ಸಮಾಜದ ಬದಲಾವಣೆಗೆ ಶಿಕ್ಷಣ ನೀತಿ ಸಹಕಾರಿ
Team Udayavani, Sep 29, 2021, 3:42 PM IST
ಮಾಗಡಿ: ರಾಜ್ಯದಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಗೊಂಡಿದ್ದು,, ಇದು ಪ್ರತಿಯೊಂದು ಹಂತದಲ್ಲೂ ಸಮಾಜವನ್ನು ಜ್ಞಾನದ ಮೂಲಕ ಬದಲಾವಣೆ ಮಾಡುತ್ತಾ ಹೋಗುತ್ತದೆ. ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರ ಅಗತ್ಯ ಸಂಪನ್ಮೂಲವನ್ನು ಒದಗಿಸಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಅಪ್ಪಾಜಿಗೌಡ ತಿಳಿಸಿದರು.
ಬದಲಾವಣೆ ಹೊಂದಿಕೊಳ್ಳಬೇಕು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಒಂದುದಿನದ ರಾಜ್ಯ ಮಟ್ಟದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬದಲಾವಣೆ ಜಗದ ನಿಯಮ, ಕಾಲಚಕ್ರದಲ್ಲಿ ಆಗುವನಿರಂತರ ಪಲ್ಲಟಗಳಿಗೆ ಮನುಷ್ಯ ಹೊಂದಿಕೊಳ್ಳಬೇಕು.ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಾಲಕಾಲಕ್ಕೆ ಬದಲಾವಣೆಗಳಾಗುವುದು ಅಗತ್ಯವಿದೆ. ಬಹುತ್ವ ಭಾರತದ ತಳ ಪಾಯಕ್ಕೆ ಸರ್ವರಿಗೂ ಸಮಾನ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಭಾಷೆಗೆ ಧಕ್ಕೆ ಇಲ್ಲ: ಸಂಪನ್ಯೂಲ ವ್ಯಕ್ತಿ ಡಾ.ಚೇತನ್ ಸಿಂಗಾ ಮಾತನಾಡಿ, ರಾಷ್ಟ್ರಿಯ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಯಾವ ಧಕ್ಕೆಯೂ ಆಗದ ರೀತಿಯಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಅಧ್ಯಾಪಕರನ್ನು ಸಜ್ಜುಗೊಳಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಪಠ್ಯ ಪರಿಷ್ಕರಣೆ, ಬಿಎಡ್, ಡಿಎಡ್ ಪಠ್ಯ ಪರಿಣಾಮಕಾರಿಯಾಗಿ ಪರಿಷ್ಕರಿಸಿ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಸಾಧಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದರು.
ಎಲ್ಲರ ಸಹಕಾರ ಅಗತ್ಯ: ಪ್ರಾಂಶುಪಾಲರಾದ ಎಸ್. ಶೈಲಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾಲೇಜಿನಲ್ಲಿ ಅನುಷ್ಠಾನಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಶಿಕ್ಷಣದಲ್ಲಿ ದೇಶ ಅಗ್ರ ಶ್ರೇಣಿ: ಸಂಪನ್ಮೂಲ ವ್ಯಕ್ತಿ ಪದ್ಮಾವತಿ ಮಾತನಾಡಿ, ಪೂರಕವಾಗಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲೂ ಏಕೀಕೃತ ವಿವಿ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕವೇ ವಿದ್ಯಾರ್ಥಿ ಗಳ ದಾಖಲು ವ್ಯವಸ್ಥೆಯಿದೆ. 2040ರ ವೇಳೆಗೆ ಭಾರತವಿಶ್ವದ ಮೊದಲ ಶ್ರೇಣಿಯ ಶಿಕ್ಷಣ ವ್ಯವಸ್ಥೆ ಹೊಂದಲುರಾಷ್ಟ್ರೀಯ ಶಿಕ್ಷಣ ನೀತಿ ಅಗತ್ಯವಾಗಿದೆ ಎಂದರು.
ಶಿಕ್ಷಣದ ಪ್ರಗತಿಗೆ ಶ್ರಮಿಸಿ: ಸಂಪನ್ಮೂಲ ವ್ಯಕ್ತಿ ಗೌರೀಶ್ ಮಾತನಾಡಿ, ಪ್ರಾಧ್ಯಾಪಕರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲು ಅರ್ಥ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಮುಂಬರುವ ಕೆಲವು ವರ್ಷಗಳ ಕಾಲ ನೂತನ ಶಿಕ್ಷಣ ನೀತಿಯ ಯಶಸ್ವಿಗೆ ಶ್ರಮಿಸ ಬೇಕು. ಬೇರೆ ಕಾಲೇಜುಗಳೊಡನೆ ಉತ್ತಮ ಸಂಪರ್ಕ ವಿಟ್ಟುಕೊಂಡು, ಪರಸ್ಪರ ಸಹಕಾರದಿಂದ ಶಿಕ್ಷಣದ ಪ್ರಗತಿಗೆ ಶ್ರಮಿಸಬೇಕು ಎಂದರು.
ಮಾರುತಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಗಂಗರಾಜು, ಎಚ್.ಎಚ್, ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ಜಗದೀಶ ನಡುವಿನ ಮಠ, ಸಂಚಾಲಕರಾದ ಶಿವಪ್ರಸಾದ್.ಬಿ.ಸಿ, ಡಾ.ಗುರುಮೂರ್ತಿ.ಕೆ.ಎಚ್ ಮಾತನಾಡಿದರು.ಕಾರ್ಯಾಗಾರ ಸಮಿತಿ ಸದಸ್ಯರಾದ ಪೊ›.ತಿಮ್ಮಹನುಮಯ್ಯ, ಪ್ರೊ.ಮಂಚಯ್ಯ, ಡಾ.ಸಿ.ಚಿದಾನಂದಸ್ವಾಮಿ,ಡಾ.ಎಲ್.ಭವಾನಿ, ಪ್ರೊ ವಿ.ಭಾಸ್ಕರ, ಚಲುವರಾಜು, ಪ್ರೊ.ಪದ್ಮಾ.ಟಿ, ಪ್ರೊ.ಅನಿಲ್‌ಕುಮಾರ್, ಪ್ರೊ.ಎ.ಚಂದ್ರ ಕಲಾ, ಎಚ್.ಸುಷ್ಮಾ, ಪಿ.ನಂಜುಂಡ, ಬಿ.ಚಂದ್ರಮೋಹನ್, ಪ್ರೊ.ವೀಣಾ , ಪ್ರೊ. ಸೀಮಾಕೌಸರ್, ಪ್ರೊ. ಜಿ. ವಿ. ಚಂದ್ರಪ್ರಭ, ಟಿ.ಎನ್.ರೂಪಶ್ರೀ, ಎಸ್.ಮಂಜು ನಾಥ್, ಪುಟ್ಟನರಸಿಂಹಮೂರ್ತಿ, ಪ್ರೊ. ಕೆ.ಪ್ರಿಯ ದರ್ಶನ್, ಉಮಾಶಂಕರ್ ವೇದಿಕೆಯಲ್ಲಿದ್ದರು.ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು. ರಾಜ್ಯದ ವಿವಿಧ ಕಾಲೇಜುಗಳಿಗೆ ಆಗಮಿಸಿದ್ದ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.