಿಂದ ಬೇಡ ಎಂಬ ಒಕ್ಕೊರಲಿನ ಉತ್ತರ ಬಂತು.ಜೂನ್‌ನಲ್ಲಿ ಪರೀಕ್ಷೆ ಇಡಿ ಸಿದ್ಧವಾಗ್ತಿàವಿ ಎಂದರು. ಪರೀಕ್ಷೆಯೇ ಇಲ್ಲದೆ ಪಾಸು ಮಾಡೋಣವೇ ಎಂದು ಸಚಿವರು ಕೇಳಿದ ಪ್ರಶ್ನೆಗೆ, ಪರೀಕ್ಷೆ ಬೇಕು ಎಂಬ ಉತ್ತರ ಕೇಳಿ ಬಂತು. ಪರೀಕ್ಷೆ ಏಕೆ ಬೇಕು ಎಂಬಸಚಿವರ ಮಗದೊಂದು ಪ್ರಶ್ನೆಗೆ ವಿದ್ಯಾರ್ಥಿನಿಯರುನಾವು ಪಾಠ ಕಲಿತಿದ್ದೇವೆ ಅನ್ನೋದು ಓರೆಗೆ ಹಚ್ಚೋದೆ ಪರೀಕ್ಷೆಗಳು ಎಂಬ ಉತ್ತರದಿಂದ ಸಚಿವರು ಸಂತಸಗೊಂಡರು. ಹೊರೆಯಾಗದಂತೆ ಪರೀಕ್ಷೆ ಇರಲಿದೆ ಎಂಬ ಭರವಸೆ ನೀಡಿದರು.

ಪತ್ರಿಕೆ ಓದುವ ಹವ್ಯಾಸ ಬೆಳಸಿಕೊಳ್ಳಿ: ವಿದ್ಯಾರ್ಥಿನಿಯಬ್ಬಳ ಬಳಿ ಇದ್ದ ದಿನ ಪತ್ರಿಕೆ ಗಮನಿಸಿದ ಸಚಿವರು. ಎಷ್ಟು ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆ ಓದುತ್ತೀರಾ ಎಂಬ ಪ್ರಶ್ನೆಗೆ ಬೆರಳೆಣಿಕೆ ಮಂದಿ ಮಾತ್ರ ಕೈ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಪತ್ರಿಕೆ ಓದುವ ಹವ್ಯಾಸವಿರಲಿ ಎಂದು ತಾಕೀತು ಮಾಡಿದರು.

ಶಾಲೆ ಉದ್ಘಾಟನೆಗೆ ನಾನೇ ಬರ್ತೀನಿ: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ನಿರ್ಮಿಸಿರುವ ನೂತನ ಜಿ.ಕೆ.ಬಿ.ಎಂ.ಎಸ್‌ ಕಟ್ಟಡದ ಉದ್ಘಾಟನೆಗೆ ಖುದ್ದು ತಾವೇ ಬರುವುದಾಗಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್‌ರಿಗೆ ತಿಳಿಸಿದರು. ಮೇಡಂ (ಶಾಸಕಿ ಅನಿತಾ ಕುಮಾರಸ್ವಾಮಿ)ಅವರ ಬಳಿ ಮಾತನಾಡಿ ದಿನಾಂಕ ಫಿಕ್ಸ್‌ ಮಾಡಿ ತಿಳಿಸಿ ನಾನೇ ಬರ್ತೀನಿ ಅಂದರು.

ಸಚಿವರ ರೌಂಡ್ಸ್‌: ಶನಿವಾರ ಸುರೇಶ್‌ ಕುಮಾರ್‌ ರಾಮನಗರ ಹಾಗೂ ಮಾಗಡಿ ತಾಲೂಕಿನ ಆಯ್ದ ಶಾಲೆಗಳಿಗೆ ಭೇಟಿ ನೀಡಿದರು. ಬಿಡದಿಯ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಮತ್ತು ಬಸವೇಶ್ವರ ಶಾಲೆ, ರಾಮನಗರ ನಗರದ ಬಾಲಕಿಯರಸರ್ಕಾರಿ ಪ್ರೌಢ ಶಾಲೆ, ಶಾಂತಿನಿಕೇತನ ಶಾಲೆ, ಮಾಗಡಿ ತಾಲೂಕಿನ ವಿ.ಜಿ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಚೇನಹಟ್ಟಿಯ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದ್ದರು.

ಟಾಪ್ ನ್ಯೂಸ್

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Kiccha Sudeep’s max movie releasing on Dec 25th

Kiccha Sudeepa: ಕ್ರಿಸ್ಮಸ್‌ ಗೆ ಬರುತ್ತಿದೆ ʼಮ್ಯಾಕ್ಸ್‌ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.